• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಕನಸಿನಂತೆ ಇ ಸಿಟಿ ಇನ್ಮುಂದೆ ಸ್ಮಾರ್ಟ್ ಸಿಟಿ

By Mahesh
|

ಬೆಂಗಳೂರು, ಜು.3: ಹತ್ತು ಹಲವು ವೈವಿಧ್ಯಮಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಕೇಂದ್ರಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸ್ಮಾರ್ಟ್ ಸಿಟಿಯಾಗಿಸಲು ಚಿಂತನೆ ನಡೆದಿದ್ದು, ಇದಕ್ಕೆ ಜಾಗತಿಕ ನೆಟ್ವರ್ಕಿಂಗ್ ಸಂಸ್ಥೆ ಸಿಸ್ಕೋ ನೆರವು ನೀಡಲು ಮುಂದೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯನ್ನು ಸ್ಮಾರ್ಟ್ ಸಿಟಿ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕನಸು ಕಂಡಿದ್ದು ಅದೀಗ ಕಾರ್ಯರೂಪಕ್ಕೆ ಬರುತ್ತಿದೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಸ್ಮಾರ್ಟ್ ಸಿಟಿಗಳ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಗುಜರಾತಿನಲ್ಲಿ ಈಗಾಗಲೇ ಸ್ಮಾರ್ಟ್ ಸಿಟಿ ನೀಲನಕ್ಷೆ ಹಾಗೂ ಪ್ರಾಯೋಗಿಕ ಹಂತದ ಅನುಷ್ಠಾನ ಜಾರಿಯಲ್ಲಿದೆ.

ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆ ಸಂಘ(Electronics City Industries Association) 'ಕೊನೆಯಿಂದ ಕೊನೆಗೆ ಅಂತರ್ಜಾಲದ ನವೀನತೆಯ ತಾಣ' ಎಂಬ ವಿನೂತನ ಯೋಜನೆ ಸಿದ್ಧಪಡಿಸಿದೆ. ಇದರ ಅನುಷ್ಠಾನಕ್ಕೆ ಈಗ ಸಿಸ್ಕೋ ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಏಷ್ಯಾದಲ್ಲೇ ಪ್ರಥಮ ಬಾರಿಗೆ ಇಂಟರ್ನೆಟ್ ಆಫ್ ಥಿಂಗ್ಸ್(IoT) ಇನ್ನೋವೇಷನ್ ಹಬ್ ಆಗಿ ಇ ಸಿಟಿ ಪರಿವರ್ತನೆಗೊಳ್ಳಲಿದೆ.[ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ನಾಯ್ಡು ಗುರಿ]

ಉಭಯ ಸಂಸ್ಥೆಗಳ ಪ್ರಮುಖರೊಂದಿಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಸ್ಕೋ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಅನಿಲ್ ಮೆನೆನ್, ಈ ಒಪ್ಪಂದದ ಪ್ರಕಾರ ಸಿಸ್ಕೋ ಸಂಸ್ಥೆಯು ಐಟಿ ಸಂಬಂಧಿತ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೂಲ ಮಾದರಿ ಪರೀಕ್ಷೆ ಮತ್ತು ಉತ್ಪಾದನೆ ವ್ಯವಸ್ಥೆಗೆ ಬೇಕಾಗುವ ಪರಿಣಿತಿ ಸೇವೆಯನ್ನು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆ ಸಂಘಕ್ಕೆ ಒದಗಿಸಲಿದೆ ಎಂದರು.

'ಕೊನೆಯಿಂದ ಕೊನೆಗೆ ಅಂತರ್ಜಾಲದ ನವೀನತೆಯ ತಾಣ' ಎಂಬ ಯೋಜನೆ ಏಷ್ಯಾದಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ಬರುತ್ತಿದೆ. ಇದರಿಂದ ಜೀವ ಪರಿಸರಕ್ಕೆ ಪೂರಕವಾಗಿ ಎಲೆಕ್ಟ್ರಾನಿಕ್ ಸಿಟಿಯು ಅಂತರ್ಜಾಲ ತಾಣದ ಸ್ಮಾರ್ಟ್ ಸಿಟಿಯಾಗಿ ರೂಪಾಂತರವಾಗಲಿದೆ ಎಂದು ವಿವರಿಸಿದರು.

ಬೆಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಆನೇಕಲ್ ತಾಲೂಕಿನ ಎಲೆಕ್ಚ್ರಾನಿಕ್ ಸಿಟಿ ಸುಮಾರು 800 ಎಕರೆ ಪ್ರದೇಶ ಹೊಂದಿದೆ. ಇನ್ಫೋಸಿಸ್ , ವಿಪ್ರೋ, ಎಚ್ ಪಿ ಸೇರಿದಂತೆ ಸುಮಾರು 186 ಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಒಟ್ಟು ವಾರ್ಷಿಕ ರು. 40 ಸಾವಿರ ಕೋಟಿ ವಹಿವಾಟು ಹೊಂದಿದೆ.

ಇಂಥ ಪ್ರದೇಶವನ್ನು ಸ್ಮಾರ್ಟ್ ಸಿಟಿ ಮಾಡುವ ಆಕಾಂಕ್ಷೆ ತಮ್ಮ ಸಂಸ್ಥೆಯದ್ದು. ಇದಕ್ಕೆ ಈಗ ಸಿಸ್ಕೋ ಬೆಂಬಲಿಸಿ, ಒಪ್ಪಂದಕ್ಕೆ ಸಹಿ ಹಾಕಿರುವುದು ನೈತಿಕವಾಗಿ ಸಾಕಷ್ಟು ಬಲ ನೀಡಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆ ಸಂಘದ ಅಧ್ಯಕ್ಷರಾದ ಅರುಣಾ ನ್ಯೂಟನ್ ತಿಳಿಸಿದರು.

ಸುಮಾರು 1,25,000 ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೇಶದ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ರಫ್ತಿನ ಶೇ 25 ರಷ್ಟು ಪ್ರಮಾಣ ಇಲ್ಲೇ ಉತ್ಪತ್ತಿಯಾಗುತ್ತಿದೆ.

ಮುಂದಿನ ಜನವರಿ ಹೊತ್ತಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಿಸ್ಕೋ ವೈ ಫೈ ಬಳಕೆ ಮಾಡಿಕೊಂಡ ಸಂಪೂರ್ಣ ಸ್ಮಾರ್ಟ್ ಸಿಟಿಯನ್ನು ಕಾಣಬಹುದು. ಇದೇ ಮಾದರಿಯನ್ನು ಬೆಂಗಳೂರಿನ ಇತರೆ ಭಾಗಗಳಿಗೂ ಹಬ್ಬಿಸುವ ಯೋಜನೆ ಮುಂದೆ ಕಾರ್ಯಗತವಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Global networking products major Cisco Systems Inc would soon turn the electronics city in south Bangalore into a smart city and develop Asia's first Internet of Things (IoT) innovation hub, a top official said Wednesday. Recently PM Narendra Modi said his dream is to build smart cities across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more