ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಮಿಗಳ ದಿನ: ಬೆಂಗಳೂರಲ್ಲಿ ಡಚ್ ಗುಲಾಬಿಗೆ ಹೆಚ್ಚಿದ ಬೇಡಿಕೆ

|
Google Oneindia Kannada News

ಬೆಂಗಳೂರು, ಜನವರಿ 25: ಎಷ್ಟೋ ಪ್ರೀತಿಗಳು ಆರಂಭವಾಗುವುದು ಗುಲಾಬಿಯ ಹೂವಿನಿಂದಲೇ, ಪ್ರೀತಿ ಎಂಬ ಸಾಗರಕ್ಕೆ ಇನ್ನೂ ಕಾಲಿಡದವರು, ಹೊಸದಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಾತರದಿಂದ ಕಾಯುತ್ತಿರುವವರು, ಈಗಾಗಲೇ ಪ್ರೀತಿಯಲ್ಲಿ ಬಿದ್ದವರು...

ಹೀಗೆ ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬರ ಕೈಯಲ್ಲೂ ಪ್ರೇಮಿಗಳ ದಿನದಂದು ಕೆಂಪು ಗುಲಾಬಿ ಇದ್ದೇ ಇರುತ್ತದೆ. ಇದರಿಂದಲೇ ಪ್ರೇಮಿಗಳ ದಿನದಂದು ಕೆಂಪು ಗುಲಾಬಿಗೆ ವಿಶೇಷ ಸ್ಥಾನ ಲಭಿಸಿದೆ. ಪಾಲಿಹೌಸ್‌ಗಳಲ್ಲಿ ಬೆಳೆದಿರುವ ಡಚ್ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಗಿದೆ. ಜನವರಿ ತಿಂಗಳಲ್ಲಿ ಡಚ್ ಗುಲಾಬಿ ಒಂದಕ್ಕೆ 15 ರೂ ತಲುಪಿದ್ದು ಪ್ರೇಮಿಗಳ ದಿನ ವೇಳೆಗೆ 30 ರೂ ತಲುಪುವ ಸಾಧ್ಯತೆ ಇದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಹೂವಿನ ದರ 3.50 ಇಂದ 4 ರೂ ಇತ್ತು. ಈ ವರ್ಷ ಮೂರು ಪಟ್ಟು ಏರಿಕೆಯಾಗಿದೆ.ಅಂದರೆ ಒಂದು ಹೂವಿಗೆ ಕನಿಷ್ಠ 9 ರೂನಿಂದ ಗರಿಷ್ಠ 15 ರೂವರೆಗೆ ಮುಟ್ಟಿದೆ. ತಿಳಿ ಗುಲಾಬಿ 11 ರೂ, ಬಣ್ಣದ ಗುಲಾಬಿ 10 ರೂ, ಕೆಂಪು ಗುಲಾಬಿ 9 ರೂಗೆ ಮಾರಾಟವಾಗುತ್ತಿದೆ.

More Demand for Bengaluru dutch roses

ಇನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ 50 ಲಕ್ಷ ಡಚ್ ವೆರೈಟಿಯ ಕೆಂಪು ಗುಲಾಬಿ ವಿದೇಶಕ್ಕೆ ರಫ್ತಾಗಿವೆ. ಪ್ರೇಮಿಗಳ ದಿನಕ್ಕೆಂದೇ ಬೆಂಗಳೂರಿನ ಸುತ್ತಮುತ್ತ ಬೆಳೆಯುವ 'ಡಚ್' ಕೆಲವು ಗುಲಾಬಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಡಚ್ ಗುಲಾಬಿ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಗುಲಾಬಿ ಬೆಳೆಯುವ ರೈತರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಡಚ್ ಗುಲಾಬಿ ಮುಳ್ಳು ರಹಿತವಾಗಿದ್ದು, ಇದರಲ್ಲೇ ಗ್ರ್ಯಾಂಡ್ ಗಾಲ, ಫಸ್ಟ್ ರೆಡ್ ಹಾಗೂ ತಾಜ್ ಮಹಲ್ ಎಂಬ ಉಪಜಾತಿಯ ಹೂಗಳಿವೆ. ಕಳೆದ ಬಾರಿಗಿಂತ ಈಬಾರಿ 40 ಲಕ್ಷಕ್ಕೂ ಹೆಚ್ಚು ಡಚ್ ಗುಲಾಬಿಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ.

English summary
There is a huge demand for international market for Bengaluru dutch roses. It may cross Rs 30 per rose during Valentine's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X