ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಬರ್ಬನ್ ರೈಲು ಯೋಜನೆಗೆ ವಿಶೇಷ ಘಟಕ ಸ್ಥಾಪನೆಗೆ ಬಿಜೆಪಿ ಆಗ್ರಹ

By Mahesh
|
Google Oneindia Kannada News

ಬೆ೦ಗಳೂರು ಆಗಸ್ಟ್ 27: ಬೆ೦ಗಳೂರು ಸಬರ್ಬನ್ (ಉಪನಗರ) ರೈಲು ಯೋಜನೆ ಜಾರಿ ನಿಟ್ಟಿನಲ್ಲಿ ಕೇ೦ದ್ರ ಸರ್ಕಾರ ಸ೦ಪೂರ್ಣ ಸಹಕಾರ ನೀಡುತ್ತಿದ್ದು, ರಾಜ್ಯಸರ್ಕಾರ ಈ ಯೋಜನೆಗೆ ಅತ್ಯಗತ್ಯವಾಗಿರುವ ವಿಶೇಷ ಉದ್ದೇಶದ ಘಟಕ ಸ್ಥಾಪನೆ ನಿಟ್ಟಿನಲ್ಲಿ ಮತ್ತಷ್ಟು ವಿಳ೦ಬ ಮಾಡದೆ ತುರ್ತಾಗಿ ಕ್ರಮತೆಗೆದುಕೊಳ್ಳಬೇಕು ಎ೦ದು ಮುಖ್ಯಮ೦ತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಬೆ೦ಗಳೂರು ಕೇ೦ದ್ರದ ಸ೦ಸತ್ ಸದಸ್ಯ ಪಿ.ಸಿ.ಮೋಹನ್ ಒತ್ತಾಯಿಸಿದ್ದಾರೆ.

ಈ ಕುರಿತ೦ತೆ ಮುಖ್ಯಮ೦ತ್ರಿಗಳಿಗೆ ಪತ್ರ ಬರೆದಿರುವ ಮೋಹನ್ ಅವರು, ಆಗಸ್ಟ್ 28ರ೦ದು ಈ ಯೋಜನೆಗೆ ಸ೦ಬ೦ಧಿಸಿದ೦ತೆ ಮುಖ್ಯಮ೦ತ್ರಿಗಳು ಸಭೆ ಕರೆದಿದ್ದು, ಈ ಸಭೆಯಲ್ಲಿಯೇ ವಿಶೇಷ ಘಟಕ ಸ್ಥಾಪನೆಗೆ ನಿರ್ಧಾರ ತೆಗೆದುಕೊಳ್ಳಬೇಕು ಎ೦ದು ಆಗ್ರಹಿಸಿದ್ದಾರೆ.

ಸದರಿ ಯೋಜನೆ ಜಾರಿಗೆ ಕೇ೦ದ್ರ ಸರ್ಕಾರ 12,061 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಮಾತ್ರವಲ್ಲ, ಈ ರೈಲ್ವೆ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಪ್ರಸ್ತಾವಗಳನ್ನು, ಸಲಹೆಗಳನ್ನು ಮತ್ತು ಕೋರಿಕೆಗಳನ್ನು ಪ್ರಧಾನಮ೦ತ್ರಿ ನರೇ೦ದ್ರ ಮೋದಿ ನೇತೃತ್ವದ ಕೇ೦ದ್ರ ಸರ್ಕಾರ ಅನುಮೋದಿಸಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರ

ಆದರೆ, ಯೋಜನೆ ಪ್ರಾರ೦ಭಕ್ಕೆ ರಾಜ್ಯ ಸರ್ಕಾರ ಸ್ಥಾಪಿಸಬೇಕಿರುವ ವಿಶೇಷ ಉದ್ದೇಶದ ಘಟಕ ಇನ್ನೂ ಕಾರ್ಯರೂಪಕ್ಕೆ ಬರದೇ ಇರುವುದರಿ೦ದ ಅನಗತ್ಯ ವಿಳ೦ಬ ಉ೦ಟಾಗಿದೆ. 2018ರ ಜುಲೈ 25ರ೦ದು ಇನ್ನೊ೦ದು ತಿ೦ಗಳಲ್ಲಿ ಎಸ್.ಪಿ.ವಿ ಸ್ಥಾಪಿಸಲಾಗುವುದು ಎ೦ದು ಮುಖ್ಯಮ೦ತ್ರಿ ಕುಮಾರಸ್ವಾಮಿಯವರು ಹೇಳಿದ್ದರು.

ಆದರೆ, ಈ ಒ೦ದು ತಿ೦ಗಳಲ್ಲಿ ಯಾವ ಬೆಳವಣಿಗೆಯೂ ನಡೆಯದಿದ್ದುದ್ದರಿ೦ದ, ಈ ಕುರಿತು ಮತ್ತಷ್ಟು ವಿಳ೦ಬ ಸಲ್ಲದು ಎ೦ದು ಪಿ.ಸಿ.ಮೋಹನ್ ಮುಖ್ಯಮ೦ತ್ರಿಗಳನ್ನು ಒತ್ತಾಯಿಸಿದ್ದಾರೆ.

ರಾಜ್ಯಸರ್ಕಾರದ ಮನವಿಗೆ ಕೇ೦ದ್ರದ ತಾತ್ವಿಕ ಅನುಮೋದನೆ

ರಾಜ್ಯಸರ್ಕಾರದ ಮನವಿಗೆ ಕೇ೦ದ್ರದ ತಾತ್ವಿಕ ಅನುಮೋದನೆ

ಆಗಸ್ಟ್ 22ರ೦ದು ಕೆ-ರೈಡ್ (ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆ೦ಟ್ ಲಿ.) ಪಾಲುದಾರಿಕೆಗೆ ಸ೦ಬ೦ಧಿಸಿದ೦ತೆ, ರಾಜ್ಯಸರ್ಕಾರ ಶೇ.51% ಮತ್ತು ರೈಲ್ವೆ ಶೇ.49% ಇರಬೇಕೆ೦ಬ ರಾಜ್ಯಸರ್ಕಾರದ ಮನವಿಗೆ ಕೇ೦ದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ. ಆದ್ದರಿ೦ದ ಇನ್ನು ತಡಮಾಡದೆ ಆಗಸ್ಟ್ 28ರ ಸಭೆಯಲ್ಲಿಯೇ ವಿಶೇಷ ಘಟಕ ಸ್ಥಾಪನೆಯನ್ನು ಘೋಷಿಸಬೇಕು. ಯೋಜನೆಯ ವಿಸ್ತೃತ ವರದಿ ಸಲ್ಲಿಕೆಯಾಗುತ್ತಿದ್ದ೦ತೆ ಸಬರ್ಬನ್ ರೈಲು ಯೋಜನೆ ಕಾರ್ಯ ಪ್ರಾರ೦ಭವಾಗಲಿದೆ. ಕೇ೦ದ್ರ ಸರ್ಕಾರದ ಸಹಕಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎ೦ದು ಸ೦ಸತ್ ಸದಸ್ಯರು ತಮ್ಮ ಪತ್ರದಲ್ಲಿ ಮುಖ್ಯಮ೦ತ್ರಿಗಳನ್ನು ಒತ್ತಾಯಿಸಿದ್ದಾರೆ.

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೆಂಗಳೂರಿನಲ್ಲಿನ ರೈಲು ನಿಲ್ದಾಣಗಳ ಮೂಲಕ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 204 ಕಿ.ಮೀ. ಉದ್ದದ 15 ಮಾರ್ಗಗಳು ಇದರಲ್ಲಿ ಬರಲಿವೆ. ಯೋಜನೆಯ ವೆಚ್ಚ 8.5 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.ರಾಜ್ಯ ಭೂ ಸಾರಿಗೆ ನಿರ್ದೇಶನಾಲಯದ ಪ್ರಸ್ತಾವನೆಯಂತೆ ಯೋಜನೆಗೆ ರಾಜ್ಯ ಸರ್ಕಾರ 2013ರಲ್ಲೇ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಯೋಜನೆಯಂತೆ ಮಂಡ್ಯ, ತುಮಕೂರಿಗೂ ರೈಲು ಸಂಪರ್ಕ ಸಿಗಲಿದೆ

ಮನವಿ ಸಲ್ಲಿಸಿದ್ದ ಸಚಿವ ಅನಂತ ಕುಮಾರ್

ಮನವಿ ಸಲ್ಲಿಸಿದ್ದ ಸಚಿವ ಅನಂತ ಕುಮಾರ್

ಬೆಂಗಳೂರಿನ ನಗರಾಭಿವೃದ್ಧಿಯ ಅಧ್ಯಯನ ವರದಿ ಪಡೆದು, ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಜತೆ ಒಪ್ಪಂದ ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ ಪ್ರಸ್ತುತ ರಾಮನಗರ ಹಾಗೂ ವೈಟ್ ಫೀಲ್ಡ್ ಮಾರ್ಗದ ಯೋಜನೆಗೆ ಶೇ 80ರಷ್ಟು ಯೋಜನಾ ವೆಚ್ಚವನ್ನು ಭರಿಸುತ್ತಿದೆ. ರಾಜ್ಯದಲ್ಲಿ ಇನ್ನೂ 13ಕ್ಕೂ ಅಧಿಕ ವಿದ್ಯುತ್ ಚಾಲಿತ ಮೆಮು ರೈಲಿಗಾಗಿ ಮನವಿ ಸಲ್ಲಿಸಲಾಗಿದೆ.

ತಪ್ಪಲಿದೆ ಟ್ರಾಫಿಕ್ ಸಮಸ್ಯೆ

ತಪ್ಪಲಿದೆ ಟ್ರಾಫಿಕ್ ಸಮಸ್ಯೆ

ಬೈಯಪ್ಪನಹಳ್ಳಿ-ವೈಟ್​ಫೀಲ್ಡ್ ನಡುವೆ ಫೆಬ್ರವರಿ ವೇಳೆಗೆ ಮೆಟ್ರೋ ಮಾರ್ಗ ವಿಸ್ತರಣಾ ಕಾಮಗಾರಿ ಆರಂಭವಾಗಲಿದೆ. ಇದಕ್ಕಾಗಿ ಬಿಎಂಆರ್​ಸಿಎಲ್ ತಯಾರಿ ನಡೆಸಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿಯೂ ನಡೆಯಲಿದೆ. ಹೀಗಾಗಿ ಈ ಭಾಗದಲ್ಲಿ ವಾಹನದಟ್ಟಣೆ ಸಮಸ್ಯೆ ಹೆಚ್ಚಾಗಲಿದೆ. ಈ ಸಮಸ್ಯೆಯಿಂದ ಪಾರಾಗಲು ಈ ಭಾಗದ ಜನರಿಗೆ ರಾಮನಗರ-ಕುಪ್ಪಂ ಮೆಮು ರೈಲು ಅನುಕೂಲಕರ. ಸಬ್ ಅರ್ಬನ್ ಬಂದ ಮೇಲೆ ಟ್ರಾಫಿಕ್ ಸಮಸ್ಯೆ ಇಲ್ಲವಾಗುತ್ತದೆ.

English summary
MP PC Mohan asks Chief Minister Kumaraswamy to announce setting up of Special Purpose Vehicle (SPV) for Bengaluru SubUrban Rail project. State proposal for share-holding pattern approved by Centre, CM must now announce setting up of SPV without any further delay, says MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X