ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್‌ನಲ್ಲಿ ಇನ್ನು ಮೊಬೈಲ್ ಬಳಕೆಗೆ ನಿರ್ಬಂಧ: ಸಭಾಪತಿ ಘೋಷಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಇನ್ನು ಮೊಬೈಲ್ ಬಳಕೆಯನ್ನು ನಿಷೇಧ ಮಾಡಲಾಗಿದೆ. ಈ ಕುರಿತು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅಧಿಕೃತ ಆದೇಶ ಹೊರಡಿಸಿ ಮೊಬೈಲ್ ಬಳಕೆಗೆ ನಿರ್ಬಂಧ ಹೇರಿದ್ದಾರೆ.

ಈ ಹಿಂದೆ 2011ರಲ್ಲೇ ಮೊಬೈಲ್ ನಿಷೇಧಿಸಿದರೂ ಸದನದಲ್ಲಿ ಮೊಬೈಲ್ ಫೋನ್ ಕಾಣಿಸುತ್ತಿದ್ದವು. ಅಲ್ಲದೆ ಇನ್ನೂ ಕೆಲವರು ಅಶ್ಲೀಲ ವಿಡಿಯೋ, ಚಿತ್ರಗಳನ್ನು ಸಹ ನೋಡುವುದು ಕಂಡುಬಂದಿದೆ.

ವಿಧಾನ ಪರಿಷತ್‌ ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಶಾಸಕ?ವಿಧಾನ ಪರಿಷತ್‌ ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಶಾಸಕ?

ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇದೀಗ ವಿಧಾನ ಪರಿಷತ್‌ನಲ್ಲಿ ಕಟ್ಟುನಿಟ್ಟಾಗಿ ಮೊಬೈಲ್ ನಿರ್ಬಂಧಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಘೋಷಣೆ ಮಾಡಿದ್ದಾರೆ.

Mobile Phones Now Banned In Karnataka Legislative Council

ಸಭಾಪತಿಗಳ ಘೋಷಣೆ ಹಿನ್ನೆಲೆ ವಿಧಾನ ಪರಿಷತ್ ನಲ್ಲಿ ಇನ್ಮುಂದೆ ಮೊಬೈಲ್ ಬ್ಯಾನ್ ಆಗಿದೆ. ಒಂದು ವೇಳ ಮಾಹಿತಿಗಾಗಿ ಮೊಬೈಲ್ ನೋಡಬೇಕು ಎಂದರ ಸಭಾಪತಿಗಳ ಅನಮತಿ ಕಡ್ಡಾಯವಾಗಿದೆ. ಈ ಕುರಿತು ಸಭಾಪತಿಗಳಿಂದ ಅಧಿಕೃತ ಘೋಷಣೆಯಾಗಿದೆ. ಪ್ರಕಟಣೆ ಮೂಲಕ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ನಾನು ಬ್ಲೂ ಫಿಲ್ಮ್ ನೋಡಿಲ್ಲ, ಅವುಗಳನ್ನು ಡಿಲೀಟ್ ಮಾಡುತ್ತಿದ್ದೆ!ನಾನು ಬ್ಲೂ ಫಿಲ್ಮ್ ನೋಡಿಲ್ಲ, ಅವುಗಳನ್ನು ಡಿಲೀಟ್ ಮಾಡುತ್ತಿದ್ದೆ!

ಈ ಹಿಂದೆ ಜೂನ್ 3, 2011 ರಲ್ಲಿಯೇ ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶವಾಗಿತ್ತು. ಆದರೂ ಸದನದೂಳಗೆ ಮೊಬೈಲ್‌ಗಳು ರಿಂಗಣಿಸುತ್ತಿದ್ದವು. ಇದೀಗ ಸಭಾಪತಿಗಳು ಖಡಕ್ ಎಚ್ಚರಿಕೆ ನೀಡಿದ್ದು, ಇದು ಕಡೆಯ ವಾರ್ನಿಂಗ್. ಇನ್ಮುಂದೆ ಸದನ ಒಳಗೆ ಮೊಬೈಲ್ ತರುವಂತಿಲ್ಲ ಎಂದಿದ್ದಾರೆ.

Mobile Phones Now Banned In Karnataka Legislative Council

ಒಂದು ವೇಳೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಮೊಬೈಲ್ ತಂದರೂ ಸ್ವಿಚ್ ಆಫ್ ಮಾಡಬೇಕು. ಮಾಹಿತಿಗಾಗಿ ಮೊಬೈಲ್ ತರುವುದಾದರೆ, ಸಭಾಪತಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ಪ್ರಕಟಿಸಿದ್ದಾರೆ.

ಜನವರಿ 29ರಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೇಲೆ ಸದನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿತ್ತು. ಪ್ರಷ್ಟೋತ್ತರ ಅವಧಿ ವೇಳೆ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ಮಾಡುತ್ತಿದ್ದರು. ಸರೆಯಾಗಿತ್ತು.

English summary
Mobile usage is now banned in the Karnataka Legislative Council. Pratapchandra Shetty, the Chairman, has issued an official directive to restrict the use of mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X