• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮಲಿಂಗಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಸೌಮ್ಯ ರೆಡ್ಡಿ ಅಸಮಾಧಾನ

|
   ರಾಮಲಿಂಗಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ..! | Oneindia Kannada

   ಬೆಂಗಳೂರು, ಡಿಸೆಂಬರ್ 22: ಮಾಜಿ ಸಚಿವ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿರುವ ಕಾರಣ ಪುತ್ರಿ, ಶಾಸಕಿ ಸೌಮ್ಯ ರೆಡ್ಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

   ಇಂದು ನಡೆಯಲಿರುವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರಚನೆಯಲ್ಲಿ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನಸೊಗದಿರುವುದಕ್ಕೆ ಟ್ವಿಟ್ಟರ್‌ನಲ್ಲಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ.

   ಸಂಪುಟ ವಿಸ್ತರಣೆ: ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನ ಯಾರಿಗೆ?

   ಕಾಂಗ್ರೆಸ್ ಪಕ್ಷ ನನಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಟಿಕೆಟ್ ನೀಡಿ ಜಯನಗರದ ಮತದಾರರು ನನಗೆ ಆಶೀರ್ವದಿಸಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಬೇಕಿದೆ ಎಂದು ಹೇಳಿದ್ದಾರೆ.

   ಅಷ್ಟೇ ಅಲ್ಲದೆ ನನಗೆ ಯಾವ ರೀತಿಯ ಪಾರ್ಲಿಮೆಂಟ್ ಸೆಕ್ರೆಟರಿ ಅಥವಾ ಯಾವುದೇ ರೀತಿಯ ಹುದ್ದೆ ಬೇಡ, ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವವರಿಗೆ ಸ್ವಲ್ಪ ಹಿಂದೇಟು ಆಗುವುದು ಒಂದು ರಾಜಕೀಯ ಭಾಗ ಆದರೆ ಈ ರೀತಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ಬೇಸರವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

   ನನಗೆ ನನ್ನ ಕ್ಷೇತ್ರದ ಜನರಿಗೆ ಕೆಲಸ ಮಾಡಿ ಅವರ ಋಣವನ್ನು ತೀರಿಸಬೇಕಾಗಿದೆ. ನನ್ನ ತಂದೆ 2 ಬಾರಿ ಡಿಸಿಸಿ ಅಧ್ಯಕ್ಷರಾಗಿ ಹಾಗೂ 7 ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳ ದುಡಿದಿದ್ದಾರೆ.

   ಶನಿವಾರವೇ ಪ್ರಮಾಣವಚನ: ಸಂಪುಟ ಸೇರುವ ಶಾಸಕರು ಯಾರು? ಇಲ್ಲಿದೆ ಪಟ್ಟಿ

   ಕೇವಲ ಒಂದು ಶಾಸಕರಿಂದ ಈಗ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಶಾಸಕರಿದ್ದಾರೆ. ನಾನು ಅವರನ್ನು ಮಂತ್ರಿಯಾಗಿ ನೋಡಲು ಇಷ್ಟಪಡುತ್ತೇನೆ. ಬೆಂಗಳೂರಿನಲ್ಲಿ ಎಲ್ಲ 28 ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರು ಗೆಲ್ಲಲು ಶ್ರಮಿಸಬೇಕಾದ ಅಗತ್ಯ ಇದೆ ಅಂತ ಬರೆದುಕೊಂಡಿದ್ದಾರೆ. ಈ ಪತ್ರವನ್ನು ಕರ್ನಾಟಕ ಕಾಂಗ್ರೆಸ್ ಗೆ ಟ್ಯಾಗ್ ಮಾಡಿದ್ದಾರೆ.

   ಸಂಸದೀಯ ಕಾರ್ಯದರ್ಶಿಯಂತಹ ಜವಬ್ದಾರಿ ನಿರ್ವಹಿಸಲಾಗಲ್ಲ. ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಹಿಂದೇಟು ಆಗುವುದು ಸಹಜ. ಅದು ರಾಜಕೀಯದ ಒಂದು ಭಾಗ ಎಂದು ಟ್ವಿಟ್ಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

   ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ದುಡಿದವರು

   ರಾಮಲಿಂಗಾರೆಡ್ಡಿಯವರು ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೂ ಕಾಂಗ್ರೆಸ್ ಅನ್ಯಾಯಮಾಡಿದೆ ಇದು ಲೋಕಸಭೆ ಸಭೆ ಚುನಾವಣೆ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಐಎನ್‌ಸಿ ಜಗಳೂರು ಅಸ್ಸೆಂಬ್ಲಿ ಟ್ವೀಟ್ ಮಾಡಿದೆ.

   ಇಂದು ಪ್ರಮಾಣವಚನ ನಡೆಯೋದು ಅನುಮಾನ: ಬಿಎಸ್ ವೈ

   ರಾಜಕೀಯ ನಿಮ್ಮ ಕುಟುಂಬದ ಆಸ್ತಿಯಲ್ಲ

   ರಾಜಕೀಯ ನಿಮ್ಮ ಕುಟುಂಬದ ಆಸ್ತಿ ಅಲ್ಲ ಪ್ರಜಾಪ್ರಬುತ್ವ ರಾಷ್ಟ್ರದಲ್ಲಿ ಉತ್ತಮ ಕೆಲಸ ಮಾಡುವವರಿಗೇ ಬಿಟ್ಟು ಕೊಡಬೇಕು .ಅಧಿಕಾರ ಇದ್ದಾಗ ಒಂದು ಜನಾಂಗವನ್ನು ಕೀಳು ಮಟ್ಟದ ಹೇಳಿಕೆ ಕೊಡೋದು ನಿಲ್ಲಿಸಿದ್ದರೇ ಅವರ ಸ್ಥಾನಕ್ಕೆ ಯಾವುದೇ ಕೊರತೆ ಉಂಟಾಗುತ್ತಿರಲಿಲ್ಲ .ಅಧಿಕಾರ ಇರುವಾಗ ಎಲ್ಲರನ್ನು ಒಂದೇ ರೀತಿ ಕಾಣಬೇಕು ಎಂದು ಹಫೀಸ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ

   ಪಕ್ಷದ ನಿರ್ಧಾರಕ್ಕೆ ಗೌರವ ಕೊಡಿ

   ಪಕ್ಷದ ನಿರ್ಧಾರಕ್ಕೆ ಗೌರವ ಕೊಡಿ, ಕಾಂಗ್ರೆಸ್ ಪಕ್ಷ ರಾಮಲಿಂಗ ರೆಡ್ಡಿಯವರಿಗೆ ಹಲವಾರು ಉನ್ನತ ಹುದ್ದೆ ಕೊಟ್ಟಿದೆ ಅವನ್ನೆಲ್ಲ ಮರೆಯಬಾರದು, ನಿಮಗು ಸಹ ಕಳೆದ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದಿದೆ, ನಿಮಗಿನ್ನೂ ಹಲವಾರು ಅವಕಾಶಗಳಿವೆ ಅವಕಾಶಕ್ಕಾಗಿ ಕಾಯಬೇಕು ಎಂದು ಸಂಸುದ್ದೀನ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

   ಮುಂದೆ ನೀವು ಉನ್ನತ ಹುದ್ದೆಗೆ ಹೋಗುತ್ತೀರ

   ನೀವು ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ ಮಗಳು, ನಿಮ್ಮ ನಿರ್ಧಾಎ ಸರಿಯಾಗಿಯೇ ಇದೆ, ಇನ್ನೂ ಸಮಯವಿದೆ ನೀವು ಒಳ್ಳೆದಯ ಹುದ್ದೆಗೆ ಹೋಗುತ್ತೀರ ಎಂದು ರಘುನಂದನ್ ಎನ್ನುವವರು ಶುಭ ಹಾರೈಸಿದ್ದಾರೆ.

   English summary
   Former minister Ramalingareddy's daughter MLA Sowmya reddy showed her displeasure about not giving minister post for her father in cabinet expansion.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more