ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಮನ ಸೆಳೆವ ಭರತನಾಟ್ಯಕ್ಕೆ ಸಾಕ್ಷಿಯಾದ ಜೆಎಸ್ಎಸ್ ರಂಗಮಂದಿರ

|
Google Oneindia Kannada News

ಬೆಂಗಳೂರು, ಸೆ 30: ಪ್ರಣವಾಂಜಲಿ ಅಕಾಡೆಮಿ ಫಾರ್ ಫರ್ಮಾರ್ಮಿಂಗ್ ಆರ್ಟ್ಸ್ ಮತ್ತು ತಮೋಹ ಆರ್ಟ್ಸ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ 'ಪ್ರಯುಕ್ತಿ -2018' ಕಾರ್ಯಕ್ರಮ, ಜಯನಗರದ ಏಳನೇ ಬ್ಲಾಕ್ ನಲ್ಲಿರುವ ಜೆಎಸ್ಎಸ್ ರಂಗಮಂದಿರದಲ್ಲಿ ಶನಿವಾರ ಸಂಜೆ (ಸೆ 29) ಅದ್ದೂರಿಯಾಗಿ ನಡೆಯಿತು.

ಚಿಣ್ಣರಿಂದ ಹಿಡಿದು ದೊಡ್ಡವರು, ಭರತನಾಟ್ಯದ 29 ವಿವಿಧ ಪ್ರಾಕಾರಗಳ ನೃತ್ಯದ ಮೂಲಕ ನೆರೆದಿದ್ದ ಭಾರೀ ಜನರನ್ನು ಮನರಂಜಿಸಿದರು. ಎರಡು ಅಕಾಡೆಮಿಯ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ಬೆಂಗಳೂರಿನಲ್ಲಿ ದುಬೈನ ಪ್ರಜ್ಞಾ ಅನಂತ್ ಭರತನಾಟ್ಯ ರಂಗಪ್ರವೇಶ ಬೆಂಗಳೂರಿನಲ್ಲಿ ದುಬೈನ ಪ್ರಜ್ಞಾ ಅನಂತ್ ಭರತನಾಟ್ಯ ರಂಗಪ್ರವೇಶ

ಆರರಿಂದ ಏಳು ವರ್ಷದ ಪುಟಾಣಿಗಳು ನೃತ್ಯ ಪ್ರದರ್ಶಿಸಿದ್ದು ಭಾರೀ ಮೆಚ್ಚುಗೆಗೆ ವ್ಯಕ್ತವಾಯಿತು. ರಾಮಾಯಣ ಕುರಿತಾದ ನೃತ್ಯ, ಅಂಬಾ ಜಗಜನನಿ, ಸುಬ್ರಮಣ್ಯಂ ಕೌತ್ವಂ, ಐಗಿರಿ ನಂದಿನಿ, ಇಂಡಿಯನ್ ಫ್ಯೂಷನ್ ಮುಂತಾದ ನೃತ್ಯಗಳು ಸಭಿಕರ ಪ್ರಶಂಸೆಗೆ ವ್ಯಕ್ತವಾಯಿತು.

More than 100 students Bharatanatyam performance in JSS auditorium, Bengaluru

ಪ್ರಣವಾಂಜಲಿ ಅಕಾಡೆಮಿಯ ಮುಖ್ಯಸ್ಥೆ ಪವಿತ್ರ ಮಂಜುನಾಥ್ ಮತ್ತು ತಮೋಹ ಆರ್ಟ್ಸಿನ ಗಾಯತ್ರಿ ಮಯ್ಯ ಅವರ ನೃತ್ಯಶಾಲೆಯಲ್ಲಿ ಪಳಗಿದ ವಿದ್ಯಾರ್ಥಿಗಳು ಸತತವಾಗಿ ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮ ನೀಡಿದ್ದು ವಿಶೇಷ.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲಿರುವ ಪುತ್ತೂರಿನ ಪೋರಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲಿರುವ ಪುತ್ತೂರಿನ ಪೋರ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂದಿದ್ದ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ಪ್ರತಿಭೆಗಳ ಅನಾವರಣ ಇನ್ನೂ ಆಗಬೇಕಿದೆ. ಪೋಷಕರು ಇನ್ನೂ ಹೆಚ್ಚುಹೆಚ್ಚು ಕಲೆಯನ್ನು ಬೆಂಬಲಿಸುವ ಮೂಲಕ, ಭಾರತೀಯ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸಲು ಸಹಕರಿಸಲು ಮನವಿ ಮಾಡಿದರು.

More than 100 students Bharatanatyam performance in JSS auditorium, Bengaluru

ಇನ್ನೋವ್ರ ಮುಖ್ಯ ಅತಿಥಿ, ದೂರದರ್ಶನದ ಮಾಜಿ ಹೆಚ್ಚುವರಿ ನಿರ್ದೇಶಕ ನಾಡೋಜ ಡಾ. ಮಹೇಶ್ ಜೋಷಿ ಮಾತನಾಡಿ, ಪ್ರಯುಕ್ತಿ 2018 ಕಾರ್ಯಕ್ರಮವನ್ನು ಮತ್ತು ಈ ಅದ್ಭುತ ನಾಟ್ಯ ಕಾರ್ಯಕ್ರಮಕ್ಕೆ ಕಾರಣೀಕರ್ತರಾದ ಪವಿತ್ರ ಮಂಜುನಾಥ್ ಸಹೋದರಿಯರ ಕಾಳಜಿಯನ್ನು ಶ್ಲಾಘಿಸಿದರು.

English summary
More than 100 students Bharatanatyam performance in JSS auditorium, Bengaluru on Sep 29. Pranavanjali Academy and Tamoha Arts Foundation jointly organized this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X