ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಬ್ರೈನ್ ಟ್ಯೂಮರ್?

|
Google Oneindia Kannada News

ಬೆಂಗಳೂರು, ಜೂನ್ 8: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಬ್ರೈನ್ ಟ್ಯೂಮರ್ ಕಾಯಿಲೆ ಹೆಚ್ಚಾಗುತ್ತಿದೆ, ಇದಕ್ಕೆ ಮೊಬೈಲ್ ಫೋನ್ ಅವಲಂಬನೆಯೇ ಕಾರಣ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಮಕ್ಕಳಲ್ಲಿ ಬ್ರೈನ್ ಟ್ಯೂಮರ್ ಹೆಚ್ಚಾಗುತ್ತಿದೆ, ಮೊಬೈಲ್ ಬಳಕೆಯಿಂದಲೇ ಬ್ರೈನ್ ಟ್ಯೂಮರ್ ಬರುತ್ತಿದೆ ಎಂದು ಇನ್ನೂ ದೃಢಪಟ್ಟಿಲ್ಲ, ಆದರೆ ಇದೂ ಒಂದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ನಿಪಾಹ್ ವೈರಸ್ ಎಂದರೇನು? ಪತ್ತೆ ಹೇಗೆ, ಲಕ್ಷಣ, ಪರಿಹಾರಗಳು ನಿಪಾಹ್ ವೈರಸ್ ಎಂದರೇನು? ಪತ್ತೆ ಹೇಗೆ, ಲಕ್ಷಣ, ಪರಿಹಾರಗಳು

ಪೀಡಿಯಾಟ್ರಿಕ್ ಬ್ರೈನ್ಟ್ಯೂಮರ್ ಎನ್ನುವುದು ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಎಂದೂ ಕರೆಯಬಹುದು, ಆದರೆ ಆಂಡ್ರಾಯ್ಡ್ ಮೊಬೈಲ್‌ಗಳು ಬಂದ ಬಳಿಕ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಮೊದಲು ತರಗತಿಯಲ್ಲಿ ಫರ್ಸ್ಟ್‌ ಬಂದರೆ ಚಾಕಲೋಟ್ ಕೊಡಿಸುತ್ತೇನೆ ಎನ್ನುತ್ತಿದ್ದ ಪೋಷಕರು ಶಾಲೆಗೆ ಫರ್ಸ್ಟ್ ಬಂದರೆ ಮೊಬೈಲ್ ಕೊಡಿಸುತ್ತೇನೆ ಎನ್ನುವ ಆಮಿಷವೊಡ್ಡುತ್ತಿದ್ದಾರೆ. 10 ವರ್ಷದೊಳಗಿನ ಮಕ್ಕಳು ಹೆಚ್ಚು ಮೊಬೈಲ್‌ಗಳಿಗೆ ಅಡಿಕ್ಟ್ ಆಗಿರುವ ಕಾರಣ ಅಂತಹ ಮಕ್ಕಳಲ್ಲಿ ಬ್ರೈನ್ ಟ್ಯೂಮರ್ ಕಾಣಿಸಿಕೊಳ್ಳುತ್ತಿದೆ.

Mobile phones may cause brain tumour in Children

ಅಪೊಲೊ ಆಸ್ಪತ್ರೆಯ ಈ ಕುರಿತು ಮಾಹಿತಿ ನೀಡಿದ್ದು, ಎಲೆಕ್ಟ್ರೋ ಮ್ಯಾಗ್ನೆಟಿಕ್ ವೇವ್ ಹಾಗೂ ಮೈಕ್ರೋವೇವ್ಸ್ ಮೊಬೈಲ್ ಮೂಲಕ ಹೋಗುವ ತರಂಗಗಳು ಮೆದುಳಿನಲ್ಲಿ ನಾಲ್ಕು ಇಂಚಿನಷ್ಟು ಹಾದುಹೋಗುತ್ತದೆ. ಮೊಬೈಲ್ ರೇಡಿಯೇಷನ್ ಮೆದುಳಿನಲ್ಲಿ ಸಾಕಷ್ಟು ತೊಂದರೆಯನ್ನು ಮಾಡುತ್ತದೆ.

ಮೆದುಳು ಬೆಳವಣಿಗೆಯ ಹಂತದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಬೆದಳಿನ ಬೆಳವಣಿಗೆ ಕುಂಠಿತವಾಗಿ ಹಲವು ರೋಗಗಳಿಗೆ ಎಡೆಮಾಡಿಕೊಡಬಹುದು. 15 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಕೊಡದಿರುವುದೇ ಒಳಿತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

English summary
Mobile phones may cause brain tumour in Children, Doctors reported an increase in brain tumour cases among children, but it haas not been proved but it is one of the reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X