ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಡ್ ಬ್ಲಾಕಿಂಗ್: ಬಿಜೆಪಿ ಸಂಸದರಿಗೆ ರಿಜ್ವಾನ್ ಅರ್ಷದ್ ಟ್ವೀಟ್ ಏಟು!

|
Google Oneindia Kannada News

ಬೆಂಗಳೂರು, ಮೇ 05: ಸಿಲಿಕಾನ್ ಸಿಟಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಆರೋಪಿಸಲಾಗುತ್ತಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ನಿಲುವು ಸರಿಯಾಗಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಕಿಡಿ ಕಾರಿದ್ದಾರೆ.

ಕೊವಿಡ್-19 ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಕಾರ್ಯದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಮೊದಲ ಶ್ರೇಣಿ ಕಾರ್ಮಿಕರಾಗಿ ಶ್ರಮಿಸಿದ್ದಾರೆ. ವೈದ್ಯರು, ಮೊದಲ ಶ್ರೇಣಿ ಕಾರ್ಮಿಕರಿಂದ ಹಿಡಿದು ಕೊರೊನಾವೈರಸ್ ರೋಗಿಗಳ ಪ್ರಾಣ ರಕ್ಷಿಸಲು ಹಗಲಿರುಳು ಶ್ರಮಿಸಿದವರಲ್ಲಿ ಮುಸ್ಲಿಂ ಸಮುದಾಯದವರೂ ಸೇರಿದ್ದಾರೆ. ಹಿಂದೂ, ಕ್ರಿಶ್ಚಿಯನ್ ಹಾಗೂ ಸಿಖ್ ಸಮುದಾಯದವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಬೆಡ್ ಬ್ಲಾಕಿಂಗ್: ಸರಕಾರದ ವಿರುದ್ದ ಕುಮಾರಸ್ವಾಮಿ ಸ್ಪೋಟಕ ಹೇಳಿಕೆಬೆಡ್ ಬ್ಲಾಕಿಂಗ್: ಸರಕಾರದ ವಿರುದ್ದ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ

"ದೇಶದಲ್ಲಿ ಜನರು ಆಮ್ಲಜನಕ ಹಾಗೂ ಐಸಿಯು ಹಾಸಿಗೆಗಳು ಸಿಗದೇ ಜನರು ರಸ್ತೆಯಲ್ಲಿ ಪ್ರಾಣ ಬಿಡುತ್ತಿದ್ದ ಸಂದರ್ಭದಲ್ಲಿ ನೀವೂ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಚುನಾವಣೆಗಳಲ್ಲಿ ಫುಲ್ ಬ್ಯುಸಿ ಆಗಿ ತೊಡಗಿಸಿಕೊಂಡಿದ್ದರು. ಇಂದು ಏಕೆ ಈ ನಾಟಕ ಆಡುತ್ತಿದ್ದಾರೆ ಎಂಬುದು ಕರ್ನಾಟಕದ ಜನರಿಗೆ ಸರಿಯಾಗಿ ಗೊತ್ತಿದೆ. ಮುಖ್ಯವಾಗಿ ಇರುವವರನ್ನು ಹೊರತುಪಡಿಸಿ ಉಳಿದ ಎಲ್ಲರತ್ತ ಬೆರಳು ತೋರಿಸುವ ಪ್ರಯತ್ನವಿದು" ಎಂದು ಶಾಸಕ ರಿಜ್ವಾನ್ ಅರ್ಷದ್ ಸರಣಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ.

MLA Rizwan Arshad Slams Tejasvi Surya; Says Dont Spread The Communal Poison To Hide Your Failures

"ತೇಜಸ್ವಿ ಸೂರ್ಯ ಅವರೇ ನಿಮಗೆ ನಾಚಿಕೆ ಆಗಲ್ವೇ?":

ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ರಿಜ್ವಾನ್ ಅರ್ಷದ್ ಸರಣಿ ಟ್ವೀಟ್ ಮಾಡಿದ್ದಾರೆ. "ತೇಜಸ್ವಿ ಸೂರ್ಯ ಅವರೇ ನಿಮಗೆ ಒಂದಿಷ್ಟೂ ನಾಚಿಕೆ ಆಗುವುದಿಲ್ಲವೇ. ನೀವು ಹಾಗೂ ನಿಮ್ಮ ಬಿಜೆಪಿ ಸರ್ಕಾರದ ಕೈಯಿಂದ ಸಹಾಯ ಮಾಡಲಾಗದಿದ್ದರೂ ಪರವಾಗಿಲ್ಲ, ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕನಿಷ್ಠ ಸಮುದಾಯಿಕ ವಿಷ ಬೀಜವನ್ನು ಬಿತ್ತಬೇಡಿ ಎಂದು ರಿಜ್ವಾನ್ ಅರ್ಷದ್ ಟ್ವೀಟ್ ಮಾಡಿದ್ದಾರೆ.

ಲೆಕ್ಕಾಚಾರ:

* ಕೊರೊನಾವೈರಸ್ ವಾರ್ ರೂಮ್ ನಲ್ಲಿ 212 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ

* ತೇಜಸ್ವಿ ಸೂರ್ಯ ಹಾಗೂ ಅವರ ತಂಡ ಕೇವಲ 17 ಮುಸ್ಲಿಮರ ಹೆಸರನ್ನು ಮಾತ್ರ ಓದುತ್ತದೆ

* ಇದೇನು ಮದರಸಾ ಪಟ್ಟಿಯೇ ಎಂದು ಗುರುತಿಸಿ ಕೇಳುತ್ತಾರೆ

* ನೀವು ಮಾನವೀಯತೆಯನ್ನು ಉಳಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತೀರಿ

* ಇದೀಗ ಬಿಜೆಪಿಯ ನಾಯಕರು ಇಡೀ ಒಂದು ಸಮುದಾಯವನ್ನು ದೂಷಿಸುವ ಪ್ರಚಾರವನ್ನು ಆರಂಭಿಸಿದ್ದಾರೆ

"ನಿಮ್ಮ ಉದ್ದೇಶ ಹಗರಣವನ್ನು ಬಯಲಿಗೆ ಎಳೆಯುವುದಲ್ಲ":

ನಿಮ್ಮ ವರ್ತನೆಯನ್ನು ನೋಡುತ್ತಿದ್ದರೆ, ಯಾವುದೇ ಹಗರಣಗಳನ್ನು ಬಯಲಿಗೆಳೆಯುವುದು ನಿಮ್ಮ ಉದ್ದೇಶದಂತೆ ಗೋಚರಿಸುತ್ತಿಲ್ಲ. ಬದಲಿಗೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಿಮ್ಮ ಸಮುದಾಯದ ಉದ್ದೇಶವನ್ನು ಪ್ರಚಾರ ಮಾಡುತ್ತಿರುವಂತೆ ಗೋಚರಿಸುತ್ತಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ದೂಷಿಸಿದ್ದಾರೆ.

Recommended Video

ಭಾರತಕ್ಕೆ ವೈದ್ಯಕೀಯ ಉಪಕರಣಗಳ ನೆರವು ನೀಡಿದ ಆಸ್ಟ್ರೇಲಿಯಾ.. | Oneindia Kannada

English summary
BBMP Bed Blocking Scam: Shivajinagar MLA Rizwan Arshad Slams Tejasvi Surya; Says Don't Spread The Communal Poison To Hide Your Failures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X