ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಜಾಮೀನು

By Manjunatha
|
Google Oneindia Kannada News

ಬೆಂಗಳೂರು, ಮೇ 14: ರಾಜರಾಜೇಶ್ವರಿ ನಗರ ಅಪಾರ್ಟ್‌ಮೆಂಟ್ ಒಂದರಲ್ಲಿ ಗುರುತಿನ ಚೀಟಿ ದೊರೆತ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರಿಗೆ ಜಾಮೀನು ದೊರೆತಿದೆ.

ಗುರುತಿನ ಚೀಟಿ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು ಅವರು ಬಂಧನ ಭೀತಿ ಎದುರಿಸುತ್ತಿದ್ದರು. ಹಾಗಾಗಿ ಅವರು ಇಂದು ನಗರದ 7ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿ, 5000 ವೈಯಕ್ತಿಕ ಬಾಂಡ್‌, 3000 ನಗದು ಭದ್ರತೆ ನೀಡಿ ಜಾಮೀನು ಪಡೆದರು.

ವೋಟರ್ ಐಡಿ ಪತ್ತೆ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಎಫ್‌ಐಆರ್ವೋಟರ್ ಐಡಿ ಪತ್ತೆ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಎಫ್‌ಐಆರ್

ಸದಾಶಿವನಗರದಲ್ಲಿ ಕಂಟೇನರ್‌ನಲ್ಲಿ ಟಿಶರ್ಟ್‌ ಸಾಗಿಸುತ್ತಿದ್ದ ಪ್ರಕರಣದಲ್ಲೂ ಸಹ ಮುನಿರತ್ನ ಅವರಿಗೆ ಜಾಮೀನು ಸಿಕ್ಕಿದೆ. ಕಂಟೇನರ್‌ನಲ್ಲಿ ಮುನಿರತ್ನ ಅವರ ಭಾವಚಿತ್ರ ಇರುವ 95 ಲಕ್ಷ ರೂಪಾಯಿ ಮೌಲ್ಯದ ಟೀಶರ್ಟ್‌ ಸಾಗಿಸಲಾಗುತ್ತಿತ್ತು ಎಂದು ಚುನಾವಣಾ ಅಧಿಕಾರಿಗಳು ಮುನಿರತ್ನ ಅವರ ಮೇಲೆ ದೂರು ದಾಖಲಿಸಿದ್ದರು.

MLA Muniratna gets bail in election identity card case

ಗುರುತಿನ ಚೀಟಿ ಪತ್ತೆ ಮತ್ತು ಇತರ ಚುನಾವಣಾ ಅಕ್ರಮ ನಡೆದ ಕಾರಣ ಚುನಾವಣಾ ಆಯೋಗವು ರಾಜರಾಜೇಶ್ವರಿ ನಗರ ಚುನಾವಣೆಯನ್ನು ಮುಂದೂಡಿತು. ಚುನಾವಣೆಯು ಇದೇ ತಿಂಗಳ 28ರಂದು ನಡೆಯಲಿದ್ದು ಫಲಿತಾಂಶವು ಇದೇ ತಿಂಗಳ 31 ರಂದು ಹೊರಬೀಳಲಿದೆ.

ನನ್ನ ಮತಗಳನ್ನು ಕದಿಯಲು ಬಿಜೆಪಿ ಹುನ್ನಾರ: ಮುನಿರತ್ನನನ್ನ ಮತಗಳನ್ನು ಕದಿಯಲು ಬಿಜೆಪಿ ಹುನ್ನಾರ: ಮುನಿರತ್ನ

English summary
Rajarajeshwari congress MLA Muniratna gets bail in Election identity card case registered by election commission. He also gets bail in other election code of conduct violation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X