ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕ ಮಂಜಿನಿಂದಾಗಿ ಬೆಂಗಳೂರು KIAನಲ್ಲಿ ವಿಮಾನಗಳ ಮಾರ್ಗ ಬದಲಾವಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CAT IIIB ವ್ಯವಸ್ಥೆಯ ನಡುವೆ ಮಂಗಳವಾರ ಮಂಜು ಕವಿದ ವಾತಾವರಣದಿಂದಾಗಿ 39 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಸಮಯವನ್ನು ವಿಳಂಬಗೊಳಿಸಲಾಗಿದೆ. ಜೊತೆಗೆ ಎರಡು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಬೆಳಗಿನ ಮಂಜಿನಿಂದಾಗಿ KIA ನಲ್ಲಿ 39 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬಗೊಂಡಿದ್ದು ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಜೊತೆಗೆ ಎರಡು ಆಗಮಿಸುವ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನವನ್ನು ಸುರಕ್ಷಿತ ಲ್ಯಾಂಡಿಂಗ್‌ಗಾಗಿ ಚೆನ್ನೈಗೆ ಮಾರ್ಗಬದಲಿಸಲಾಗಿದೆ. ಜೊತೆಗೆ ಅಬುಧಾಬಿಯಿಂದ ಕಣ್ಣೂರು ಮೂಲಕ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಚೆನ್ನೈಗೆ ಮಾರ್ಗ ಬದಲಿಸಲಾಗಿದೆ.

ಇದನ್ನು ಹೊರತುಪಡಿಸಿ, 100 ಮೀ ದೂರದವರೆಗೆ ದೃಷ್ಟಿ ಮಸುಕಾಗಿದ್ದರಿಂದ 39 ವಿಮಾನಗಳ ನಿರ್ಗಮನ ಬೆಳಿಗ್ಗೆ 6 ರಿಂದ 8 ರ ನಡುವೆ ವಿಳಂಬವಾಗಿವೆ. ಈ ವಾತಾವರಣ ಮಧ್ಯಾಹ್ನದ ವೇಳೆಗೆ ಸಹಜ ಸ್ಥಿತಿಯತ್ತ ಮರಳಿದೆ. ಮುಂಬರುವ ದಿನಗಳಲ್ಲಿ ಹವಾಮಾನದಲ್ಲಿ ತೀವ್ರ ಬದಲಾವಣೆಗಳಾಗುವ ಸಾಧ್ಯತೆ ಇದ್ದು ಇನ್ನೂ ತೀವ್ರವಾದ ಮಂಜು ಕವಿಯುವ ನಿರೀಕ್ಷೆಯಿದೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ವಿಮಾನಗಳ ನಿರ್ಗಮನಗಳು/ಆಗಮನಗಳು ಹೆಚ್ಚು ವಿಳಂಬವಾಗುವ ಸಾಧ್ಯತೆ ಇದೆ. ಜೊತೆಗೆ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿ ವಿಮಾನ ಹಾರಾಟ ರದ್ದಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

Morning fog causes flight delays & diversions at KIA

ಬೆಂಗಳೂರು ವಿಮಾನ ನಿಲ್ದಾಣವು CAT IIIB (ಕ್ಯಾಟಗರಿ 3 ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ಸ್) ಹೊಂದಿದ್ದು, ಇದು ಮಂಜು-ಪ್ರೇರಿತ ವಿಳಂಬವನ್ನು ಕಡಿಮೆ ಮಾಡುತ್ತದೆ. ಆದರೂ ವಿಮಾನಗಳ ನಿರ್ಗಮನಗಳು/ಆಗಮನಗಳು ವಿಳಂಬಗೊಂಡಿವೆ.

ಏನಿದು ಕ್ಯಾಟ್ lll ಬಿ ಸೌಲಭ್ಯ?

ದಟ್ಟ ಮಂಜು ಕವಿದಾಗ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗುತ್ತಿತ್ತು. ಈಗ ದಟ್ಟ ಮಂಜಿನಲ್ಲೂ ವಿಮಾನಗಳ ಹಾರಾಟ ನಡೆಸುವ ಸಾಮರ್ಥ್ಯವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಕ್ಯಾಟ್ lll ಬಿ ಮೇಲ್ದರ್ಜೇಗೇರಿದ ದಕ್ಷಿಣ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ 6ನೇ ವಿಮಾನ ನಿಲ್ದಾಣವಾಗಿದೆ. ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ(ಐ.ಎಲ್.ಎಸ್.), ವಿಮಾನದ ರನ್‍ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್‍ಫೀಲ್ಡ್ ಗ್ರೌಂಡ್ ಲೈಟ್(ಎ.ಜಿ.ಎಲ್.) ಬೆಳಕಿನ ವ್ಯವಸ್ಥೆ, ಇದಲ್ಲದೆ ಟ್ರ್ಯಾನ್ಸ್‍ಮಿಸ್ಸೊ ಮೀಟರ್, ಸ್ವಯಂಚಾಲಿತ ಹವಾಮಾನ ನಿರೀಕ್ಷಣಾಲಯ(ಎ.ಡಬ್ಲ್ಯು.ಒ.ಎಸ್.), ಮೇಲ್ಮೈ ಚಲನೆಯ Radar(ಎಸ್.ಎಂ.ಆರ್.) ಮತ್ತು ಇತರೆ ಮಾರ್ಗಸೂಚಿಯಲ್ಲಿ ಕ್ಯಾಟ್ lll ಬಿ ಮೇಲ್ದರ್ಜೇಗೇರಿಸಲಾಗಿದೆ. ಈ ವ್ಯವಸ್ಥೆಯಲ್ಲಿ 50 ಮೀಟರ್ ರನ್ ವೇ ವಿಶ್ವುವಲ್ಸ್ ರೆಂಜ್ ಇದ್ದರೂ ವಿಮಾನ ಇಳಿಸಬಹುದು ಮತ್ತು 125 ಮೀಟರ್ ರನ್ ಲೇ ವಿಶ್ವುವಲ್ಸ್ ರೆಂಜ್ ನಲ್ಲೂ ವಿಮಾನ ಹಾರಲಿದೆ. ಹೀಗಿದ್ದರೂ ಅಧಿಕ ಮಂಜು ಕವಿದಿದ್ದರಿಂದ ವಿಮಾನಗಳ ನಿರ್ಗಮನಗಳು/ಆಗಮನಗಳು ವಿಳಂಬವಾಗಿವೆ.

ಇದುವರೆಗೆ ವಿಮಾನ ಕೆಳಗಿಳಿಯಲು 550 ಮೀಟರ್ ಮತ್ತು ಮೇಲೆ ಹಾರಲು 300 ಮೀಟರ್ ವಿಷುವಲ್ ರೇಂಜ್‍ಗೆ ಪರವಾನಗಿ ಇತ್ತು. ಮಂಜು ಕುರಿತ ವಿಶ್ಲೇಷಣಾ ಅಧ್ಯಯನ, ವಿಮಾನನಿಲ್ದಾಣದ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಜವಾಹರ್ ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ(ಜೆ.ಎನ್.ಸಿ.ಎ.ಎಸ್.ಆರ್.)ದ ಸಹಭಾಗಿತ್ವದಲ್ಲಿ ಅಧ್ಯಯನ ನಡೆಸಲು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ವಿಮಾನ ನಿಲ್ದಾಣ ಪ್ರದೇಶದ ಮೇಲೆ ವಿಕಿರಣಾತ್ಮಕ ಮಂಜು ಕವಿಯುವುದನ್ನು ಮುಂಚಿತವಾಗಿ ತಿಳಿಸುವ ನಾಲ್ಕು ವರ್ಷಗಳ ಅಧ್ಯಯನ ನಡೆಸುತ್ತಿದೆ.

Recommended Video

ವಿಶ್ವದ Top 10 ನಾಯಕರಲ್ಲಿ Modiಗೆ ಎಷ್ಟನೇ ಸ್ಥಾನ? | Oneindia Kannada

English summary
The flight time of 39 domestic and international flights has been delayed due to fog on Tuesday between the CAT IIIB system at Kempegowda International Airport in Bengaluru. The route of the two aircraft has been changed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X