ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಸಂಸದರ ನಿಧಿ ಬಳಕೆ: ಸದಾನಂದಗೌಡರೇ ನಂಬರ್ ಒನ್

|
Google Oneindia Kannada News

Recommended Video

Lok Sabha Elections 2019 : ಯಾಕೆ ಡಿ.ವಿ.ಸದಾನಂದಗೌಡ್ರು ನಂಬರ್ ಒನ್ ಗೊತ್ತಾ? | Oneindia Kannada

ಬೆಂಗಳೂರು, ಏ.5:ಬೆಂಗಳೂರು ಕೇಂದ್ರ, ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳ ಸಂಸದರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಟ್ಟ 60 ಕೋಟಿ ರೂ ಪೈಕಿ 55.53 ಕೋಟಿ ರೂ ಬಳಕೆಯಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ಉತ್ರ ಕ್ಷೇತ್ರದಲ್ಲಿ ಮಾತ್ರ ಅನುದಾನ ಸಂಪೂರ್ಣವಾಗಿ ಖರ್ಚಾಗಿವೆ. ಈ ಕುರಿತ ವಿವಿರಗಳನ್ನು ಬಿ-ಪ್ಯಾಕ್ ಪ್ರಕಟಿಸಿದೆ. ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆಗಳಿಗೆ ಶೇ.25.95, ರಸ್ತೆ ಮೊದಲಾದ ಮೂಲಸೌಕರ್ಯ ಅಭಿವೃದ್ಧಿಗೆ ಶೇ.12.62, ಸಾರ್ವಜನಿಕ ಸೌಕರ್ಯ ಅಭಿವೃದ್ಧಿಗೆ ಶೇ.10.78ರಷ್ಟು ಅನುದಾನ ಬಳಕೆಯಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಮಗ್ರ ಚಿತ್ರಣ

ಪ್ರತಿ ಕ್ಷೇತ್ರಕ್ಕೆ ವರ್ಷಕ್ಕೆ ಐದು ಕೋಟಿ ರೂನಂತೆ ಮೂರು ಕ್ಷೇತ್ರಗಳ ಸಂಸದರ ನಿಧಿಗೆ ನಾಲ್ಕು ವರ್ಷಗಳಲ್ಲಿ 20 ಕೋಟಿ ರೂ ದೊರೆತಿದೆ. ಇದರಲ್ಲಿ ಉತ್ತರ ಕ್ಷೇತ್ರದಲ್ಲಿ ಮಾತ್ರ ಅನುದಾನ ಸಂಪೂರ್ಣವಾಗಿ ಬಳಕೆಯಾಗಿದೆ. ದಕ್ಷಿಣದಲ್ಲಿ ಶೇ.82 ಹಾಗೂ ಕೇಂದ್ರದಲ್ಲಿ ಶೇ.95 ರಷ್ಟು ಅನುದಾನ ಬಳಕೆಯಾಗಿದೆ.

MP expenditure in bengaluru sadananda gowda tops

ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ದೊರೆತ ಅನುದಾನ 20 ಕೋಟಿ ಬಳಕೆಯಾದ ಅನುದಾನ-16.44 ಕೋಟಿ , ಉತ್ತರ ಲೋಕಸಭಾ ಕ್ಷೇತ್ರ-20 ಕೋಟಿ ಒಟ್ಟು ಅನುದಾನ, ಅದರಲ್ಲಿ 20.04 ಕೋಟಿ ಬಳಕೆಯಾಗಿದೆ. ಕೇಂದ್ರದಲ್ಲಿ ನೀಡಿದ 20 ಕೋಟಿಯಲ್ಲಿ 19.05 ಕೋಟಿಯಷ್ಟು ಅನುದಾನ ಬಳಕೆಯಾಗಿದೆ.

English summary
The three Members of Parliament of Bengaluru spent Rs55.53 crore out of their combined total of Rs 60 crore from the MP Local Area Development Funds allocated to them between 2014 and 2018, according to a report by Bangalore Political Action Committee (B.PAC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X