ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೋಲ್ ಪಾವತಿ ವಿವಾದ : ಗಲಾಟೆ, ಬೂತ್‌ಗೆ ಬೆಂಕಿ

|
Google Oneindia Kannada News

ಬೆಂಗಳೂರು, ಏ. 20 : ಟೋಲ್ ಪಾವತಿ ವಿಚಾರದಲ್ಲಿ ಆರಂಭವಾದ ಜಗಳ ಟೋಲ್ ಬೂತ್‌ಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚುವುದರೊಂದಿಗೆ ಮುಕ್ತಾಯಗೊಂಡ ಘಟನೆ ನಗರದ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ. ಲ್ಯಾಂಕೋ ಕಂಪನಿಗೆ ಸೇರಿದ ಟೋಲ್ ಗೇಟ್‌ಗಳು ಧ್ವಂಸಗೊಂಡಿವೆ.

ಹುಸ್ಕೂರು ಕೋಡಿ ಬಳಿ ಲ್ಯಾಂಕೋ ಸಂಸ್ಥೆ ನಿರ್ಮಿಸಿರುವ ಟೋಲ್ ಘಟಕದ ಪಕ್ಕದ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಅವರು ಭಾನುವಾರ ತಮ್ಮ ಕುಟುಂಬ ಸದಸ್ಯರೊಂದಿಗೆ ಸ್ಕಾರ್ಪಿಯೊ ವಾಹನದಲ್ಲಿ ತೆರಳುತ್ತಿದ್ದಾಗ ಟೋಲ್ ಸಿಬ್ಬಂದಿ ಅವರನ್ನು ತಡೆದು ಹಲ್ಲೆ ಮಾಡಿರುವುದು ಈ ಘಟನೆಗೆ ಕಾರಣವಾಗಿದೆ. [ದೇವನಹಳ್ಳಿ ರಸ್ತೆ ಟೋಲ್ ದರ ಹೆಚ್ಚಳ]

toll plaza

ಟೋಲ್‌ ಗೇಟ್‌ ಬಳಿ ನಾರಾಯಣಸ್ವಾಮಿ ಅವರ ಕಾರನ್ನು ಸಿಬ್ಬಂದಿ ತಡೆದಿದ್ದಾರೆ. ಸ್ಥಳೀಯರು ಎಂದು ಅವರು ಗುರುತಿನ ಚೀಟಿಯನ್ನು ತೋರಿಸಿದರೂ ಸಿಬ್ಬಂದಿ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಕಾರಿನಿಂದ ಇಳಿದ ನಾರಾಯಣ ಸ್ವಾಮಿ ಮತ್ತು ಅವರ ಪುತ್ರನ ಮೇಲೆ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. [ಓಕಳಿಪುರದಲ್ಲಿ ಟ್ರಾಫಿಕ್ ಜಾಮ್ ಇನ್ಮುಂದೆ ಕನಸು]

ಟೋಲ್‌ ಬೂತ್‌ಗೆ ಬೆಂಕಿ : ನಾರಾಯಣ ಸ್ವಾಮಿ ತಕ್ಷಣ ಗ್ರಾಮಸ್ಥರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮದ ಜನರು ಟೋಲ್ ಗೇಟ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. 8 ಟೋಲ್ ಬೂತ್‍ಗಳನ್ನು ಕೆಡವಿ ಹಾಕಿದ್ದಾರೆ, ಮೂರು ಟೋಲ್‌ ಬೂತ್‌ಗೆ ಬೆಂಕಿ ಹಚ್ಚಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಜಾರ್ಜ್ ನಡೆಸಿ ಸ್ಥಳೀಯರನ್ನು ಚದುರಿಸಿದರು. ಟೋಲ್‌ಗೇಟ್‌ನಲ್ಲಿ ನಡೆದ ಗಲಾಟೆ ಬಗ್ಗೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಂಗಳೂರು ಎಸ್ಪಿ ರಮೇಶ್ ಭಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿಂದೆಯೂ ಟೋಲ್‍ ಬೂತ್‌ ಸಿಬ್ಬಂದಿ ಸ್ಥಳೀಯರ ಮೇಲೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡ ನಾಯರಾಯಣ ಸ್ವಾಮಿ ಪುತ್ರ ಮಂಜುನಾಥ್ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Mob destroyed a toll plaza at Huskur Kodi near Hoskote on the outskirts of the Bengaluru City on Sunday after gram panchayat member assaulted by the toll plaza staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X