ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಉದ್ಯಾನದಲ್ಲಿ ಅಂಧರಿಗಾಗಿ ಆಕರ್ಷಕ ಸ್ಥಳಗಳ ಕುರಿತ 'ಸ್ಪರ್ಶ ಫಲಕ'

|
Google Oneindia Kannada News

ಬೆಂಗಳೂರು, ಫೆಬ್ರವರಿ14 : ನಗರದ ಪ್ರಮುಖ ತಾಣಗಳಲ್ಲಿ ಒಂದಾಗಿರುವ ಕಬ್ಬನ್ ಉದ್ಯಾನ ಹಾಗೂ ನಗರದ ಪ್ರಮುಖ ಸ್ಥಳಗಳ ಮಾಹಿತಿ ಸಿಗದೆ ತೊಂದರೆ ಅನುಭವಿಸಿದವರಿಗೆ ಸಿಹಿಸುದ್ದಿ. ಇನ್ನುಮುಂದೆ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಇರುವ ಅತ್ಯಾಧುನಿಕ ತಂತ್ರಜ್ಞಾನ ಫಲಕಗಳನ್ನು ಕಬ್ಬನ್ ಪಾರ್ಕ್ ಗಳ ವಿವಿಧ ಕಡೆ ಅಳವಡಿಸಲಾಗುತ್ತದೆ.

ಈ ಫಲಕಗಳಲ್ಲಿರುವ ಪ್ರತಿಮೆಗಳು, ಪುರಾತನ ಕಟ್ಟಡಗಳು ಹಾಗೂ ಆಕರ್ಷಕ ಸ್ಥಳಗಳ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ. ಅಲ್ಲದೆ, ಕಬ್ಬನ್ ಪಾರ್ಕ್ ನ ಸುತ್ತಮುತ್ತಲ ಪುರಾತನ ಕಟ್ಟಡಗಳು ಹಗೂ ಪ್ರವಾಸಿ ಕೇಂದ್ರಗಳ ವಿವರಣೆ ದೊರೆಯಲಿದೆ.

ಕಬ್ಬನ್ ಪಾರ್ಕ್ ಜಂಟಿ ಪ್ರವೇಶ ದ್ವಾರ ಸಂಚಾರಕ್ಕೆ ಮುಕ್ತಕಬ್ಬನ್ ಪಾರ್ಕ್ ಜಂಟಿ ಪ್ರವೇಶ ದ್ವಾರ ಸಂಚಾರಕ್ಕೆ ಮುಕ್ತ

ಜತೆಗೆ ಬೆಂಗಳೂರು ನಗರದ ಉಷ್ಣಾಂಶ ಹಾಗೂ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವೂ ಲಭ್ಯವಾಗಲಿದೆ. ಅಲ್ಲದೆ, ಫಲಕಗಳನ್ನು ಸ್ಪರ್ಶಿಸುವ ಮೂಲಕ ಮಾಹಿತಿ ಪಡೆಯಲು ಅನುವು ಮಾಡಿಕೊಡುತ್ತಿದ್ದು, ಉದ್ಯಾನಕ್ಕೆ ಬರುವ ಅಂಧರು ಮತ್ತೊಬ್ಬರ ನೆರವಿಲ್ಲದೆಯೂ ಎಲ್ಲಾ ಭಾಗಗಳಲ್ಲಿ ತಿರುಗಾಡಲೂ ಸಹಕಾರಿಯಾಗಲಿದೆ.

 Modern sign board in cubbon park to assist tourist

ಪಾರ್ಕ್ ನಲ್ಲಿರುವ ಪ್ರತಿಮೆಗಳ ವಿವರ ಹಾಗೂ ಸಾಧನೆ , ಯಾವ ಕಾರಣಕ್ಕಾಗಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಎಂಬುದರ ಕುರಿತು ತಿಳಿಸಲಾಗುತ್ತೆ. ಜತೆಗೆ ಉದ್ಯಾನದಲ್ಲಿನ ಪುರಾತನ ಕಟ್ಟಡಗಳ ಕುರಿತ ವಿವರ ನೀಡಲಾಗುತ್ತದೆ, ಪ್ರತಿ ಕಟ್ಟಡ ನಿರ್ಮಿಸಿದ ವರ್ಷ, ಅವುಗಳ ಇತಿಹಾಸ ಹಾಗೂ ನಿರ್ಮಿಸಿದ ವ್ಯಕ್ತಿಯ ವಿವರಣೆಯನ್ನು ಉಲ್ಲೇಖಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹತೇಂಶ್ ಮುರಗೋಡ ತಿಳಿಸಿದ್ದಾರೆ.

ಕಬ್ಬನ್ ಪಾರ್ಕ್ ನಲ್ಲಿ ಫೋಟೋ ಶೂಟ್ ನಿರ್ಬಂಧ?ಕಬ್ಬನ್ ಪಾರ್ಕ್ ನಲ್ಲಿ ಫೋಟೋ ಶೂಟ್ ನಿರ್ಬಂಧ?

ಅಷ್ಟೇ ಅಲ್ಲದೆ, ಬೆಂಗಳೂರಿಮ ಸುತ್ತಮುತ್ತ ಯಾವ ಪ್ರವಾಸಿ ತಾಣಗಳಿವೆ, ಅವುಗಳು ನಗರದಿಂದ ಎಷ್ಟು ದೂರದಲ್ಲಿದೆ. ಯಾವ ಬಸ್ಸಿನಲ್ಲಿ ಪ್ರಯಾಣಿಸಬಹುದು, ಯಾವ ಭಾಗದಲ್ಲಿ ವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆಯಿದೆ ಎಂಬ ಕುರಿತು ಮಾಹಿತಯೂ ಅಲಲ್ಇರಲಿದೆ. ಜತೆಗೆ ಎಲ್ಲಾ ಫಲಕಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಅಳವಡಿಸಲಾಗಿರುತ್ತದೆ.

ಫಲಕ ಅಳವಡಿಸಲು 35 ಲಕ್ಷ ರೂ ವೆಚ್ಚ: ಪಾರ್ಕಿನ ಏಳು ದ್ವಾರಗಳಲ್ಲಿ ಒಂದೊಂದು ಬೃಹತ್ ಫಲಕ ನಿರ್ಮಿಸಲಾಗುತ್ತದೆ. ಹೈಕೋರ್ಟ್, ಶೇಷಾದ್ರಿ ಅಯ್ಯರ್ ಕೇಂದ್ರ, ಗ್ರಂಥಾಲಯ, ಬ್ಯಾಮಡ್ ಸ್ಟ್ಯಾಂಡ್, ವೆಂಕಟಪ್ಪ ಆರ್ಟ್ ಗ್ಯಾಲರಿ ಹಾಗೂ ವಾಕಿಂಗ್ ಪಾತ್ ಗಳಲ್ಲಿ ಫಲಕಗಳನ್ನು ಇಡಲಾಗುವುದು. ಈ ಮಾಹಿತಿ ಫಲಕ ಅಳವಡಿಕೆಗೆ ಸುಮಾರು 35 ಲಕ್ಷ ರೂ ವೆಚ್ಚವಾಗಲಿದೆ. ಈಗಾಗಲೇ ಹಣಬಿಡುಗಡೆ ಮಾಡಲಾಗಿದೆ.

English summary
The Department of Horticulture decided to Moderm sign board in cubbon park for assist tourists. In this sign boars u will get all the details about cubbon park and dear by visiting places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X