ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಗಣಿಗಾರಿಗೆ ಪ್ರಕರಣ: ಶಾಸಕ ನಾಗೇಂದ್ರ ಪೊಲೀಸರ ವಶಕ್ಕೆ

|
Google Oneindia Kannada News

ಬೆಂಗಳೂರು, ಮಾರ್ಚ್‌ 18: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಶಾಸಕ ಬಿ.ನಾಗೇಂದ್ರ ಅವರನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದೆ.

ಉಮೇಶ್ ಜಾಧವ್ ಸೇರಿ ನಾಲ್ವರು ಶಾಸಕರಿಗೆ ಸ್ಪೀಕರ್ ನೊಟೀಸ್‌ ಉಮೇಶ್ ಜಾಧವ್ ಸೇರಿ ನಾಲ್ವರು ಶಾಸಕರಿಗೆ ಸ್ಪೀಕರ್ ನೊಟೀಸ್‌

ಬಳ್ಳಾರಿಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಲಾಗಿತ್ತು, ಅದರ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

'ಆನಂದ್ ಸಿಂಗ್, ನಾಗೇಂದ್ರ ವಿಚಾರಣೆಗೆ ಗೈರಾದರೆ ಬಂಧಿಸಿ ಕರೆ ತನ್ನಿ' 'ಆನಂದ್ ಸಿಂಗ್, ನಾಗೇಂದ್ರ ವಿಚಾರಣೆಗೆ ಗೈರಾದರೆ ಬಂಧಿಸಿ ಕರೆ ತನ್ನಿ'

ತಮ್ಮ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದ್ದ ಕಾರಣ ಬಿ.ನಾಗೇಂದ್ರ ಅವರು ಸೋಮವಾರದಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮತ್ತೊಬ್ಬ ಶಾಸಕ ಆನಂದ್ ಸಿಂಗ್ ವಿರುದ್ಧ ಸಹ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

MLA B Nagendra is in police costody in illeagel mining case

ಈ ಸಮಯ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ನಾಗೇಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆಯುವಂತೆ ಆದೇಶಿಸಿದರು. ಅಂತೆಯೇ ನಾಗೇಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಶಾಸಕ ಆನಂದ್ ಸಿಂಗ್, ಬಿ ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್ ಶಾಸಕ ಆನಂದ್ ಸಿಂಗ್, ಬಿ ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್

ಇಂದೇ ಹೊಸ ಜಾಮೀನು ಅವರಿಗೆ ಮಂಜೂರಾಗುವ ಸಾಧ್ಯತೆ ಇದ್ದು, ಅದರ ನಂತರ ಅವರು ಪೊಲೀಸರ ವಶದಿಂದ ಬಿಡುಗಡೆ ಹೊಂದುತ್ತಾರೆ.

ಶಾಸಕ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಭಿನ್ನಮತೀಯ ಶಾಸಕರಾಗಿದ್ದು, ರಮೇಶ್ ಜಾರಕಿಹೊಳಿ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ದೂರು ಸಹ ನೀಡಿದ್ದಾರೆ.

English summary
Koodligi MLA B Nagendra is handed over to police custody by people representatives special court today in Bengaluru. He was accused in illegal mining case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X