ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ: ರಾಜ್ಯಸಭೆ ಚುನಾವಣೆ ವೇಳೆ ಕಟ್ಟುನಿಟ್ಟಿನ ನಿಯಮಗಳು

|
Google Oneindia Kannada News

ಬೆಂಗಳೂರು, ಜೂನ್ 6: ರಾಜ್ಯಸಭೆ ಚುನಾವಣೆಗೆ ಕೊರೊನಾ ವೈರಸ್ ಭೀತಿ ಹೆಚ್ಚಿದೆ. ಸೋಂಕಿನ ಭೀತಿಯಲ್ಲೂ ಎಲೆಕ್ಷನ್ ನಡೆಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದೆ. ಜೂನ್ 19 ರಂದು ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಮತದಾನ ಎಲ್ಲವೂ ಆಗಬೇಕಿದೆ.

Recommended Video

India surpasses Italy in Corona cases count | Oneindia kannada

ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ಅಧಿಕಾರಿಯಾಗಿ ನೇಮಕಗೊಂಡಿರುವ ಎಂ ಕೆ ವಿಶಾಲಾಕ್ಷಿ ಇಂದು ಸುದ್ದಿಗೋಷ್ಠಿ ನಡೆಸಿ, ಕೆಲವು ಕಟ್ಟುನಿಟ್ಟಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಬೆಂಬಲ; ಸೋನಿಯಾ ಗಾಂಧಿ ತೀರ್ಮಾನ: ಡಿಕೆಶಿಮಾಜಿ ಪ್ರಧಾನಿ ದೇವೇಗೌಡರಿಗೆ ಬೆಂಬಲ; ಸೋನಿಯಾ ಗಾಂಧಿ ತೀರ್ಮಾನ: ಡಿಕೆಶಿ

ಕೊರೊನಾ ಭೀತಿಯ ನಡುವೆ ಎಲೆಕ್ಷನ್ ಹೇಗೆ ನಡೆಯಬೇಕು, ಚುನಾವಣೆ ಪ್ರಕ್ರಿಯೆ ಹೇಗಿರಲಿದೆ, ಅದಕ್ಕಾಗಿ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳೇನು ಎಂದು ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದ್ದಾರೆ. ಮುಂದೆ ಓದಿ....

ಇನ್ನು ಯಾರೂ ನಾಮಪತ್ರ ಸಲ್ಲಿಸಿಲ್ಲ

ಇನ್ನು ಯಾರೂ ನಾಮಪತ್ರ ಸಲ್ಲಿಸಿಲ್ಲ

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಜೂನ್ 9 ರಂದು ಕೊನೆ ದಿನವಾಗಿದ್ದು, ಈವರೆಗೂ ಯಾವುದೆ ನಾಮಪತ್ರ ಬಂದಿಲ್ಲ ಚುನಾವಣಾಧಿಕಾರಿ ವಿಶಾಲಾಕ್ಷಿ ಹೇಳಿದ್ದಾರೆ. ಜೂನ್ 10 ಕ್ಕೆ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು. ಜೂನ್ 11 ನಾಮಪತ್ರ ಪರಿಶೀಲನೆ ಮಾಡಲಾಗುವುದು.

ನಾಲ್ಕು ಜನರಿಗೆ ಮಾತ್ರ ಅವಕಾಶ

ನಾಲ್ಕು ಜನರಿಗೆ ಮಾತ್ರ ಅವಕಾಶ

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಜೊತೆ ನಾಲ್ಕು ಜನ ಮಾತ್ರ ಬರಬಹುದು. ಅಭ್ಯರ್ಥಿಗಳು ಹಾಗೂ ಜೊತೆಗೆ ಬರುವವರು ಕಡ್ಡಾಯವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿಕೊಂಡು ಬರಬೇಕು. ಈ ಸಂಧರ್ಭದಲ್ಲಿ ಮಾದ್ಯಮದವರಿಗೆ ಚಿತ್ರೀಕರಣ ಮಾಡಲು ಅವಕಾಶ ಇಲ್ಲ. ಆದರೆ ಸುದ್ದಿಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮಾದ್ಯಮ ದವರ ಜೊತೆ ಸಂಪರ್ಕ ಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?

ಮಾತದಾನಕ್ಕೆ ಹೆಚ್ಚು ಸವಾಲು?

ಮಾತದಾನಕ್ಕೆ ಹೆಚ್ಚು ಸವಾಲು?

ಮತ ಹಾಕುವವರು ಕ್ವಾರಂಟೈನ್ ನಲ್ಲಿ ಇದ್ದರೆ, ಮತದಾನದ ಸಮಯದಲ್ಲಿ ಅವರ ದೇಹದ ಉಷ್ಟತಾ ಪ್ರಮಾಣ ಹೆಚ್ಚಿದ್ದರೆ ಅವರಿಗೆ ಹೇಗೆ ಅವಕಾಶ ಕಲ್ಪಿಸಬೇಕು ಎನ್ನುವ ಬಗ್ಗೆ ಮಾರ್ಗಸೂಚಿ ನೀಡುವಂತೆ ಆರೋಗ್ಯ ಇಲಾಖೆಯಿಂದ ಕೇಳಲಾಗಿದೆ. 65 ವರ್ಷ ಮೀರಿರುವ ಮತದಾರರಿಗೆ ಹೇಗೆ ಅವಕಾಶ ನೀಡಬೇಕು ಎನ್ನುವ ಕುರಿತು ಮಾಹಿತಿ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷಗಳು

ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷಗಳು

ರಾಜ್ಯಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ನಾಲ್ಕು ಸ್ಥಾನಕ್ಕೆ ಎಲೆಕ್ಷನ್ ನಡೆಯಲಿದೆ. ಇದರಲ್ಲಿ ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಸೀಟು ಗೆಲ್ಲುವ ವಿಶ್ವಾದಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆಗೆ ಟಿಕೆಟ್ ಅಂತಿಮವಾಗಿದೆ. ಜೆಡಿಎಸ್ ಪಕ್ಷದಿಂದ ಎಚ್ ಡಿ ದೇವೇಗೌಡ ಪಕ್ಕಾ ಎನ್ನಲಾಗಿದೆ. ಬಿಜೆಪಿಯಲ್ಲಿ ಮಾತ್ರ ಅಂತಿಮ ನಿರ್ಣಯಕ್ಕೆ ಇನ್ನು ಬಂದಿಲ್ಲ.

English summary
Karnataka rajya sabha Election Officer MK Vishalakshi announces guidelines. june 9th is the last for nomination submission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X