ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಚಾಲಕರು ಇನ್ನು ಮೊಬೈಲ್‌ನಿಂದ ನಾಟ್‌ ರೀಚಬಲ್ ಕಡ್ಡಾಯ

|
Google Oneindia Kannada News

ಬೆಂಗಳೂರು, ನವೆಂಬರ್ 10: ಬಿಎಂಟಿಸಿ ಚಾಲಕರು ನವೆಂಬರ್ 15ರಿಂದ ಕರ್ತವ್ಯಕ್ಕೆ ಹಾಜರಾಗುವ ವೇಳೆ ಮೊಬೈಲ್ ಜೊತೆ ಇಟ್ಟುಕೊಳ್ಳುವಂತಿಲ್ಲ ಎಂದು ಬಿಎಂಟಿಸಿ ಆದೇಶವನ್ನು ಜಾರಿಗೊಳಿಸಿದೆ.

ಬಸ್ ಚಾಲಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದು ಮತ್ತು ತಮ್ಮ ಬಳಿ ಇಟ್ಟುಕೊಳ್ಳುವುದನ್ನು ಬಿಎಂಟಿಸಿ ನಿರ್ಬಂಧಿಸಿದ್ದು ನ,15ರಿಂದ ಈ ಆದೇಶ ಜಾರಿಗೆ ಬರಲಿದೆ. ಬಸ್ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವುದು, ಬಳಸುವುದು ಅಪಾಯಕಾರಿ ಎಂದು ತಿಳಿದಿದ್ದರೂ ಚಾಲಕರು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ನವೆಂಬರ್ 15ರ ನಂತರ ಚಾಲಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದು ಕಂಡುಬಂದಲ್ಲಿ ಸೇವೆಯಿಂದ ಅಮಾನತುಗೊಳಿಸುವ ಎಚ್ಚರಿಕೆಯನ್ನು ಬಿಎಂಟಿಸಿ ನೀಡಿದೆ. ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವಂತಿಲ್ಲ, ಆದರೆ ತಮ್ಮ ಬಳಿ ಮೊಬೈಲ್ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ.

ಇತ್ತೀಚೆಗೆ ಡ್ರೈವರ್‌ಗಳು ಮೊಬೈಲ್ ಬಳಕೆ ಮಾಡುತ್ತಾ, ಸಿಗ್ನಲ್ ಜಂಪ್ ಮಾಡುವುದು, ರಾಶ್ ಡ್ರೈವಿಂಗ್ ಒಂದೇ ಕೈನಲ್ಲಿ ಡ್ರೈವಿಂಗ್ ಮಾಡುವುದು ಹೆಚ್ಚಾಗುತ್ತಿದ್ದು, ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿತ್ತು ಹೀಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದೆ.

ಬಿಎಂಟಿಸಿ ನೌಕರರಿಗೆ ಅಂತರ್ ನಿಗಮ ವರ್ಗಾವಣೆ ಭಾಗ್ಯ

ಬಿಎಂಟಿಸಿ ನೌಕರರಿಗೆ ಅಂತರ್ ನಿಗಮ ವರ್ಗಾವಣೆ ಭಾಗ್ಯ

ಬಿಎಂಟಿಸಿ ನೌಕರರು ಬೇರೆ ನಿಗಮಗಳಿಗೆ ವರ್ಗಾವಣೆ ಮಾಡುವಂತೆ ಹಲವಾರು ವರ್ಷಗಳಿಂದ ಮನವಿ ಮಾಡುತ್ತಾ ಇದ್ದರೂ ಯಾವುದೇ ಪ್ರಯೋಜನೆಯಾಗಿರಲಿಲ್ಲ. ಆದರೆ ಇದೀಗ ಬಿಎಂಟಿಸಿ ನೌಕರರು ಅಂತರ್ ನಿಗಮದಲ್ಲೂ ಕರ್ತವ್ಯ ನಿರ್ವಹಿಸಬಹುದು ಎಂದು ಆದೇಶ ಹೊರ ಬಿದ್ದಿದೆ. ಬಿಎಂಟಿಸಿಯಲ್ಲಿನ 2,237 ಸಿಬ್ಬಂದಿ ಅಂತರ್ ನಿಗಮ ವರ್ಗಾವಣೆಯಗೆ ಕಾಯುತ್ತಿದ್ದು, ಮೊದಲ ಹಂತವಾಗಿ 375 ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಉಳಿದವರನ್ನು ಹಂತ ಹಂತವಾಗಿ ವರ್ಗಾವಣೆ ಮಾಡಲು ನಿಗಮ ನಿರ್ಧರಿಸಿದೆ.

ಆಗಸ್ಟ್‌ನಲ್ಲೇ ಇತ್ತು ಚಿಂತನೆ

ಆಗಸ್ಟ್‌ನಲ್ಲೇ ಇತ್ತು ಚಿಂತನೆ

ಬಿಎಂಟಿಸಿ ಬಸ್‌ ಚಾಲಕರೇ ಹುಷಾರ್‌ ! ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡ್ತಿದೀರ, ವಾಹನ ಚಲಾವಣೆ ಸಮಯದಲ್ಲಿ ಕಡ್ಡಾಯವಾಗಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿ, ಇದು ನಾವು ಹೇಳುತ್ತಿರುವುದಲ್ಲ ಸ್ವತಃ ಬಿಎಂಟಿಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ.

ಬಸ್‌ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದರಿಂದ ಚಾಲಕರ ಗಮನ ಸಂಪೂರ್ಣವಾಗಿ ಫೋನಿನೆಡೆಗೆ ಇರುತ್ತದೆ ಅದರಿಂದ ಅಪಘಾತದ ಪ್ರಮಾಣವೂ ಹೆಚ್ಚುತ್ತಿದೆ. ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತಾರೆ, ಪ್ರತಿಯೊಬ್ಬರಿಗೂ ಬಸ್‌ ಮೇಲೆ ವಿಶ್ವಾಸ ಕಳೆದುಕೊಳ್ಳುವ ಮುನ್ನ ತಪ್ಪನ್ನು ತಿದ್ದಿಕೊಳ್ಳಿ ಎಂದು ಅಧಿಕಾರಿಗಳು ತಿಳಿ ಹೇಳಿದ್ದಾರೆ.

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

ಬೆಂಗಳೂರು ಮಹಾನಗರ ಪಾಲಿಕೆಯ ಸಾವಿರಕ್ಕೂ ಹೆಚ್ಚು ಬಸ್‌ಗಳು ಈ ವರ್ಷ ಗುಜರಿಗೆ ಬೀಳಲಿದೆ. ಬ್ರೇಕ್‌ ಫೇಲ್‌ ಆಗುವುದು, ರಸ್ತೆ ಮಧ್ಯೆ ಕೆಟ್ಟು ನಿಲ್ಲುವುದು, ಬಸ್‌ ಬಾಗಿಲು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದು ಇನ್ನಿತರೆ ಸಮಸ್ಯೆಗಳು ಎದುರಾಗಿತ್ತು.ಹಾಗಾಗಿ 1298 ಬಿಎಂಟಿಸಿ ಬಸ್‌ಗಳಿಗೆ ಗುಜರಿ ಭಾಗ್ಯ ಕರುಣಿಸಲು ಮುಂದಾಗಿದೆ. ಸಂಚಾರ ಆರಂಭಿಸಿ 11 ವರ್ಷವಾಗಿರುವ ಬಸ್‌ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ 8.5 ಲಕ್ಷ ಕಿ.ಮೀ ಸಂಚರಿಸಿರುವ ಬಸ್‌ಗಳು ಗುಜರಿಗೆ ಬೀಳಲಿವೆ. 2017-18ನೇ ಸಾಲಿನಲ್ಲಿ 1,398 ಬಸ್‌ಗಳನ್ನು ಗುಜರಿಗೆ ಹಾಕಲಾಗಿತ್ತು.

ಬಿಎಂಟಿಸಿ ಬಸ್‌ಪಾಸ್ ಎಲ್ಲಾ ವಿದ್ಯಾರ್ಥಿಗಳನ್ನು ತಲುಪಿಲ್ಲ

ಬಿಎಂಟಿಸಿ ಬಸ್‌ಪಾಸ್ ಎಲ್ಲಾ ವಿದ್ಯಾರ್ಥಿಗಳನ್ನು ತಲುಪಿಲ್ಲ

ಮೊಬೈಲ್ ಟಪಲ್ಇಕೇಷನ್ ಮೂಲಕ ಬಿಎಂಟಿಸಿ ಬಸ್‌ಪಾಸ್‌ಗಳಿಗೆ ಅರ್ಜಿ ಸಲ್ಲಿಸಿದರೆ ಮನೆಗೆ ನೇರವಾಗಿ ಬಸ್‌ಪಾಸ್ ಬಂದು ಕೈಗೆ ಸೇರುತ್ತದೆ ಎಂದಿದ್ದರು ಆದರೆ ಎಲ್ಲಾ ವಿದ್ಯಾರ್ಥಿಗಳ ಮನೆಗೆ ಇದುವರೆಗೂ ಬಸ್ ಪಾಸ್‌ ಬಂದಿಲ್ಲ, ಬಸ್‌ಪಾಸ್‌ಗೆ ಹಣ ನೀಡಿರುವ ರಶೀದಿಯನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಓಡಾಡುವಂತಾಗಿದೆ.

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ

English summary
In a controversial order, BMTC has given instruction to its drivers that they should not carry cell phones during their duty hours. This new regulation will be implemented from November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X