ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ನವಜಾತ ಗಂಡು ಶಿಶುಗಳ ಹತ್ಯೆ ಪ್ರಮಾಣ ಏರಿಕೆ

|
Google Oneindia Kannada News

ಬೆಂಗಳೂರು, ಮೇ 27: ಇಷ್ಟು ವರ್ಷ ಹೆಣ್ಣುಮಕ್ಕಳು ಹುಟ್ಟಿತೆಂದರೆ ಸಾಕು ತಾತ್ಸಾರ ಮನೋಭಾವ, ತಾಯಿಯ ಗರ್ಭದಲ್ಲಿರುವಾಗಲೇ ಎಷ್ಟೋ ಶಿಶುಗಳ ಹತ್ಯೆಯಾಗಿದೆ. ಆದರೆ ಈಗ ಇನ್ನೊಂದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ನವಜಾತ ಗಂಡು ಶಿಶುಗಳ ಹತ್ಯೆ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ.

ಅನೈತಿಕ ಸಂಬಂಧದಿಂದ ಹುಟ್ಟಿದ ಮಗುವಾಗಿರಬಹುದು, ಕೆಲವು ಪೋಷಕರಿಗೆ ಗಂಡು ಮಗು ಇಷ್ಟವಿಲ್ಲದೇ ಇರಬಹುದು ಅದೇನೇ ಇರಲಿ ಗಂಡು ಶಿಶು ಹತ್ಯೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಗರ್ಭಿಣಿಯ ಕೊಂದು ಹೊಟ್ಟೆಯನ್ನು ಬಗೆದು ಮಗು ಹೊರ ತೆಗೆದ ರಾಕ್ಷಸಿ ಗರ್ಭಿಣಿಯ ಕೊಂದು ಹೊಟ್ಟೆಯನ್ನು ಬಗೆದು ಮಗು ಹೊರ ತೆಗೆದ ರಾಕ್ಷಸಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದ ವರದಿಯಲ್ಲಿ ಈ ವಿಚಾರ ಬಹಿರಂಗಗೊಡಿದೆ. ಆದರೆ ಸರಿಯಾದ ಕಾರಣಗಳು ಇನ್ನಷ್ಟೇ ಹೊರಬರಬೇಕಿದೆ.

More boy babies abondoned in last 3 years

ನವಜಾತ ಶಿಶುವನ್ನು ಕಸದ ತೊಟ್ಟಿ, ಇನ್ನಿತರೆ ಕಡೆಗಳಲ್ಲಿ ಎಸೆದ ಪ್ರಕರಣಳು 2016ರಲ್ಲಿ 232 ಪ್ರಕರಣಗಳು, 2017ರಲ್ಲಿ 258, 2018ರಲ್ಲಿ 291 ಪ್ರಕರಣಗಳು ದಾಖಲಾಗಿದ್ದವು ಇದೀಗ ಕೇವಲ ಮೂರು ತಿಂಗಳಲ್ಲೇ 70 ಪ್ರಕರಣಗಳು ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ.

ಆದರೆ ಇನ್ನೊಂದು ಖುಷಿಯ ಸಂಗತಿಯೆಂದರೆ ನವಜಾತ ಹೆಣ್ಣು ಶಿಶುಗಳ ಹತ್ಯೆ ಕಡಿಮೆಯಾಗಿದೆ, ಆದರೆ ಗಂಡು ಶಿಶುಗಳ ಹತ್ಯೆ ಹೆಚ್ಚಾಗಿದೆ ಇದು ಆತಂಕಕಾರಿ ಬೆಳವಣಿಗೆ. 2016 ರಿಂದ 2018ರವರೆಗೆ ಗಂಡು ಶಿಶುವನ್ನು ಇಲಾಖೆ ರಕ್ಷಿಸಿದೆ.

2016ರಲ್ಲಿ 160 ಹೆಣ್ಣುಶಿಶುಗಳು, 72 ಗಂಡು ಶಿಶುಗಳು, 2017ರಲ್ಲಿ 156 ಹೆಣ್ಣುಶಿಶುಗಳು 102 ಗಂಡುಶಿಶುಗಳು, 2018ರಲ್ಲಿ ಒಟ್ಟು 197 ನವಜಾತ ಶಿಶುಗ ಪೈಕಿ 94 ಹೆಣ್ಣುಶಿಶುಗಳಿದ್ದಾರೆ.

ಮಗುವನ್ನು ಒಂದು ವರ್ಷದವರೆಗೆ ಮಗುವನ್ನು ಸಾಕುವುದು ತಾಯಿಯ ಕರ್ತವ್ಯ ಅದಾದ ಬಳಿಕ ಮಗು ಬೇಡವೆಂದರೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಥವಾ ಯಾವುದೇ ಅನಾಥಾಶ್ರಮಕ್ಕೆ ನೀಡಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲಾಖೆಯು ರಕ್ಷಿಸಿದ ಎಲ್ಲಾ ಮಕ್ಕಳು ಬದುಕುವುದಿಲ್ಲ, 2016ರಲ್ಲಿ ಒಟ್ಟು 60 ಮೃತ ನವಜಾತಶಿಶುಗಳು ಪತ್ತೆಯಾಗಿದ್ದವು. ಈ ವರ್ಷ ಮಾರ್ಚ್‌ ಒಳಗೆ 18 ಮೃತ ನವಜಾತಶಿಶುಗಳು ಪತ್ತೆಯಾಗಿವೆ.

English summary
Lat 3 years more boy babies abondoned in karnataka, fewer girl babies abondoned in 2016,2017 and 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X