• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಕಾಕ್ ಟೈಲ್ ಚಾಲೆಂಜ್ ಗೆದ್ದ ಬೆಂಗ್ಳೂರಿನ ರೋಹನ್

|

ಬೆಂಗಳೂರು, ಫೆಬ್ರವರಿ 11: ಬೆಂಗಳೂರಿನ ಬಾರ್ ಟೆಂಡರ್ ರೋಹನ್ ಮಟಮಾರಿ ಅವರು 3ನೇ ಆವೃತ್ತಿಯ ಬ್ರೌನ್-ಫೋರ್‍ಮನ್ ಅಮೆರಿಕನ್ ವಿಸ್ಕಿ ಲೆಗೆಸಿ ಕಾಕ್‍ಟೈಲ್ ಚಾಲೆಂಜ್- 2019 ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಫೈನಲ್‍ನಲ್ಲಿ ಭಾರತದ ವಿವಿಧೆಡೆಗಳ 17 ಮಂದಿ ಮಿಶ್ರತಜ್ಞ(Mixologist )ರ ಜತೆ ಸ್ಪರ್ಧಿಸಿ ಈ ಗೌರವಕ್ಕೆ ಪಾತ್ರರಾದರು.

ದೇಶದ ಅಗ್ರಗಣ್ಯ ಬಾರ್ ಗಳನ್ನು ಪ್ರತಿನಿಧಿಸಿದ್ದ ಮಿಶ್ರತಜ್ಞರು, ನವದೆಹಲಿಯಲ್ಲಿ ನಡೆದ ಅದ್ದೂರಿ ಫೈನಲ್‍ನಲ್ಲಿ ತಮ್ಮ ವಿಶಿಷ್ಟ ಕಾಕ್‍ಟೈಲ್‍ಗಳ ಮೂಲಕ ಕೌಶಲ್ಯವನ್ನು ಪ್ರದರ್ಶಿಸಿದರು.

ಹೊಸ ಭಾಷೆ ಕಲಿಯಲು ಬಿಯರ್ ಹೆಲ್ಪ್; ಚಿಪ್ಸ್ ಆಣೆಗೂ ಇದು ಅಧ್ಯಯನ ವರದಿ

ಆದರೆ, ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಬೈಜಿ ಬ್ರೆವಿಸ್ಕಿ ಬ್ರೆವಿಂಗ್ ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಮಿಶ್ರತಜ್ಞ ರೋಹನ್, ಅತ್ಯಂತ ರೋಚಕ ಫೈನಲ್‍ನಲ್ಲಿ ತಮ್ಮ ಅತ್ಯಂತ ವಿಶಿಷ್ಟ ಎನಿಸಿದ "ಲಿಲ್ಲಿಯನೇರ್" ಮತ್ತು ಅಝಟೆಕ್ ಮುಳೆ ಕಾಕ್‍ಟೈಲ್‍ಗಳ ಮೂಲಕ ತೀರ್ಪುಗಾರರ ಮತ್ತು ಪ್ರೇಕ್ಷಕರ ಹೃದಯ ಗೆದ್ದರು.

ಈ ಸ್ಪರ್ಧೆಯಲ್ಲಿ ಗೆದ್ದ ಫಲವಾಗಿ 25 ವರ್ಷದ ಬಾರ್ ಶೆಫ್ ರೋಹನ್ ಅವರಿಗೆ ಟೆನ್ನೆಸ್ಸಿಯ ಲಿಂಚ್‍ಬರ್ಗ್‍ನಲ್ಲಿರುವ ಆಕರ್ಷಕ ಜಾಕ್ ಡೇನಿಯಲ್ ಡಿಸ್ಟಿಲರಿ ಹಾಗೂ ಅಮೆರಿದ ವರ್ಸಿಲೆಸ್ ಕೆಂಟುಕಿಯಲ್ಲಿರುವ ದ ವುಡ್‍ಫೋರ್ಡ್ ರಿಸರ್ವ್ ಡಿಸ್ಟಿಲರಿಗೆ ಮಾರ್ಗದರ್ಶಿ ಸಹಿತ ಪ್ರವಾಸ ಕೈಗೊಳ್ಳುವ ಅವಕಾಶ ಲಭಿಸಿದೆ.

ಅಬ್ಬಬ್ಬಾ ಒಂದೇ ರಾತ್ರಿ ಇಷ್ಟೊಂದು ಮದ್ಯ ಕುಡಿದರಾ ಬೆಂಗಳೂರಿಗರು?

ಈ ಡಿಸ್ಟಿಲರಿಗಳ ಜತೆಗೆ ಅವರು ಬ್ರೂಕ್ಲಿನ್‍ನಲ್ಲಿ ನಡೆಯುವ ಅಗ್ರಗಣ್ಯ ಅಂತರರಾಷ್ಟ್ರೀಯ ಮಟ್ಟದ ಬಾರ್ ಮತ್ತು ಬೇವರೇಜ್ ವ್ಯಾಪಾರ ಮೇಳ ಎನಿಸಿದ ಬಾರ್ ಕಾನ್ವೆಂಟ್‍ಗೆ ಕೂಡ ಭೇಟಿ ನೀಡುವರು. ಇದರಲ್ಲಿ ಜಾಗತಿಕವಾಗಿ ಅತ್ಯುತ್ತಮ ಎನಿಸಿದ ಬಾರ್ ಟೆಂಡರ್ ಗಳ ಜತೆ ಬೆರೆಯುವ ಅವಕಾಶ ಕೂಡಾ ದೊರಕಲಿದೆ.

ಗೆಲುವಿನ ಸಂತಸ ಹಂಚಿಕೊಂಡ ರೋಹನ್

ಗೆಲುವಿನ ಸಂತಸ ಹಂಚಿಕೊಂಡ ರೋಹನ್

"ಇದು ನನ್ನ ಎರಡನೇ ಸ್ಪರ್ಧೆಯಾಗಿದ್ದು, ಇದರಲ್ಲಿ ನಾನು ಅದೃಷ್ಟವಂತನಾಗುತ್ತೇನೆ ಎಂಬ ವಿಶ್ವಾಸ ನನಗೆ ಇರಲಿಲ್ಲ. ನನ್ನ ಸ್ನೇಹಿತರು ತಿಳಿದಂತೆ, ನಾನು ಎಲ್ಲ ಬಗೆಯ ಸ್ಪರ್ಧೆಗಳಲ್ಲಿ ಭಾಗವಹಿಸುವ ವ್ಯಕ್ತಿ ಅಲ್ಲ. ಆದರೆ ಈ ಸ್ಪರ್ಧೆ ಇತರ ಸ್ಪರ್ಧೆಗಳಿಗಿಂತ ಭಿನ್ನ ಹಾಗೂ ನಾನು ಇದರಲ್ಲಿ ವಿಜೇತನಾಗಲು ಬಯಸಿದ್ದೆ. ನನ್ನ ವಿಶಿಷ್ಟ ಕಾಕ್‍ಟೈಲ್ ಲಿಲ್ಲಿಯಾನೇರ್, ಈ ದೇಶದ ಕಠಿಣ ಪರಿಶ್ರಮಿ ಮಹಿಳೆಯರಿಗೆ ಗೌರವ" ಎಂದು ರೋಹನ್ ಮಟಮಾರಿ ತಮ್ಮ ಸಾಧನೆ ಬಗ್ಗೆ ವಿವರಿಸಿದರು.

ಈ ವಾರ್ಷಿಕ ಚಾಂಪಿಯನ್‍ಶಿಪ್ ಇದೀಗ ಮೂರನೇ ವರ್ಷ ನಡೆದಿದ್ದು, ಇದರಲ್ಲಿ ದೇಶದ ಎಲ್ಲೆಡೆಗಳ ಮಿಶ್ರತಜ್ಞರಿಗೆ ಅಮೆರಿಕನ್ ವಿಸ್ಕಿಗಳಾದ ಜಾಕ್ ಡೆನಿಯಲ್ಸ್‍ನ ಓಲ್ಡ್ ನಂ.7, ವುಡ್‍ಫೋರ್ಡ್ ರಿಸರ್ವ್, ಜೆಂಟಲ್‍ಮನ್ ಜಾಕ್ ಮತ್ತು ಡೇನಿಯಲ್ಸ್ ನ ಸಿಂಗಲ್ ಬ್ಯಾರಲ್ ಬಳಸಿಕೊಂಡು ತಮ್ಮ ವಿಶಿಷ್ಟ ಕಾಕ್‍ಟೈಲ್ ರಿಸೆಪ್ ಸಿದ್ಧಪಡಿಸಲು ಸೂಚಿಸಲಾಗುತ್ತದೆ.

ಚಾಂಪಿಯನ್ ಶಿಪ್ ಬಗ್ಗೆ ವಿನ್ಸೆಂಟ್ ಅಗರ್ವಾಲ್

ಚಾಂಪಿಯನ್ ಶಿಪ್ ಬಗ್ಗೆ ವಿನ್ಸೆಂಟ್ ಅಗರ್ವಾಲ್

ಈ ಚಾಂಪಿಯನ್‍ಶಿಪ್ ಬಗ್ಗೆ ಮಾತನಾಡಿದ ಬ್ರೌನ್-ಫೋರ್‍ಮನ್ ವರ್ಲ್ಡ್ ವೈಡ್ ಎಲ್‍ಎಲ್‍ಸಿಯ ಭಾರತ ಉಪಖಂಡ ಮತ್ತು ಮಾಲ್ಡೀವ್ಸ್ ವಿಭಾಗದ ಮಾರುಕಟ್ಟೆ ಹಾಗೂ ವಾಣಿಜ್ಯ ನಿರ್ದೇಶಕ ವಿನ್ಸೆಂಟ್ ಅಗರ್ವಾಲ್, "ಪ್ರತಿ ವರ್ಷದಿಂದ ವರ್ಷಕ್ಕೆ ಸ್ಪರ್ಧೆಯ ಮಟ್ಟ ಸುಧಾರಿಸುತ್ತಿದೆ. ಇದು ಭಾರತ ಹೊಂದಿರುವ ಮಿಶ್ರತಜ್ಞ ಪ್ರತಿಭೆಗಳ ಪರಿಮಾಣವನ್ನು ಸೂಚಿಸುತ್ತದೆ. ಬ್ರೌನ್-ಫೋರ್‍ಮನ್, ಈ ವಾರ್ಷಿಕ ಸ್ಪರ್ಧೆಯ ಮೂಲಕ, ಭಾರತದ ಬಾರ್ ಟೆಂಡರ್ ಗಳಿಗೆ ತಮ್ಮ ಅಪಾರ ಮಿಶ್ರ ಕೌಶಲವನ್ನು ಪ್ರದರ್ಶಿಸಲು ಮತ್ತು ಅಭಿವ್ಯಕ್ತಪಡಿಸಲು ಅವಕಾಶ ನೀಡುತ್ತಿದೆ.

ಈ ಸ್ಪರ್ಧೆಗಳಿಂದ ನಮಗೆ ಕಂಡುಬಂದ ಪ್ರಮುಖ ಅಂಶವೆಂದರೆ, ಭಾರತದಲ್ಲಿ ಕ್ಷಿಪ್ರವಾಗಿ ಕಾಕ್‍ಟೈಲ್ ಚಿತ್ರಣ ಪ್ರಗತಿಯಾಗುತ್ತಿರುವುದು. ಈ ವರ್ಷದ ಸವಾಲನ್ನು ಅರ್ಹವಾಗಿ ಗೆದ್ದ ರೋಹನ್‍ಗೆ ಅಭಿನಂದನೆಗಳು" ಎಂದು ಹೇಳಿದರು.

ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಉದ್ಯಮ ತಜ್ಞರಾದ ದೇಶದ ಖ್ಯಾತ ಮಿಶ್ರತಜ್ಞ ಯಂಗ್‍ದುಪ್ ಲಾಮಾ, ಜನಪ್ರಿಯ ಪೋರ್ಟೆಲ್ ತುಲ್ಲೀಹೊ(Tulleeho) ಸಹ ಸಂಸ್ಥಾಪಕ ಮತ್ತು ಸಿಇಓ ವಿಕ್ರಮ್ ಅಚಾಂತ, ಬ್ರೌನ್-ಫೋರ್‍ಮನ್ ವರ್ಲ್ಡ್ ವೈಡ್ ಎಲ್‍ಎಲ್‍ಸಿ ಜಾಕ್ ಡೇನಿಯಲ್‍ನ ಭಾರತ ಹಾಗೂ ಮಾಲ್ಡೀವ್ಸ್ ಉಪಖಂಡದ ಬ್ರಾಂಡ್ ವ್ಯವಸ್ಥಾಪಕ ವಿನಯ್ ಜೋಶಿ ಭಾಗವಹಿಸಿದ್ದರು.

ಈ ಲೇಖನ ಓದಿದ ಮೇಲೆ ಕುಡೀಬೇಕಾ, ಕುಡಿಯೋದ್ ಬೇಡ್ವಾ? ನಿರ್ಧಾರ ಮಾಡಿ

17 ಮಂದಿ ಫೈನಲಿಸ್ಟ್ ಗಳು ಜಾಕ್ ಪ್ಯಾಕ್ ಸೇರುವ ಅವಕಾಶ

17 ಮಂದಿ ಫೈನಲಿಸ್ಟ್ ಗಳು ಜಾಕ್ ಪ್ಯಾಕ್ ಸೇರುವ ಅವಕಾಶ

ದೆಹಲಿ, ಚಂಡೀಗಢ, ಗುರುಗಾಂವ್, ಪುಣೆ, ಮುಂಬೈ, ಗೋವಾ, ಚೆನ್ನೈ ಮತ್ತು ಬೆಂಗಳೂರಿನಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಮಿಶ್ರತಜ್ಞರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ 100 ಮಂದಿ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದರು. ಮೂರು ತಿಂಗಳ ಕಠಿಣ ಎಲಿಮಿನೇಷನ್ ಪ್ರಕ್ರಿಯೆ ಬಳಿಕ 17 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.

17 ಮಂದಿ ಫೈನಲಿಸ್ಟ್ ಗಳ ರೆಸಿಪಿಗಳನ್ನು ಜಾಕ್ ಡೇನಿಯಲ್‍ನ ಕಾಕ್‍ಟೈಲ್ ಕಿರುಹೊತ್ತಗೆಯಲ್ಲಿ, "ಭಾರತದ ಅತ್ಯುತ್ತಮ ಮಿಶ್ರಜ್ಞರ ಮೂಲ ರೆಸಿಪಿಗಳು" ಎಂಬ ವಿಭಾಗದಲ್ಲಿ ಉಲ್ಲೇಖಿಸಲಾಗುತ್ತದೆ. ಇದು ಸದ್ಯದಲ್ಲೇ ಬಿಡುಗಡೆಯಾಗಲಿದೆ.

17 ಮಂದಿ ಫೈನಲಿಸ್ಟ್ ಗಳು ಜಾಕ್ ಪ್ಯಾಕ್ ಸೇರುವ ಅವಕಾಶ ಪಡೆಯಲಿದ್ದಾರೆ. ಇದು ಕೇವಲ ಮಿಶ್ರತಜ್ಞರ ಜಾಲವಾಗಿದ್ದು, ಕಳೆದ ಎರಡು ವರ್ಷಗಳ ಫೈನಲಿಸ್ಟ್‍ಗಳು ಇದರ ಸದಸ್ಯರಾಗಿ ಇರುತ್ತಾರೆ. ಈ ವಿಶಿಷ್ಟ ಪ್ಲಾಟ್‍ಫಾರಂ, ಜಾಕ್ ಡೇನಿಯಲ್ ಒದಗಿಸಿದ ದೇಶದ ಅತ್ಯುತ್ತಮ ಮಿಶ್ರತಜ್ಞರ ಜಾಲವಾಗಿದ್ದು, ಇಲ್ಲಿ ಸದಸ್ಯರು ತಮ್ಮ ಕಾಕ್‍ಟೈಲ್ ರೆಸಿಪಿ ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರ ಸಂಪರ್ಕ ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಸ್ಪರ್ಧಿಗಳ ಬಗ್ಗೆ ತೀರ್ಪುಗಾರರ ಹೇಳಿಕೆ

ಸ್ಪರ್ಧಿಗಳ ಬಗ್ಗೆ ತೀರ್ಪುಗಾರರ ಹೇಳಿಕೆ

"ಸ್ಪರ್ಧಿಗಳು ಪ್ರದರ್ಶಿಸಿದ ಸೃಜನಶೀಲತೆ ಮನಸ್ಸಿನ ಮೇಲೆ ಮುದ್ರೆಯೊತ್ತಿದೆ ಎಂದು ಯಂಗ್‍ದುಪ್ ಲಾಮಾ ಹೇಳಿದ್ದಾರೆ. "ಎಲ್ಲ ಸ್ಪರ್ಧಿಗಳು ಅಪೂರ್ವ ಪ್ರತಿಭಾವಂತರು. ಇವರು ಯುವಕರು ಹಾಗೂ ಹೊಸ ಹೊಸ ಕಲ್ಪನೆಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಕೂಡಾ ಮಿಶ್ರತಜ್ಞರ ಸಂಸ್ಕೃತಿ ಬೆಳೆಯುತ್ತಿರುವುದು ಒಳ್ಳೆಯ ವಿಚಾರ. ಹಲವಾರು ಮಂದಿ ಯುವ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದಾರೆ" ಎಂದು ಯಂಗ್‍ದುಪ್ ಹೇಳಿದ್ದಾರೆ.

ಮತ್ತೊಬ್ಬ ತೀರ್ಪುಗಾರರಾಗಿದ್ದ ಜನಪ್ರಿಯ ಪೋರ್ಟೆಲ್ ತುಲ್ಲೀಹೊ ಸಹ ಸಂಸ್ಥಾಪಕ ಮತ್ತು ಸಿಇಓ ಹಾಗೂ ಉದ್ಯಮ ತಜ್ಞ ವಿಕ್ರಮ್ ಅಚಾಂತ ಮಾತನಾಡಿ "ಈ ಗೌರವಕ್ಕೆ ರೋಹನ್ ಪಾತ್ರರಾಗಿರುವುದು ಅದ್ಭುತ. ಇವರಿಗೆ ಬ್ರೌನ್ ಫೋರ್‍ಮನ್ ಅಮೆರಿಕನ್ ವಿಸ್ಕಿ ಲೆಗೆಸಿ ಕಾಕ್‍ಟೈಲ್ ಸ್ಪರ್ಧೆಯ ಪ್ರಶಸ್ತಿ ಸಂದಿದೆ. ರೋಹನ್ ಅವರು ಅದ್ಭುತ ಪ್ರತಿಭೆಯ ಮತ್ತು ಕೊಡುಗೆ ಎನಿಸಿದ ಮಿಶ್ರತಜ್ಞ" ಎಂದು ಹೇಳಿದರು.

ಬಿಯರ್ ಆರೋಗ್ಯಕರ ಪೇಯವಂತೆ, 13 ಲಾಭಗಳಿವೆಯಂತೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru bartender Rohan Matmary has been crowned the winner of the third edition of the Brown-Forman American Whiskey Legacy Cocktail Challenge 2019 after coming up trumps in the grand finale against 17 other mixologists from across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more