ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿಲ್ದಾಣ ಪ್ರವೇಶ ಇನ್ನೂ ಸುಲಭ: ಹೇಗಂತೀರಾ?

By Nayana
|
Google Oneindia Kannada News

ಬೆಂಗಳೂರು, ಜು.13: ಮುಂದಿನ ದಿನಗಳಲ್ಲಿ ಮೆಟ್ರೋ ರೈಲಿನಿಂದ ಇಳಿದ ಕೂಡಲೇ ನಿಲ್ದಾಣದಿಂದ ಹೊರಗೆ ಹೋಗಲು
ಗಡಿಬಿಡಿ ಮಾಡಿಕೊಳ್ಳಬೇಕಾಗಿಲ್ಲ, ಪ್ರಯಾಣಿಕರಿಗೆ ಹೊರಗಡೆ ಹೋಗಲು ಅನುಕೂಲವಾಗುವಂತೆ ದಟ್ಟಣೆ ಅಧಿಕವಾಗಿರುವ ನಿಲ್ದಾಣಗಳಲ್ಲಿ ಹೆಚ್ಚುವರಿ ಆಟೊಮೆಟೆಡ್‌ ಫೇರ್‌ ಕಲೆಕ್ಷನ್‌ ಗೇಟ್‌ ಅಳವಡಿಸಲಾಗಿದೆ.

ಮೆಟ್ರೋ ನಿಲ್ದಾಣಕ್ಕೆ ಬರಲು ಹಾಗೂ ಹೊರ ಹೋಗಲು ಬಹುತೇಕ ನಿಲ್ದಾಣಗಳಲ್ಲಿ 12 ಗೇಟ್‌ಗಳನ್ನು ಅಳವಡಿಸಲಾಗಿದೆ. ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ 12 ಕ್ಕೂ ಅಧಿಕ ಗೇಟ್‌ಗಳನ್ನು ಅಳವಡಿಸಲಾಗಿದೆ.

ಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿ

ಮೆಟ್ರೋದಲ್ಲಿ ಪ್ರತಿನಿತ್ಯ ಸರಾಸರಿ 3.60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಆರು ಬೋಗಿ ರೈಲು ಬಂದ ಬಳಿಕ ಕ್ರಮೇಣವಾಗಿ ಪ್ರಯಾಣಿಕರ ಸಂಖ್ಯೆ ಸರಾಸರಿ 4 ಲಕ್ಷಕ್ಕೆ ಏರಬಹುದು ಎಂದು ನಿರೀಕ್ಷಿಸಲಾಗಿದೆ.

More AFC gates in metro stations soon

ಪೀಕ್‌ ಅಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಗೇಟ್‌ಗಳಲ್ಲಿ ಉದ್ದದ ಸಾಲು ಸೃಷ್ಟಿಯಾಗುತ್ತಿದೆ. ಆದ್ದರಿಂದ ಪ್ರತಿ ನಿಲ್ದಾಣದ ಅಗತ್ಯತೆ ನೋಡಿಕೊಂಡು ಎಎಫ್‌ಸಿ ಗೇಟ್‌ಗಳನ್ನು ಹೆಚ್ಚಿಸಲಾಗುತ್ತಿದೆ. ಯಲಚೇನಹಳ್ಳಿ ನಿಲ್ದಾಣದಲ್ಲಿ 12 ಗೇಟ್‌ಗಳಿದ್ದು ಹೊಸದಾಗಿ ಮೂರು ಗೇಟ್‌ಗಳನ್ನು ಅಳವಡಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಈ ನಿಲ್ದಾಣದಿಂದ ಹೊರಹೋಗುವವರು ಮತ್ತು ಬರುವವರ ಸಂಖ್ಯೆ ಅಧಿಕವಾಗಿರುವುದರಿಂದ ಹೊಸ ಗೇಟ್‌ ಅಳವಡಿಸಲಾಗಿದೆ. ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದ ಕೆಲ ಗೇಟ್‌ ಮುಚ್ಚಲಾಗಿರುತ್ತದೆ. ಯಲಚೇನಹಳ್ಳಿ ನಿಲ್ದಾಣದಲ್ಲಿ ಇಂತಹ ಸಮಸ್ಯೆ ಬಗ್ಗೆ ಪದೇಪದೆ ದೂರು ಕೇಳಿಬಂದಿರುವುದರಿಂದ ಹೆಚ್ಚುವರಿ ಗೇಟ್‌ ಅಳವಡಿಸಲಾಗಿದೆ.

English summary
To ease the entry for crowded metro stations, BMRCL has decided to install automated fare collection gates. Recently three new gates installed in Yelachenahalli metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X