ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವುದೇ ಕಾರಣಕ್ಕೂ ನಿಗಮ ಮಂಡಳಿ ತೆಗೆದುಕೊಳ್ಳುವುದಿಲ್ಲ

|
Google Oneindia Kannada News

ಬೆಂಗಳೂರು, ಆ. 28: ಸಂಪುಟ ವಿಸ್ತರಣೆಗೂ ಮೊದಲು ಪಕ್ಷದಲ್ಲಿನ ಅಸಮಾಧಾನ ತಣಿಸಲು ನಿಗಮ ಮಂಡಳಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇಮಕ ಮಾಡಿದ್ದರು. ಆದರೆ ಅದರಿಂದ ಬಿಜೆಪಿಯಲ್ಲಿನ ಹಿರಿಯ ಶಾಸಕರ ಅಸಮಾಧಾನ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗಿದೆ. ನಾಲ್ಕು ಶಾಸಕರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ತಿರಸ್ಕಾರ ಮಾಡಿದ್ದರು. ಹೀಗಾಗಿ ಅವರ ನೇಮಕವನ್ನು ಸಿಎಂ ರದ್ದು ಮಾಡಿದ್ದರು.

Recommended Video

ಬೆಂಗಳೂರಿನಲ್ಲಿ Infosys ನೆರವಿನಿಂದ ಹೈ ಟೆಕ್ Corona ಆಸ್ಪತ್ರೆ ಸ್ಥಾಪನೆ | Oneindia Kannada

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಎಂ.ಸಿ.ಎ. ನಿಗಮದ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿ ನಿನ್ನೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಇವತ್ತು ಪ್ರತಿಕ್ರಿಯೆ ಕೊಟ್ಟಿರುವ ಅವರು, ನಾನು ಯಾವುದೇ ಕಾರಣಕ್ಕೂ ನಿಗಮ ಮಂಡಳಿ ತೆಗೆದುಕೊಳ್ಳುವುದಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ನಾನು ನಿಗಮ ಮಂಡಳಿ ಕೇಳಿರಲಿಲ್ಲ, ವಿಶ್ವಾಸವಿಟ್ಟು ಕೊಟ್ಟಿದ್ದಾರೆ. ನನಗೆ ನಿಗಮದ ಅಧ್ಯಕ್ಷ ಸ್ಥಾನ ಬೇಡ ಅನ್ನಿಸಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದೇನೆ.

MLA M.P. Kumaraswamy said in Bengaluru that he will not accept M.C.A. corporation presidentship

ನಿಗಮ ಮಂಡಳಿ ಸ್ಥಾನ ಅಲಂಕರಿಸುವುದಿಲ್ಲ: ಬಿಎಸ್ವೈ ಗೆ ಬಿಜೆಪಿ ಶಾಸಕ ಪತ್ರನಿಗಮ ಮಂಡಳಿ ಸ್ಥಾನ ಅಲಂಕರಿಸುವುದಿಲ್ಲ: ಬಿಎಸ್ವೈ ಗೆ ಬಿಜೆಪಿ ಶಾಸಕ ಪತ್ರ

ಎಸ್‌ಸಿ ಬಲಗೈ‌ನಿಂದ ಬಿಜೆಪಿಯಿಂದ ಮೂವರು ಶಾಸಕರು ಆಯ್ಕೆ ಆಗಿದ್ದಾರೆ, ನಿಗಮವನ್ನು ಯಾರಿಗಾದರೂ ಕೊಡಿ ಎಂದು ಕೇಳಿದ್ದೇನೆ. ಯಡಿಯೂರಪ್ಪ ಅವರು ನಮ್ಮ ನಾಯಕರು, ಅವರ ಮೇಲೆ ನಮಗೆ ಯಾವುದೇ ಬೇಸರ ಇಲ್ಲ. ಅವರು ಕೋವಿಡ್, ಪ್ರವಾಹ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಇನ್ನೂ ಮೂರು ವರ್ಷ ಒಳ್ಳೇ ಕೆಲಸ ಮಾಡುತ್ತಾರೆ ಎಂದಿದ್ದಾರೆ.

English summary
The Mudigere MLA M.P. Kumaraswamy has made a statement in Bengaluru that he will not accept M.C.A. corporation presidentship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X