ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ ಆರೋಪಿಗೆ ಜಾಮೀನು ನಿರಾಕರಣೆ

|
Google Oneindia Kannada News

ಬೆಂಗಳೂರು, ಜನವರಿ 18: ವಿಧಾನಸೌಧದ ಪಶ್ಚಿಮ ಗೇಟ್‌ ಬಳಿ ವ್ಯಕ್ತಿಯೊಬ್ಬರ ಬಳಿ 25.76 ಲಕ್ಷ ಹಣ ಪತ್ತೆಯಾದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ.

ಎರಡೂ ಕಡೆಯ ವಾದ ಆಲಿಸಿದ್ದ ಸೆಷನ್ಸ್‌ ನ್ಯಾಯಾಲಯವು ಆರೋಪಿ ಟೈಪಿಸ್ಟ್‌ ಮೋಹನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತು. ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿತು.

ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿಯಾಗಿ ಲಿಂಗಪ್ಪ ನಾರಾಯಣಸ್ವಾಮಿ ನೇಮಕ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿಯಾಗಿ ಲಿಂಗಪ್ಪ ನಾರಾಯಣಸ್ವಾಮಿ ನೇಮಕ

ಸಚಿವರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್‌ ಆಗಿರುವ ಮೋಹನ್ ಎಂಬುವರ ಬಳಿ ಜನವರಿ 16ರಂದು ವಿಧಾನಸೌಧದ ಪಶ್ಚಿಮ ಗೇಟ್‌ ಬಳಿ 25.76 ಲಕ್ಷ ಮೊತ್ತದ ಭಾರಿ ಹಣ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.

Money siezed in Vidhan Soudha: accused bail application rejected

ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿ ಪರ ವಕೀಲ ಶ್ಯಾಮ್‌ಸುಂದರ್ ಅವರು, ಆ ಹಣ ಚಿನ್ನ ಗಿರವಿ ಇಟ್ಟು ತಂದ ಹಣವಾಗಿತ್ತು ಎಂದಿದ್ದರು. ಅಷ್ಟು ಹಣ ನೀಡಲು ಕೆಜಿಗಟ್ಟಲೆ ಚಿನ್ನ ಇಡಬೇಕೆಂದು ಪ್ರತಿವಾದಿ ಲಾಯರ್ ವಾದಿಸಿದ್ದರು.

ವಿಧಾನಸೌಧದಲ್ಲಿ ಸಿಕ್ಕ ಹಣ ಚಿನ್ನ ಗಿರವಿ ಇಟ್ಟು ತಂದಿದ್ದು: ವಾದ ಮಂಡನೆ ವಿಧಾನಸೌಧದಲ್ಲಿ ಸಿಕ್ಕ ಹಣ ಚಿನ್ನ ಗಿರವಿ ಇಟ್ಟು ತಂದಿದ್ದು: ವಾದ ಮಂಡನೆ

ಇಂದಿಗೆ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಮಂಜುಳಾ ಅವರು, ಪ್ರಕರಣ ತನಿಖಾ ಹಂತದಲ್ಲಿದ್ದಾಗ ಜಾಮೀನು ನೀಡುವುದು ಸರಿ ಅಲ್ಲ ಎಂದು, ಜಾಮೀನು ಅರ್ಜಿಯನ್ನು ತಿರಸ್ಕಾರಗೊಳಿಸಿದರು.

ಟೈಪಿಸ್ಟ್‌ ಮೋಹನ್ ಅವರ ಬಳಿ ಸಿಕ್ಕಿರುವ ಹಣವು ಸಚಿವರೊಬ್ಬರಿಗೆ ಸೇರಿದ ಲಂಚದ ಹಣ ಎಂಬ ಗುಮಾನಿ ಇದ್ದು. ಸತ್ಯಾಂಶ ತನಿಖೆ ಬಳಿಕ ಗೊತ್ತಾಗಲಿದೆ.

English summary
Bail application of accused typist Mohan rejected by sessions court. He was accused in Money sieze case near Vidhan Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X