• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೀಪಾವಳಿ ನೆಪದಲ್ಲಿ ಬೆಂಗಳೂರಲ್ಲೊಂದು ಅತಿ ಅಮಾನವೀಯ ಘಟನೆ

|

ಬೆಂಗಳೂರು, ನವೆಂಬರ್ 08: ಹಬ್ಬ ನಂಟು ಬೆಸೆಯಬೇಕು, ಸಂತಸ ತರಬೇಕು, ಮಾನವೀಯತೆ ಹುಟ್ಟಿಸಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವುದೇ ಬೇರೆ. ದೀಪಾವಳಿ ಹಬ್ಬದ ನೆಪದಲ್ಲಿ ನಗರದ ಆರ್‌ಟಿ ನಗರದಲ್ಲಿ ಬಹು ಅಮಾನವೀಯ ಘಟನೆಯೊಂದು ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ಆರ್‌ಟಿ ನಗರ ಬಳಿಯ ಮನೋರಾಯನ ಪಾಳ್ಯದಲ್ಲಿ ಗಂಡ-ಹೆಂಡತಿ ಇಬ್ಬರು ದೀಪಾವಳಿ ಹಬ್ಬ ಆರಂಭಕ್ಕೂ ಕೆಲ ದಿನಗಳ ಮುಂಚೆಯಿಂದಲೂ ಹಬ್ಬಕ್ಕೆ ದೊಡ್ಡ ಶಬ್ದ ಬರುವ ಪಟಾಕಿ ಹೊಡೆಯಬೇಡಿ ಎಂದು ಮನೆ-ಮನೆಗೆ ತೆರಳಿ ಕರಪತ್ರ ಹಂಚುತಿದ್ದರು. ಫ್ಲೆಕ್ಸ್‌ಗಳನ್ನು ಹಾಕಿದ್ದರು.

ಆಹಾ! ದೀಪಾವಳಿಯ ಸಂಭ್ರಮ: ಹೀಗಿದೆ ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಡಗರ

ಪ್ರಮೋದ್ ಜೋವರ್ಜನ್ ಹಾಗೂ ಸಿಮಿ ದಂಪತಿ ಹೀಗೆ ಕರಪತ್ರ ಹಂಚಲು ಯಾವುದೇ ಪ್ರಕೃತಿ ಉಳಿಸುವ ಉದ್ದೇಶವಿರಲಿಲ್ಲ ಆದರೆ ಅವರಿಗೆ ಅವರ ಎರಡು ವರ್ಷದ ಪುಟಾಣಿ ಮಗುವನ್ನು ಉಳಿಸಿಕೊಳ್ಳಬೇಕಿತಷ್ಟೆ. ಆದರೆ ಇದಕ್ಕೂ ಕೆಲ ನಿಷ್ಕರುಣ ಜನ ಒಪ್ಪಲಿಲ್ಲ. ಮಾನವೀಯತೆ ಸತ್ತೇ ಹೋಯಿತೆ ಎಂದು ಆ ದಂಪತಿಗೆ ಅನಿಸರಲಿಕ್ಕೂ ಸಾಕು.

ಜೋರು ಶಬ್ದ ಕೇಳದಂತೆ ತಡೆಯಬೇಕಿತ್ತು

ಜೋರು ಶಬ್ದ ಕೇಳದಂತೆ ತಡೆಯಬೇಕಿತ್ತು

ಪ್ರಮೋದ್ ಜೋವರ್ಜನ್‌-ಸಿಮಿ ಅವರ ಎರಡು ವರ್ಷದ ಮಗಳಿಗೆ ಕೆಲವು ತಿಂಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು, ಅದು ಮೆದುಳಿಗೆ ಸಂಬಂಧಿಸಿದ ಖಾಯಿಲೆಯೆಂದು ವೈದ್ಯರು ಹೇಳಿದರು. ದಂಪತಿ ಹಾಗೂ ವೈದ್ಯರ ಆರೈಕೆಯಿಂದ ಹೇಗೋ ಮಗು ಅಲ್ಪ-ಸ್ವಲ್ಪ ಚೇತರಿಸಿಕೊಂಡಿತ್ತು. ಮಗುವಿಗೆ ಶಾಕ್‌ ಆಗುವ ಘಟನೆಗಳು, ಶಬ್ದಗಳು ಕೇಳಿಸದಂತೆ ಮೆದುಳಿನ ಮೇಲೆ ಒತ್ತಡ ಬೀಳದಂತೆ ಕಾಪಾಡಿಕೊಳ್ಳಿ ಎಂಬುದೊಂದೆ ವೈದ್ಯರ ಸಲಹೆಯಾಗಿತ್ತು.

ಬೆಂಗಳೂರಲ್ಲಿ ಪಟಾಕಿ ವ್ಯಾಪಾರ ಶೇ 50ರಷ್ಟು ಕುಸಿತ

ಕರಪತ್ರಗಳನ್ನು ಮುದ್ರಿಸಿ ಹಂಚಿದ್ದ ದಂಪತಿ

ಕರಪತ್ರಗಳನ್ನು ಮುದ್ರಿಸಿ ಹಂಚಿದ್ದ ದಂಪತಿ

ವೈದ್ಯರ ಸಲಹೆಯಂತೆ ಪೋಷಕರು ಆರೈಕೆ ಮಾಡುತ್ತಿದ್ದರು. ಆದರೆ ದೀಪಾವಳಿ ಅವರಿಗೆ ಆತಂಕ ತಂದಿತ್ತು ಹಾಗಾಗಿ ದೊಡ್ಡ ಶಬ್ದ ಬರುವ ಪಟಾಕಿಯನ್ನು ಹೊಡೆಯಬೇಡಿರೆಂದು, ತಮ್ಮ ಮಗುವಿಗಿರುವ ಸಮಸ್ಯೆಯನ್ನು ತಮ್ಮ ಮಗುವಿನ ಚಿತ್ರದೊಂದಿಗೆ ಮುದ್ರಿಸಿ ಕರಪತ್ರಗಳನ್ನು ಹಂಚಿದರು, ಫ್ಲೆಕ್ಸ್‌ಗಳನ್ನು ಕಟ್ಟಿದರು ಆದರೆ ಜನಕ್ಕೆ ಮಗುವಿನ ಜೀವಕ್ಕಿಂತ ಪಟಾಕಿಯೇ ಮುಖ್ಯವಾಗಿತ್ತು.

ಉತ್ತರಾಖಂಡ್‌: ಸೈನಿಕರ ಜೊತೆ ಪ್ರಧಾನಿ ಮೋದಿ ದೀಪಾವಳಿ

ಮನವಿ ಬಳಿಕವೂ ಪಟಾಕಿ ಹೊಡೆದರು

ಮನವಿ ಬಳಿಕವೂ ಪಟಾಕಿ ಹೊಡೆದರು

ಆ ನೊಂದ ದಂಪತಿಗಳ ಮನವಿಯ ಬಳಿಕವೂ ನಿನ್ನೆ (ನವೆಂಬರ್ 07) ರಾತ್ರಿ ಮನೋರಮಾ ಪಾಳ್ಯದಲ್ಲಿ ದಂಪತಿ ವಾಸಿಸುವ ಮನೆಯ ಬಳಿ ಪಟಾಕಿ ಹೊಡೆದಿದ್ದಾರೆ. ಶಬ್ದಕ್ಕೆ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಅದರ ಅಂಗಾಗ ಚಲನೆಯಲ್ಲಿ ವ್ಯತ್ಯಾಸವಾಗಿದೆ. ಕೂಡಲೆ ಅಸಹಾಯಕ ಅಪ್ಪ-ಅಮ್ಮ ಹೊರ ಬಂದು ಪಟಾಕಿ ಹಚ್ಚುವರ ಬಳಿ ಜಗಳ ಮಾಡಿದ್ದಾರೆ. ಆದರೆ ಇವರಿಗೆ ಬೆದರಿಸಿ ಕಳುಹಿಸಿದ್ದಾರೆ ಪುಂಡರು.

ದೀಪಾವಳಿ ಪಟಾಕಿಯಿಂದ ಬೆಂಗಳೂರಲ್ಲಿ ಮಾಲಿನ್ಯ ಅಷ್ಟಿಷ್ಟಲ್ಲ!

ಪೊಲೀಸರ ಮಾತಿಗೂ ಗೌರವ ಕೊಡಲಿಲ್ಲ

ಪೊಲೀಸರ ಮಾತಿಗೂ ಗೌರವ ಕೊಡಲಿಲ್ಲ

ಆ ನಂತರ ಪ್ರಮೋದ್ ಜೋವರ್ಜನ್‌ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಪಟಾಕಿ ಹಚ್ಚುತ್ತಿರುವವರಿಗೆ ಬುದ್ಧಿವಾದ ಹೇಳಿದ್ದಾರೆ. ಪೊಲೀಸರು ಹೋಗುವವರೆಗೆ ಸುಮ್ಮನಿದ್ದವರು ನಂತರ ಮತ್ತೆ ಪಟಾಕಿ ಹಚ್ಚಲು ಪ್ರಾರಂಭಿಸಿದ್ದಾರೆ. ಬೇಕೆಂದೆ ಭಾರಿ ಶಬ್ದ ಮಾಡುವ ಪಟಾಕಿಗಳನ್ನೇ ಹೊಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ

ಪಟಾಕಿ ಶಬ್ದಕ್ಕೆ ಮಗು ಅಳುತ್ತಿರುವ, ಅಂಗಾಂಗಳನ್ನು ವಿಚಿತ್ರವಾಗಿ ತಿರುಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗುವಿನ ಪ್ರಾಣಕ್ಕೆ ಅಪಾಯವೇನೂ ಆಗಿಲ್ಲ ಎಂಬುದು ಸದ್ಯದ ನೆಮ್ಮದಿ ಆದರೆ ಮಗು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದೆ. ಮಗುವಿನ ಜೀವಕ್ಕೆ ಮರುಗದ ಜನರು ಕೋಟಿ ಹಬ್ಬ ಆಚರಿಸದರೆ ಏನು?, ಕೋಟಿ ದೇವರ ಪೂಜಿಸಿದರೆ ಏನು?, ಕೋಟಿ ದೇವಾಲಯಗಳನ್ನು ಕಟ್ಟಿದರೆ ಏನು? ಇದು ಆ ನೊಂದ ದಂಪತಿ ಕೇಳುತ್ತಿರುವ ಪ್ರಶ್ನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is humanity alive or dead in Bengaluru? This incident indicates humanity is dead and buried. The couple begged the people in their locality not to burst firecrackers, which make huge sound, as their daughter suffering from brain disease. Their request fell on deaf ear. Fortunately the 2-year-old baby is still alive and under medical treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more