ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ ಮೊದಲ ವಾರದಲ್ಲಿ ಬೆಂಗಳೂರಿಗೆ ಮುಂಗಾರು ಪ್ರವೇಶ, ಹೇಗಿರಲಿದೆ ಮಳೆ

|
Google Oneindia Kannada News

ಬೆಂಗಳೂರು, ಮೇ 15: ಜೂನ್ ಮೊದಲ ವಾರದಲ್ಲಿ ಬೆಂಗಳೂರಿಗೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಭಾರತಕ್ಕೆ ಮುಂಗಾರು ಮಳೆಯನ್ನು ಹೊತ್ತು ತರುವ ನೈಋತ್ಯ ಮಾನ್ಸೂನ್ ಮಾರುತಗಳು ಮೇ.31ರಂದೇ ಕೇರಳ ಪ್ರವೇಶಿಸುತ್ತಿದ್ದು, ಬೆಂಗಳೂರಿನಲ್ಲಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೌಕ್ತೆ ಚಂಡಮಾರುತ: ಕರ್ನಾಟಕ, ಕೇರಳದಲ್ಲಿ ಅಬ್ಬರದ ಮಳೆ, ರೆಡ್ ಅಲರ್ಟ್ತೌಕ್ತೆ ಚಂಡಮಾರುತ: ಕರ್ನಾಟಕ, ಕೇರಳದಲ್ಲಿ ಅಬ್ಬರದ ಮಳೆ, ರೆಡ್ ಅಲರ್ಟ್

ಮುಂಗಾರು ಆಗಮನ ಹವಾಮಾನ ವ್ಯವಸ್ಥೆಗಳ ರಚನೆಯಿಂದ ಕೂಡಿದ್ದು ಕೆಲವೊಮ್ಮೆ ತಡವಾಗಲೂಬಹುದು, ಶೀಘ್ರಗತಿಯಲ್ಲೂ ಪ್ರವೇಶಿಸಬಹುದು. ಆದರೆ, ಪ್ರಸ್ತುತದ ವಾತಾವರಣವನ್ನು ಗಮನಿಸಿದರೆ ನಿಗದಿತ ಸಮಯಕ್ಕೆ ಈ ಬಾರಿ ಮಾನ್ಸೂನ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

Monsoon To Arrive In Bengaluru By First Week Of June

ಕೇರಳ ರಾಜ್ಯಕ್ಕೆ ಮುಂಗಾಲು ಪ್ರವೇಶಿಸಿದ ಬಳಿಕ ಸಾಮಾನ್ಯವಾಗಿ ಬೆಂಗಳೂರಿಗೆ ಈ ಮುಂಗಾರು ಪ್ರವೇಶಿಸಲು ಕನಿಷ್ಟ 5-7 ದಿನಗಳು ಬೇಕಾಗುತ್ತದೆ. ಹೀಗಾಗಿ ಈ ಬಾರಿ ಸಿಲಿಕಾನ್ ಸಿಟಿಗೆ ಜೂನ್ 7 ರಂದು ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಹೇಳಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳಲ್ಲಿ ಮೇ.21ರಂದೇ ಮಾನ್ಸೂನ್ ಮಾರುತಗಳ ಪ್ರವೇಶವಾಗಲಿದೆ. ಈ ಸಲಹ ಮಾನ್ಸೂನ್ ಮಾರುತಗಳು ಸಾಮಾನ್ಯ ಮಳೆ ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಮೇ.20 ರಂದೇ ಮಾನ್ಸೂನ್ ಮಾರುತಗಳು ಬೀಸಲಿದ್ದು, ಮೇ.21ರಂದು ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶ ಮತ್ತು ಬಂಗಾಳ ಕೊಲ್ಲಿಯ ದಕ್ಷಿಣ ಭಾಗಗಳಲ್ಲಿ ಮಳೆಯ ಚುರುಕು ಪಡೆಯಲಿದೆ.

Recommended Video

Tauktae ಚಂಡಮಾರುತದ ರಕ್ಕಸ ಅವತಾರ ನೋಡಿ | Oneindia Kannada

English summary
After months of scorching heat, it’s time to look forward to rainy days. The South-West monsoon, which is expected to hit the Kerala coast by May 31, will reach Bengaluru by June 7, according to state officials from the India Meteorological Department (IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X