ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಟವರ್ ಶಾಲೆ, ಆಸ್ಪತ್ರೆಗಳಿಂದ 50 ಮೀಟರ್ ಒಳಗಿರುವಂತಿಲ್ಲ

|
Google Oneindia Kannada News

ಬೆಂಗಳೂರು, ಜೂನ್ 4: ಶಾಲೆ ಆಸ್ಪತ್ರೆಗಳಿಂದ 50 ಮೀಟರ್ ಒಳಗೆ ಯಾವುದೇ ಮೊಬೈಲ್ ಟವರ್ ಇರಕೂಡದು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ.

ಟೆಲಿಕಮ್ಯುನಿಕೇಷನ್ ಟವರ್ಸ್ ರೆಗ್ಯುಲೇಷನ್ಸ್ 2019 ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಮುಂದಾಗಿದೆ.ಸಚಿವ ಯುಟಿ ಖಾದರ್ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮೊಬೈಲ್ ಟವರ್ ಎಗ್ಗಿಲ್ಲದೆ ತಲೆ ಎತ್ತುತ್ತಿವೆ. ಮೇ 29ರಿಂದ ಅನ್ವಯವಾಗುವಂತೆ ಆದೇಶಿಸಲಾಗಿದೆ.

ಮೈಸೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೊಬೈಲ್ ಟವರ್ ದಂಧೆ ಮೈಸೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೊಬೈಲ್ ಟವರ್ ದಂಧೆ

ಈ ಆದೇಶದ ಪ್ರಕಾರ ಶಾಲೆ, ಆಸ್ಪತ್ರೆ, ಧಾರ್ಮಿಕ ಕಟ್ಟಡಗಳಿಂದ 50 ಮೀಟರ್ ದೂರದಲ್ಲಿ ಮೊಬೈಲ್ ಟವರ್‌ಗಳು ಇರಬೇಕು. ಕೆರೆ, ಟ್ಯಾಂಕ್‌ಗಳಿಂದ ಐದು ಮೀಟರ್‌ಗಳು, ನಾಲಾ, ಕ್ಯಾನಲ್‌ನಿಂದ 10 ಹೆಕ್ಟೇರ್, ಐದು ಮೀಟರ್‌ನಷ್ಟು ದೂರದಲ್ಲಿರಬೇಕು.

Mobile towers should 50 meters away from schools and hospitals

ಹಾಗೆಯೇ ರೆಸಿಡೆನ್ಷಿಯಲ್ ಪ್ರದೇಶದಲ್ಲಿ ಬಫರ್ ಜೋನ್‌ನಿಂದ ಕನಿಷ್ಠ 3 ಮೀಟರ್ ದೂರದಲ್ಲಿರಬೇಕು. ಹೊಸ ಟವರ್ ನಿರ್ಮಾಣಕ್ಕೆ ಒಂದು ಲಕ್ಷ ರೂ ಬಿಬಿಎಂಪಿಗೆ ನೀಡಬೇಕು.

ಟವರ್‌ ಅಳವಡಿಕೆಗೆ ಅನುಮತಿಗೆ ಅರ್ಜಿ ಸಲ್ಲಿಸುವ ವೇಳೆ ಸ್ಥಳ ನಕ್ಷೆ, ನಿವೇಶನ ನಕ್ಷೆ, ಸ್ಟ್ರಕ್ಚರಲ್‌ ಸ್ಟೆಬಿಲಿಟಿ ಸರ್ಟಿಫಿಕೇಟ್‌, ಮಾಲಿಕತ್ವ ಅಥವಾ ಗುತ್ತಿಗೆ ದಾಖಲೆಗಳು, ಅಳವಡಿಕೆಯಾಗುವ ಟವರ್‌, ಫ್ರೀಕ್ವೆನ್ಸಿ, ತೂಕ (ಟನ್‌ಗಳಲ್ಲಿ) ಮಾಹಿತಿ ಒದಗಿಸಬೇಕು.

ಜತೆಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ, ಎಆರ್‌ಎಐನಿಂದ ವಿತರಿಸಿರುವ ದಾಖಲೆ ಪತ್ರ ಒದಗಿಸಬೇಕು. ಈಗಾಗಲೇ ಅಳವಡಿಕೆಯಾಗಿರುವ ಟವರ್‌ಗಳು ಇವೆಲ್ಲಾ ಮಾಹಿತಿಯೊಂದಿಗೆ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು.

English summary
Karnataka government orders Mobile towers should 50 meters away from schools and hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X