ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿ, ಮಗಳು ಮತ್ತು ಪಾಸ್: ಲಾಕ್‌ಡೌನ್‌ನಲ್ಲಿ ಬೆಂಗಳೂರಿನ ಭಾವನಾತ್ಮಕ ಘಟನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಅತ್ತ ಆಸ್ಪತ್ರೆಯ ಬೆಡ್‌ ಮೇಲೆ ತಾಯಿ ನರಳಾಟ. ಇತ್ತ ಮನೆಯಲ್ಲಿ ಮಗಳ ಸಂಕಟ. ತಾಯಿ ತನ್ನ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ. ಈ ಸಮಯದಲ್ಲಿ ಮಗಳು ತನ್ನ ಜೊತೆಗೆ ಇರಬೇಕು ಎನ್ನುವುದು ಆಕೆಯ ಆಸೆಯಾಗಿದೆ. ಅಮ್ಮನನ್ನು ನೋಡುವ ಹಂಬಲ ಮಗಳಿಗೂ ಹೆಚ್ಚಿದೆ. ಆದರೆ, ಈ ತಾಯಿ, ಮಗಳ ಭೇಟಿಗೆ ಮುಖ್ಯವಾಗಿ ಒಂದು 'ಪಾಸ್' ಬೇಕಾಗಿದೆ.

Recommended Video

Tribes life in Quarantine Days | ಲಾಕ್ ಡೌನ್ ನಿಂದ ಬಳಲುತ್ತಿದ್ದಾರೆ ಬುಡಕಟ್ಟು ಜನ | Oneindia Kannada

ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಪೊಲೀಸರು ಪಾಸ್‌ ವಿತರಣೆ ಮಾಡುತ್ತಿದ್ದಾರೆ. ಲಾಕ್‌ಡೌನ್ ಇರುವ ಕಾರಣ ಜನರ ಓಡಾಟಕ್ಕೆ ಬ್ರೇಕ್ ಹಾಕಿದ್ದು, ತೀರ ಅಗತ್ಯ ಇರುವಾಗ ಮಾತ್ರ ಪೊಲೀಸ್‌ರಿಂದ ಪಾಸ್‌ ಪಡೆದು ಸಾರ್ವಜನಿಕರು ರಸ್ತೆಗೆ ಇಳಿಯಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ತನಗೊಂದು ಪಾಸ್‌ ಬೇಕೆಂದು ಮಹಿಳೆಯೊಬ್ಬರು ಪೊಲೀಸರಿಗೆ ಮನವಿ ಮಾಡುತ್ತಾರೆ.

ತನ್ನ ಮಗುವಿಗಿಂತ ರೋಗಿಗಳು ಮುಖ್ಯ ಎಂದ ಬೆಂಗಳೂರಿನ ನರ್ಸ್ತನ್ನ ಮಗುವಿಗಿಂತ ರೋಗಿಗಳು ಮುಖ್ಯ ಎಂದ ಬೆಂಗಳೂರಿನ ನರ್ಸ್

ಹೇಗೋ...ಮಗಳಿಗೆ ಪಾಸ್‌ ಸಿಕ್ತು. ತಾಯಿ ಮಗಳ ಭೇಟಿಯೂ ಆಯ್ತು. ಆದರೆ, ಆ ನಂತರ ಏನಾಯ್ತು?. ಈ ಘಟನೆಯನ್ನು ಐಜಿಪಿ ಡಿ ರೂಪ ವಿವರಿಸಿದ್ದಾರೆ. ಈ ಘಟನೆ ಅವರ ಕಣ್ಣು ತೇವ ಆಗುವಂತೆ ಮಾಡಿದೆ. ಎಲ್ಲರಿಗೂ ಒಂದು ಕ್ಷಣ ಭಾವುಕವಾಗುವಂತೆ ಮಾಡುವ ಘಟನೆಯಾಗಿದೆ.

ಡಿ ರೂಪರಿಂದ ಪಾಸ್‌ ಪಡೆದ ಮಹಿಳೆ

ತಾಯಿಯನ್ನು ನೋಡಲು ಪಾಸ್‌ ಅವಶ್ಯಕತೆ ಇದ್ದ ಬೆಂಗಳೂರಿನ ಮಹಿಳೆ ಐಜಿಪಿ ಡಿ ರೂಪರನ್ನು ಸಂಪರ್ಕ ಮಾಡುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ರೂಪ, ಡಿಸಿಪಿ ಶರಣಪ್ಪ ಅವರಿಂದ ಪಾಸ್‌ ಸಿಗುವ ವ್ಯವಸ್ಥೆ ಮಾಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಪಾಸ್ ಆಕೆಯ ಕೈ ಸೇರುತ್ತದೆ. ಪಾಸ್ ಪಡೆದ ಮಗಳು ತಂದೆಯೊಂದಿಗೆ ಸಿಟಿ ಆಸ್ಪತ್ರೆಗೆ ಹೋಗುತ್ತಾರೆ. ಅಂತು ತಾಯಿಯನ್ನು ಭೇಟಿ ಮಾಡುತ್ತಾರೆ.

ಕ್ಯಾನ್ಸರ್‌ನಿಂದ ತಾಯಿ ಕೊನೆಯುಸಿರು

ಕ್ಯಾನ್ಸರ್‌ನಿಂದ ತಾಯಿ ಕೊನೆಯುಸಿರು

ತಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುತ್ತಾರೆ. ಕ್ಯಾನ್ಸರ್‌ ಕೊನೆಯ ಹಂತದಲ್ಲಿ ಇರುತ್ತದೆ. ತಾಯಿಯ ಕೊನೆಯ ದಿನಗಳಲ್ಲಿ ಮಗಳು ಆಕೆಯ ಜೊತೆಗೆ ಇರುತ್ತಾರೆ. ಇನ್ನು ಕೆಲವೇ ಕೆಲವು ದಿನಗಳ ಮಾತ್ರ ಆಕೆ ಉಳಿಯುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಅದರಂತೆಯೇ, ಕೆಲವು ದಿನಗಳ ಬಳಿಕ ತಾಯಿ ಕೊನೆಯುಸಿರೆಳೆಯುತ್ತಾರೆ. ಜೀವ ಕೊಟ್ಟ ತಾಯಿಯ, ಜೀವ ಹೋಗುವ ಸಮಯದಲ್ಲಿ ನಾನು ಜೊತೆಗಿದ್ದೆ ಎನ್ನುವ ತೃಪ್ತಿ ಮಗಳಲ್ಲಿ ಉಳಿದಿದೆ.

ಒಂದು ತಿಂಗಳ ಮಗು ಜೊತೆ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿಒಂದು ತಿಂಗಳ ಮಗು ಜೊತೆ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ

ತಕ್ಷಣವೇ ಪಾಸ್‌ ವಾಪಸ್ ನೀಡಿದ ಮಹಿಳೆ

ತಕ್ಷಣವೇ ಪಾಸ್‌ ವಾಪಸ್ ನೀಡಿದ ಮಹಿಳೆ

ತಾಯಿ ಮರಣ ಹೊಂದಿದ ನೋವು ಇದ್ದರೂ, ಅದರ ನಡುವೆ ಆಕೆ ಪಾಸ್‌ ವಾಪಸ್ ನೀಡಿದ್ದಾರೆ. ಸರಿಯಾದ ಸಮಯಕ್ಕೆ ಪಾಸ್‌ ನೀಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ತನ್ನ ರೀತಿಯೇ ಎಷ್ಟೋ ಜನರಿಗೆ ಈ ಪಾಸ್‌ ಅಗತ್ಯ ಇರಬಹುದು ಎಂದು ಅರಿತ ಆ ಮಹಿಳೆ, ತಮ್ಮ ನೋವಿನ ಪರಿಸ್ಥಿತಿಯಲ್ಲಿಯೂ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಬಂದು ಪಾಸ್ ಹಿಂದಿರುಗಿಸಿದ್ದಾರೆ. ಮಹಿಳೆಯ ಕಾರ್ಯಕ್ಕೆ ಡಿ ರೂಪ ಹೃದಯ ತುಂಬಿದೆ.

ಪೊಲೀಸರಿಗೆ ಮಹಿಳೆ ಧನ್ಯವಾದ

''ಹಾಯ್ ಮಾಮ್, ನನ್ನ ತಾಯಿ ಆಸ್ಪತ್ರೆಯಲ್ಲಿ ಹೋದರು. ನಾನು ಪಾಸ್ ಅನ್ನು ಹಿಂದಿರುಗಿಸಿದೆ. ಪಾಸ್ ಪಡೆಯಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಅವಳ ಜೀವನದ ಕೊನೆಯ ಕೆಲವು ವಾರಗಳನ್ನು ಅವಳೊಂದಿಗೆ ಕಳೆಯಲು ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಆಸ್ಪತ್ರೆಯಲ್ಲಿ ಆಕೆಯ ನೋವು ನೋಡಿದ ಮೇಲೆ, ಇನ್ನು ಮುಂದೆ ಆಕೆ ನೋವು ಪಡುವುದಿಲ್ಲ ಎಂದು ನಮಗೆ ಸಂತೋಷವಾಗಿದೆ. ನನ್ನ ತಂದೆ ಮತ್ತು ನಾನು ನಿಮಗೆ ತುಂಬಾ ಕೃತಜ್ಞರಾಗಿರುತ್ತೇವೆ .'' ಎಂದು ಮಹಿಳೆ ಡಿ ರೂಪರಿಗೆ ಸಂದೇಶ ಕಳುಹಿಸಿದ್ದಾರೆ.

ಮಹಿಳೆಯ ಮಾತಿಗೆ ರೂಪ ಭಾವುಕ

ಮಹಿಳೆಯ ಮಾತಿಗೆ ರೂಪ ಭಾವುಕ

ಮಹಿಳೆ ಸಂದೇಶ ನೋಡಿ ರೂಪ ಭಾವುಕರಾಗಿದ್ದಾರೆ. ''ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿಯನ್ನು ಭೇಟಿ ಮಾಡಲು ಪಾಸ್ ಪಡೆಯಲು ನನ್ನನ್ನು ಸಂಪರ್ಕಿಸಿದ ಮಹಿಳೆಯ ಈ ಸಂದೇಶವನ್ನು ನೋಡಲು ನನ್ನ ಕಣ್ಣುಗಳು ತೇವಗೊಂಡವು. @DCPEASTBCP ಅವರಿಗೆ ಪಾಸ್ ನೀಡುವಷ್ಟು ತ್ವರಿತವಾಗಿತ್ತು. ಅಯ್ಯೋ! ಅವಳು ತಾಯಿಯನ್ನು ಕಳೆದುಕೊಂಡಳು. ಆದರೆ, ಮಹಿಳೆ ಕೂಡಲೇ ತನ್ನ ಪಾಸ್ ಅನ್ನು ಹಿಂದಿರುಗಿಸಿದಳು'' ಎಂದು ರೂಪ ಟ್ವೀಟ್ ಮಾಡಿ ಮಹಿಳೆಯ ಕಾರ್ಯಕ್ಕೆ ಕೈ ಮುಗಿದಿದ್ದಾರೆ.

English summary
Bengaluru woman thanks police for pass to visit ailing mother. The young lady returning her movement pass to the police won her praise from many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X