ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಆಸ್ಪತ್ರೆಗಾಗಿ ಮಾಜಿ ಸೈನಿಕರಿಂದ ‘ಸೈನಿಕ್ ಫಾರ್ ಡಾಕ್ಟರ್ಸ್’

|
Google Oneindia Kannada News

ಬೆಂಗಳೂರು, ಜುಲೈ 20: ನಿವೃತ್ತ ಯೋಧರೇ ನಿರ್ವಹಿಸುವ ಮೊಟ್ಟಮೊದಲ ಹಂಚಿಕೆಯ ಸಂಚಾರ ಪರಿಹಾರ ಸೇವಾ ವ್ಯವಸ್ಥೆಯಾದ ಮದರ್‍ಪಾಡ್ ಇನ್ನೊವೇಟಿಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ "ಸೈನಿಕ್ ಫಾರ್ ಡಾಕ್ಟರ್ಸ್' ಈ ವಿಶಿಷ್ಟ ಉಪಕ್ರಮಕ್ಕೆ ಚಾಲನೆ ನೀಡಲಾಗಿದೆ.

Recommended Video

Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

'ಸೈನಿಕ್ ಫಾರ್ ಡಾಕ್ಟರ್ಸ್' ಕೋವಿಡ್-19 ಆರೋಗ್ಯ ಕಾರ್ಯಕರ್ತರ ಸಂಚಾರಕ್ಕಾಗಿಯೇ ಇರುವ ವಿಶಿಷ್ಟ ವ್ಯವಸ್ಥೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‍ನಲ್ಲಿ ಇಂದು ಆರಂಭವಾಗಿರುವ ಈ ಸೌಲಭ್ಯವನ್ನು ಪಡೆಯಲು ಆರೋಗ್ಯ ಸೇವಾ ಸಂಸ್ಥೆಗಳು ಮದರ್‍ಪಾಡ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಬಹುದು.

ಬೆಂಗಳೂರು ದಕ್ಷಿಣದಲ್ಲಿ 2,014 ಸಕ್ರಿಯ ಕಂಟೈನ್ಮೆಂಟ್ ಝೋನ್ಬೆಂಗಳೂರು ದಕ್ಷಿಣದಲ್ಲಿ 2,014 ಸಕ್ರಿಯ ಕಂಟೈನ್ಮೆಂಟ್ ಝೋನ್

ಈ ವ್ಯವಸ್ಥೆಯಡಿ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ಆಸ್ಪತ್ರೆಗಳಿಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ಸುರಕ್ಷಿತವಾಗಿ, ನಿವೃತ್ತ ಯೋಧರ ಬೆಂಗಾವಲು ವಾಹನದೊಂದಿಗೆ ಕರೆದೊಯ್ಯಲಾಗುತ್ತದೆ. ಮದರ್‍ಪಾಡ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಆರೋಗ್ಯ ಸೇವಾ ಸಂಸ್ಥೆಗಳು www.motherpod.org ಗೆ ಲಾಗ್‍ಇನ್ ಮಾಡಬಹುದಾಗಿದೆ ಅಥವಾ +917676175174ಗೆ ಕರೆ ಮಾಡಬಹುದಾಗಿದೆ.

ಈ ವಿಶಿಷ್ಟ ಉಪಕ್ರಮದ ಮೂಲಕ ಮದರ್‍ಪಾಡ್, ಸುರಕ್ಷಿತ, ಸುಭದ್ರ ಮತ್ತು ಶುಚಿತ್ವದ ಸಂಚಾರ ಸೇವೆಯನ್ನು ಒದಗಿಸಲು ಬದ್ಧವಾಗಿದೆ. ಇದು ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣ ಮನಃಶಾತಿಯ ಸಂಚಾರ ವ್ಯವಸ್ಥೆಯನ್ನು ಒದಗಿಸಲಿದೆ. ದೇಶಕ್ಕಾಗಿ ಜೀವನ ಪರ್ಯಂತ ಸೇವೆ ಸಲ್ಲಿಸುವ ಸಂಬಂಧ ಕೈಗೊಂಡ ಪ್ರತಿಜ್ಞೆಗೆ ಅನುಗುಣವಾಗಿ ಈ ಸೈನಿಕರು ದೇಶದ ಆರೋಗ್ಯ ಕಾರ್ಯಕರ್ತರು ತಮ್ಮ ದೈನಂದಿನ ಕರ್ತವ್ಯಗಳನ್ನು ತಮ್ಮ ವೈಯಕ್ತಿಕ ಕ್ಷೇಮದ ಬಗ್ಗೆ ಯಾವುದೇ ಭೀತಿ ಅಥವಾ ಭಯ ಇಲ್ಲದೇ ನಿರ್ವಹಿಸಲು ಅನುವು ಮಾಡಿಕೊಡಲಿದ್ದಾರೆ.

ಸೈನಿಕ್ ಫಾರ್ ಡಾಕ್ಟರ್ಸ್ ಕಾರ್ಯ ನಿರ್ವಹಣೆ

ಸೈನಿಕ್ ಫಾರ್ ಡಾಕ್ಟರ್ಸ್ ಕಾರ್ಯ ನಿರ್ವಹಣೆ

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಮುನ್ಪಡೆ ಆರೋಗ್ಯ ಕಾರ್ಯಕರ್ತರು ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದು, ಇದನ್ನು ನಿವಾರಿಸಲು ಮದರ್‍ಪಾಡ್ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಮತ್ತು ಸುರಕ್ಷಾ ಶಿಷ್ಟಾಚಾರಗಳನ್ನು ಅನುಸರಿಸಲಿದೆ. ಉದಾಹರಣೆಗೆ, ಪ್ರತಿ ಟ್ರಿಪ್‍ನಲ್ಲಿ ಗರಿಷ್ಠ ಇಬ್ಬರು ಕಾರ್ಯಕರ್ತರನ್ನು ಮಾತ್ರ ಕರೆದೊಯ್ಯಲಿದೆ. ಪ್ರತಿ ವಾಹನದಲ್ಲೂ ಅತ್ಯುನ್ನತ ಗುಣಮಟ್ಟದ ಸಂಪೂರ್ಣ ಸುರಕ್ಷಿತ ಆಕ್ರಿಲಿಕ್ ವಿಭಾಗೀಕರಣ ಮಾಡಲಾಗಿದೆ. ಇದರ ಜತೆಗೆ ಏಕ ಬಳಕೆಯ ಪಿಪಿಇ
ಕಿಟ್ ಹಾಗೂ ಕೈಗವಸು, ಸ್ಯಾನಿಟೈಸರ್ ಮತ್ತು ಮಾಸ್ಕ್‍ಗಳನ್ನು ಪ್ರತಿ ಪ್ರಯಾಣಿಕರಿಗೂ ಪ್ರಯಾಣ ಆರಂಭಕ್ಕೆ ಮುನ್ನ ನೀಡಲಾಗುತ್ತದೆ. ಪ್ರತಿ ಪ್ರಯಾಣಕ್ಕೂ ವಾಹನದ ಒಳಭಾಗವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ.

ಕ್ಯಾಪ್ಟನ್ ಸಂಜಯ್ ಕುಮಾರ್ ಹೇಳಿಕೆ

ಕ್ಯಾಪ್ಟನ್ ಸಂಜಯ್ ಕುಮಾರ್ ಹೇಳಿಕೆ

ಕಂಪನಿಯ ಈ ಉಪಕ್ರಮದ ಬಗ್ಗೆ ಮಾಹಿತಿ ನೀಡಿದ ಮದರ್‍ಪಾಡ್ ಸಂಸ್ಥೆಯ ಪಾಲುದಾರಿಕೆ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಸಂಜಯ್ ಕುಮಾರ್ ಸಿಂಗ್, "ಮದರ್‍ಪಾಡ್ ವೈವಿಧ್ಯಮಯ ಶ್ರೇಣಿಯ ತಂತ್ರಜ್ಞಾನ ಚಾಲಿತ ಸಂಚಾರ ಪರಿಹಾರವನ್ನು ಒದಗಿಸುತ್ತದೆ. ನಮ್ಮ ಮೊದಲ ಉಪಕ್ರಮವಾಗಿ "ಸೈನಿಕ್ ಫಾರ್ ಡಾಕ್ಟರ್ಸ್' ಆರಂಭಿಸಲು ನಮಗೆ ಅತೀವ ಸಂತಸವಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ನಂತರದ ಯುಗದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳು ಮತ್ತು ಗುಣಮಟ್ಟದ ಸುರಕ್ಷಾ ಕ್ರಮಗಳು ಸುರಕ್ಷಿತ ಪ್ರಯಾಣಕ್ಕೆ ಅನಿವಾರ್ಯವಾಗಲಿವೆ. ಅದು ಆರೋಗ್ಯ ಕಾರ್ಯಕರ್ತರಿಗೆ ಮಾತ್ರವಾಗಿರದೇ ವಹಿವಾಟು ಅಥವಾ ಮನೋರಂಜನೆಗಾಗಿ ಪ್ರಯಾಣ ಮಾಡುವ ಜನಸಾಮಾನ್ಯರಿಗೂ ಅನ್ವಯಿಸುತ್ತದೆ. ನಿವೃತ್ತ ಯೋಧರು ಈ ಸವಾಲನ್ನು ಎದುರಿಸಲು ಸಮರ್ಥರು. ಏಕೆಂದರೆ ಅವರಿಗೆ ಅತ್ಯುನ್ನತ ದರ್ಜೆಯ ಗುಣಮಟ್ಟ ಮತ್ತು ಸುರಕ್ಷಾ ಶಿಷ್ಟಾಚಾರದ ಬಗ್ಗೆ ತರಬೇತಿ ಹಾಗೂ ಶಿಸ್ತನ್ನು ನೀಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಮದರ್‍ಪಾಡ್, ತನ್ನ ಸೈನಿಕ ಸಮುದಾಯವನ್ನು ಮತ್ತಷ್ಟು ವಿಸ್ತರಿಸಲಿದ್ದು, ಹಲವು ಮಂದಿ ನಿವೃತ್ತ ಯೋಧರಿಗೆ ತಮ್ಮ ವೃತ್ತಿಯನ್ನು ಮುಂದುವರಿಸಲು ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡಲಿದೆ" ಎಂದು ಹೇಳಿದರು.

'ಕೊರೊನಾ ಅವ್ಯವಹಾರ ತನಿಖೆಗೆ ಸದನ ಸಮಿತಿ ರಚನೆ ಮಾಡಲಿ''ಕೊರೊನಾ ಅವ್ಯವಹಾರ ತನಿಖೆಗೆ ಸದನ ಸಮಿತಿ ರಚನೆ ಮಾಡಲಿ'

ಕೇಂದ್ರ ರಕ್ಷಣಾ ಸಚಿವಾಲಯಗಳ ಜತೆ ಒಪ್ಪಂದ

ಕೇಂದ್ರ ರಕ್ಷಣಾ ಸಚಿವಾಲಯಗಳ ಜತೆ ಒಪ್ಪಂದ

ಮಾಜಿ ಸೈನಿಕರಿಗೆ ಕೌಶಲ್ಯ ಒದಗಿಸುವುದು, ಪುನರ್ವಸತಿ ಮತ್ತು ವಿತ್ತೀಯ ಸೇರ್ಪಡೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಮದರ್‍ಪಾಡ್ ಕೇಂದ್ರೀಯ ಸೈನಿಕರ ಮಂಡಳಿ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ನಿವೃತ್ತ ಯೋಧರಿಗೆ ಮರು ಕೌಶಲ್ಯ ಒದಗಿಸುವ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.

ಮದರ್‍ಪಾಡ್ ಅತ್ಯಾಧುನಿಕ ಸೈನಿಕ್ ನಿಯಂತ್ರಣ ಕೊಠಡಿಯನ್ನು ಹೊಂದಿದ್ದು, ಜತೆಗೆ ಸೈನಿಕರೇ ನಿರ್ವಹಿಸುವ ಹೆಲ್ತ್‍ಲೈನ್ ಸೌಲಭ್ಯವನ್ನೂ ಹೊಂದಿದೆ. ಸಂಚಾರದಲ್ಲಿರುವ ಎಲ್ಲ ವಾಹನಗಳ ಮೇಲೂ ಕಣ್ಗಾವಲು ಇರಿಸಲಾಗಿದ್ದು, ದೇಶಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ಕಮಾಂಡ್ ಸೆಂಟರ್‍ಗಳ ಮೂಲಕ ನಿಗಾ ಇಡಲಾಗುತ್ತದೆ. ಮದರ್‍ಪಾಡ್‍ನ ಕಾರ್ಪೊರೇಟ್ ಸಂಚಾರ ಪರಿಹಾರವು, ಆಸ್ಪತ್ರೆಗಳು, ಸರ್ಕಾರಿ ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಆತಿಥ್ಯ ಉದ್ಯಮದ ಮೇಲೆ ಗಮನ ಹರಿಸಲಿದೆ.

ಮದರ್‍ಪಾಡ್ ಇನ್ನೊವೇಶನ್ಸ್

ಮದರ್‍ಪಾಡ್ ಇನ್ನೊವೇಶನ್ಸ್

ಮದರ್‍ಪಾಡ್ ಇನ್ನೊವೇಶನ್ಸ್ ಪ್ರೈವೇಟ್ ಲಿಮಿಟೆಡ್ ಒಂದು ಬೆಂಗಳೂರು ಮೂಲದ ಹಂಚಿಕೆಯ ಸಂಚಾರ ಪರಿಹಾರ ಸೌಲಭ್ಯವಾಗಿದ್ದು, ಇದನ್ನು ನಿವೃತ್ತ ಸೈನಿಕರೇ ನಿರ್ವಹಿಸುತ್ತಾರೆ. ಮಾಜಿ ಸೈನಿಕರ ಪುನರ್ವಸತಿ ಮತ್ತು ಅವರ ಕಲ್ಯಾಣವನ್ನು ಮೂಲ ಉದ್ದೇಶವಾಗಿ ಹೊಂದಿದ ಮೊಟ್ಟಮೊದಲ ಸಂಚಾರ ವ್ಯವಸ್ಥೆ ಇದಾಗಿರುತ್ತದೆ.

ಮುಂದಿನ ಮೂರು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ನಿವೃತ್ತ ಯೋಧರಿಗೆ ಮರು ಕೌಶಲ ಒದಗಿಸುವ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದೊಂದಿಗೆ ಮದರ್‍ಪಾಡ್ ಹಲವಾರು ರಕ್ಷಣಾ ಸಂಸ್ಥೆಗಳ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮೂಲಕ ಮಾಜಿ ಯೋಧರನ್ನು ಸಬಲೀಕರಿಸಲು ನಿರ್ಧರಿಸಿದೆ.

“ಡ್ರೈವ್ ಟೂ ಡೂ ಬೆಟರ್” ಎಂಬ ಧ್ಯೇಯವಾಕ್ಯ

“ಡ್ರೈವ್ ಟೂ ಡೂ ಬೆಟರ್” ಎಂಬ ಧ್ಯೇಯವಾಕ್ಯ

"ಡ್ರೈವ್ ಟೂ ಡೂ ಬೆಟರ್" ಎಂಬ ಧ್ಯೇಯವಾಕ್ಯದೊಂದಿಗೆ ಮದರ್‍ಪಾಡ್, ನೈಜ ವೈಯಕ್ತಿಕ ಉದ್ಯಮಶೀಲತೆಗೆ ಗಮನ ಹರಿಸಲಿದ್ದು, ನೈತಿಕ, ಸಾಹಸಯಕ್ತ, ಶಿಸ್ತುಬದ್ಧ ಮತ್ತು ಮಾನವೀಯ ಮೌಲ್ಯಗಳ ಆಧಾರದಲ್ಲಿ ರೂಪಿತವಾದ ಸಂಸ್ಥೆಯನ್ನು ಕಟ್ಟುವ ಉದ್ದೇಶ ಹೊಂದಿದೆ. ಇದು ಮಾಜಿ ಸೈನಿಕರಿಗೆ ಹಾಗೂ ವಿಸ್ತೃತವಾಗಿ ಸಮಾಜಕ್ಕೆ ಪ್ರಯೋಜನವಾಗಲಿದೆ.

‘ಗ್ರೋಥ್ ಥ್ರೂ ಮೊಬಿಲಿಟಿ' ಗುರಿಯನ್ನು ತಲುಪುವ ಸಲುವಾಗಿ ಸೂಕ್ತ ತಂತ್ರಜ್ಞಾನವನ್ನು ಬಳಸಿಕೊಂಡು, ಮದರ್‍ಪಾಡ್, ಮಾಜಿ ಸೈನಿಕರ ಆರ್ಥಿಕ ಸೇರ್ಪಡೆಯ ಅವಕಾಶಗಳನ್ನು ವಿಸ್ತರಿಸಲಿದ್ದು, ಅವರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶ ಹೊಂದಿದೆ. ಈ ವ್ಯಕ್ತಿಗಳು ಉದ್ಯಮಶೀಲರಾಗಲು ಮದರ್‍ಪಾಡ್ ನೆರವಾಗಲಿದ್ದು, ಗೌರವಯುತ ಮತ್ತು ವಿತ್ತೀಯವಾಗಿ ಸುಭದ್ರ ಬದುಕನ್ನು ಅನಾವರಣಗೊಳಿಸಲಿದೆ. ಕಾರ್ಪೊರೇಟ್ ಸಂಚಾರ ಪರಿಹಾರ ಕ್ಷೇತ್ರದಲ್ಲಿ ತನ್ನ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಸೌಲಭ್ಯವನ್ನು ತಂತ್ರಜ್ಞಾನದ ನೆರವಿನೊಂದಿಗೆ ಒದಗಿಸಲಿದೆ.

ಕರ್ನಾಟಕದಲ್ಲಿ ಶಾಲೆ ಪುನಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಕರ್ನಾಟಕದಲ್ಲಿ ಶಾಲೆ ಪುನಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

English summary
MotherPod today launched ‘Sainik for Doctors’, a dedicated service for COVID-19 health workers. As part of this initiative, MotherPod will ferry doctors and other health workers to their hospitals and back home in vehicles piloted by ex-military servicemen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X