ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋಹನದಾಸ್ ಪೈ ಟ್ವಿಟ್ಟರ್ ದೂರಿಗೆ ಸಿಎಂ ಸ್ಪಂದನೆ

|
Google Oneindia Kannada News

ಬೆಂಗಳೂರು, ಜು. 21: ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸುವುದು, ಕೆಟ್ಟ ರೀತಿಯಲ್ಲಿ ವಾಹನ ಚಾಲನೆ ಮುಂತಾದ ಯಾವುದೇ ಬಗೆಯ ಕಾನೂನು ಬಾಹಿರ ಸಂಗತಿ ಕಂಡುಬಂದರೆ ಸಾಮಾಜಿಕ ತಾಣಗಳ ಮೂಲಕ ದೂರು ಸಲ್ಲಿಕೆ ಮಾಡಬಹುದು ಎಂದು ಬೆಂಗಳೂರು ಪೊಲೀಸರು ಹಿಂದೆಯೇ ತಿಳಿಸಿದ್ದರು.

ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಟಿ.ವಿ. ಮೋಹನ್ ದಾಸ್ ಪೈ ಟ್ವಿಟ್ಟರ್ ಮೂಲಕ ಇಂಥದ್ದೇ ಒಂದು ದೂರು ದಾಖಲು ಮಾಡಿದ್ದಾರೆ. ಆದರೆ ಅವರು ತಮ್ಮ ದೂರನ್ನು ಮುಖ್ಯಮಂತ್ರಿ ಟ್ವಿಟ್ಟರ್ ಖಾತೆಯ ಹ್ಯಾಂಡಲ್ ಗೆ ಹಾಕಿದ್ದಾರೆ.[ಬರೋಬ್ಬರಿ 66 ಸಾರಿ ನಿಯಮ ಮುರಿದಿದ್ದ ಬಿಎಂಟಿಸಿ ಬಸ್!]

traffic

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಸಿಎಂ ಖಾತೆ ದೂರನ್ನು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರವಾನೆ ಮಾಡಿದೆ. ಟ್ರಾಫಿಕ್ ಪೊಲೀಸ್ ಸಹ ಅಷ್ಟೆ ವೇಗವಾಗಿ ಪ್ರತಿಕ್ರಿಯೆ ನೀಡಿದ್ದು ಪಾರ್ಕಿಂಗ್ ನಿಯಮ ಉಲ್ಲಂಘನೆ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಪೈ ದೂರಿನಲ್ಲಿ ಏನಿತ್ತು?
'ಕೆಎ 51 ಎಂಸಿ 0243 ಸಂಖ್ಯೆ ಬಿಎಂಡ್ಲ್ಯೂ ಕಾರನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿದ ನನಗೆ ಬೆದರಿಕೆ ಹಾಕಲಾಯಿತು. ಅಲ್ಲದೇ ನಾನು ಎಂಎಲ್ ಸಿ ಎಂದು ಸಂಬಂಧಿಸಿದ ವ್ಯಕ್ತಿ ಮೈ ಮೇಲೆ ಬಂದರು. ದಯವಿಟ್ಟು ತಕ್ಷಣ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ' ಎಂದು ಪೈ ಕಾರಿನ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.[ಕೋರಮಂಗಲದ ಕಪ್ಪು ಸುಂದರ ಹಾರ್ನ್ ಗೆಲ್ಲ ಜಗ್ಗಲ್ಲ!]

ಪೈ ಅವರ ಟ್ವೀಟ್ ಗೆ ಅನೇಕ ಪ್ರತಿಕ್ರಿಯೆಗಳು ಬಂದಿದ್ದು ಬೆಂಗಳೂರು ಪೊಲೀಸರು ಇಂಥವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಲಹೆ ನೀಡಿದ್ದಾರೆ. ಅಲ್ಲೆದೇ ಬೆಂಗಳೂರು ಪೊಲೀಸರ ಟ್ವಿಟ್ಟರ್ ಖಾತೆಗೆ ಪೈ ಟ್ವೀಟ್ ನ್ನು ಹಂಚಿಕೆ ಮಾಡಲಾಗಿದೆ.

English summary
Bengaluru: The Chairman of Manipal Global Education, T.V. Mohandas Pai lodged a complaint in Twitter aganist a BMW car owner.The car was illegally parked, when I protested he abused,threatened, Please take action, Pai twitted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X