ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ

|
Google Oneindia Kannada News

Recommended Video

In Yeddyurappa house mobiles are ban | Oneindia Kannada

ಬೆಂಗಳೂರು, ನವೆಂಬರ್ 5: ಹುಬ್ಬಳ್ಳಿಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಅವರ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬರುವವರಿಗೆ ,ಮೊಬೈಲ್ ನಿಷೇಧಿಸಲಾಗಿದೆ.

ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬರುವ ಕಾರ್ಯಕರ್ತರು, ಮುಖಂಡರುಗಳಿಗೆ ಮೊಬೈಲ್ ತರದಂತೆ ಸೂಚನೆ ನೀಡಲಾಗಿದೆ.

ಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳುಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳು

ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಎಂ ಸೂಚನೆ ಮೇರೆಗೆ ಮೊಬೈಲ್ ನಿಷೇಧದ ಬೋರ್ಡ್ ಅಳವಡಿಸಲಾಗಿದೆ.

ಸಿಎಂ ಭೇಟಿಗೆ ಬಂದವರು ಮೊಬೈಲ್‌ಗೆ ಪ್ರವೇಶ ಇಲ್ಲ ಎಂದು ಬೋರ್ಡ್ ಅಳವಡಿಸಲಾಗಿದೆ.ಡಾಲರ್ಸ್ ಕಾಲೊನಿ ನಿವಾಸದಲ್ಲಿ ಹೋಗೊಂದು ಬೋರ್ಡ್ ಅಳವಡಿಸಲಾಗಿದೆ.

ಯಡಿಯೂರಪ್ಪ ಆಡಿಯೋ, ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್

ಯಡಿಯೂರಪ್ಪ ಆಡಿಯೋ, ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್

ಆಪರೇಷನ್ ಕಮಲ ಬಗ್ಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಡಿಯೋ ವಿಚಾರವನ್ನು ಕಾಂಗ್ರೆಸ್​ ಸುಪ್ರೀಂ ಕೋರ್ಟ್​ಗೆ ಕೊಂಡೊಯ್ದಿದೆ. ಇಂದು ಸುಪ್ರೀಂ ಕೋರ್ಟ್​ನಲ್ಲಿ ಕಾಂಗ್ರೆಸ್​ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್​ ಸಿಬಲ್​ ನ್ಯಾಯಮೂರ್ತಿ ರಮಣ್​ ನೇತೃತ್ವದ ಪೀಠದಲ್ಲಿ ಯಡಿಯೂರಪ್ಪ ಆಡಿಯೋ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಏನಿದು ಘಟನೆ?

ಏನಿದು ಘಟನೆ?

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಆಪರೇಷನ್​ ಕಮಲದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್​ ಶಾ ಅವರೇ ಹೊತ್ತಿದ್ದರು ಎಂದು ಮಾತನಾಡಿದ್ದರು ಎನ್ನಲಾಗಿತ್ತು. ಬಿಎಸ್​ ಯಡಿಯೂರಪ್ಪ ಧ್ವನಿಯನ್ನೇ ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಜತೆಗೆ ಕಾಂಗ್ರೆಸ್​ ರಾಜ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಬಿಜೆಪಿಯ ವಿರುದ್ಧ ಈ ಆಡಿಯೋವನ್ನು ಅಸ್ತ್ರವಾಗಿ ಬಳಸಿದ್ದರು.

ಬಿಎಸ್ವೈ ಆಡಿಯೋ ಲೀಕ್ ಮಾಡಿದವರ 'ಸ್ಪೋಟಕ' ಹೆಸರು ಬಹಿರಂಗಬಿಎಸ್ವೈ ಆಡಿಯೋ ಲೀಕ್ ಮಾಡಿದವರ 'ಸ್ಪೋಟಕ' ಹೆಸರು ಬಹಿರಂಗ

ಬಿಜೆಪಿ ನೀಡಿದ್ದ ಸ್ಪಷ್ಟನೆ ಏನು?

ಬಿಜೆಪಿ ನೀಡಿದ್ದ ಸ್ಪಷ್ಟನೆ ಏನು?

ಅನರ್ಹ ಶಾಸಕರ ಪ್ರಕರಣ ಮಾನ್ಯ ಸುಪ್ರೀಂಕೋರ್ಟ್ ನಲ್ಲಿ ಇರುವಾಗ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವುದು ರಾಜಕೀಯ ಷಡ್ಯಂತ್ರವಾಗಿದೆ ಮಾತ್ರವಲ್ಲದೆ ನ್ಯಾಯಾಲಯಕ್ಕೂ ಚ್ಯುತಿ ತರುವ ಸತ್ಯಂತ ಕೆಟ್ಟ ವಿಷಯವಾಗಿದೆ.

ವರದಿ ಸಲ್ಲಿಸಿರುವುದು ಹಾಸ್ಯಾಸ್ಪದ

ವರದಿ ಸಲ್ಲಿಸಿರುವುದು ಹಾಸ್ಯಾಸ್ಪದ

ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನಿಸಿ ರಾಜಭವನಕ್ಕೆ ಹೋಗಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ವಜಾ ಮಾಡಲು ಆಗ್ರಹಿಸಿ ವರದಿ ಸಲ್ಲಿಸಿರುವುದು ಹಾಸ್ಯಾಸ್ಪದ, ಆಧಾರ ರಹಿತ ಮತ್ತು ಅರ್ಥಹೀನವಾಗಿದೆ. ಕಾಂಗ್ರೆಸ್‌ಗೆ ಈ ರೀತಿಯ ಸುಳ್ಳು ಆಧಾರ, ಕಳ್ಳ ಆಡಿಯೋ ವಿಡಿಯೋಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದು ಹವ್ಯಾಸವಾಗಿದೆ ಎಂದು ಬಿಜೆಪಿ ದೂರಿದೆ.

English summary
For those who come to meet Chief Minister Yediyurappa, mobile has been banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X