ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಗಣೇಶ್ ಜಾಮೀನು ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 01: ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಂಪ್ಲಿ ಶಾಸಕ ಜೆ.ಎಚ್.ಗಣೇಶ್ ಅವರ ಜಾಮೀನು ಅರ್ಜಿ ಮನವಿಯ ವಿಚಾರಣೆಯನ್ನೂ ಏಪ್ರಿಲ್ 8 ಮುಂದೂಡಲಾಯಿತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗಣೇಶ್ ಅವರ ಜಾಮೀನು ಮನವಿಯನ್ನು ಜಿಲ್ಲಾ ನ್ಯಾಯಾಲಯವು ಈಗಾಗಲೇ ತಿರಸ್ಕಾರ ಮಾಡಿತ್ತು, ಹಾಗಾಗಿ ಗಣೇಶ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಶಾಸಕ ಗಣೇಶ್‌ ಗೆ ಜಾಮೀನು ನಿರಾಕರಣೆ, ಇನ್ನಷ್ಟು ದಿನ ಜೈಲೇ ಗತಿಶಾಸಕ ಗಣೇಶ್‌ ಗೆ ಜಾಮೀನು ನಿರಾಕರಣೆ, ಇನ್ನಷ್ಟು ದಿನ ಜೈಲೇ ಗತಿ

ಗಣೇಶ್ ಪರ ವಾದ ಮಂಡಿಸಿದ ವಕೀಲರು, ಒಂದೂವರೆ ತಿಂಗಳಿನಿಂದಲೂ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ, ಅವರು ಕ್ಷೇತ್ರದ ಶಾಸಕರಾಗಿದ್ದು, ಅವರ ಜನರಿಗೆ ಅವರ ಅವಶ್ಯಕತೆ ಇದೆ, ಚುನಾವಣೆಗಳು ಬೇರೆ ಇರುವ ಕಾರಣ ಗಣೇಶ್ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದರು.

MLA Ganeshs bail application inquery postponed

ಸರ್ಕಾರದ ಪರ ವಕೀಲರು, ಪ್ರತಿವಾದ ಮಂಡಿಸಲು ಸಮಯಾವಕಾಶ ಕೇಳಿದ ಕಾರಣ ಜಾಮೀನು ಅರ್ಜಿ ವಿಚಾರಣೆಯನ್ನು ಏಪ್ರಿಲ್ 8 ಕ್ಕೆ ಮುಂದೂಡಲಾಗಿದೆ.

'ಆನಂದ್ ಸಿಂಗ್, ನಾಗೇಂದ್ರ ವಿಚಾರಣೆಗೆ ಗೈರಾದರೆ ಬಂಧಿಸಿ ಕರೆ ತನ್ನಿ''ಆನಂದ್ ಸಿಂಗ್, ನಾಗೇಂದ್ರ ವಿಚಾರಣೆಗೆ ಗೈರಾದರೆ ಬಂಧಿಸಿ ಕರೆ ತನ್ನಿ'

ಗಣೇಶ್ ಅವರು ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಜನವರಿ 19 ರಂದು ರಾತ್ರಿ ಹಲ್ಲೆ ಮಾಡಿದ್ದರು, ಆ ನಂತರ ಅವರು ಪರಾರಿಯಾಗಿದ್ದರು, ರಾಮನಗರ ಪೊಲೀಸರು ಗಣೇಶ್ ಅವರನ್ನು ಫೇಬ್ರವರಿ 20 ರಂದು ಬಂಧಿಸಿದ್ದರು.

English summary
MLA JN Ganesh's bail application inquiry postponed to April 08. He is accused of hitting MLA Anand Singh. He was arrested of February 20 in Gujrath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X