ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳನಿಗೆ ಮತ್ತೊಂದು 'ಮಾಮ್ ' ಸಿಗಲಿದ್ದಾಳೆ

|
Google Oneindia Kannada News

ಬೆಂಗಳೂರು, ಜ. 20: ಮಂಗಳಯಾನ-2 ನನ್ನ ಮುಂದಿರುವ ಗುರಿ. ಇದನ್ನು ನನ್ನ ಅವಧಿಯಲ್ಲೇ ಪೂರ್ಣ ಮಾಡಲು ಯತ್ನಿಸುತ್ತೇನೆ ಎಂದು ಇಸ್ರೊ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ ಕುಮಾರ್‌ ತಿಳಿಸಿದರು.

ಬಸವನ­ಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾಲೇಜಿನೊಂದಿಗಿನ ಒಡನಾಟ ಹಳೆಯ ನೆನಪುಗಳನ್ನು ಬಿಚ್ಚಿಡುತ್ತದೆ. ನಾನು ಇಲ್ಲಿಗೆ ಕಾಲಿಟ್ಟರೆ ವಿದ್ಯಾರ್ಥಿ ಜೀವನಕ್ಕೆ ನನ್ನ ಮನಸ್ಸು ತೆರೆದುಕೊಳ್ಳುತ್ತದೆ ಎಂದು ನೆನಪು ಮಾಡಿಕೊಂಡರು.[ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಇಸ್ರೋ ಅಧ್ಯಕ್ಷ]

bengaluru

ವೈದ್ಯನಾಗಬೇಕೆಂಬ ಕನಸು ಕಂಡಿದ್ದವನು ವಿಜ್ಞಾನಿಯಾದೆ. ಅತ್ಯಧಿಕ ಅಂಕ ಗಳಿಸಿದರೂ ನನ್ನ ವಯಸ್ಸು ವೈದ್ಯ ಪದವಿಗೆ ಅಡ್ಡಿಯಾಯಿತು. ಅರ್ಜಿ ಹಾಕಲು ತೆರಳಿದರೆ ನನ್ನ ವಯಸ್ಸು ನಿಗದಿಪಡಿಸಿದ್ದಕ್ಕಿಂತ 22 ದಿನ ಕಡಿಮೆಯಿತ್ತು ಎಂದು ಹಳೆಯ ದಿನಗಳನ್ನು ಬಿಚ್ಚಿಟ್ಟರು.[ಮಂಗಳಯಾನಕ್ಕೆ ಅಮೆರಿಕದ ಬಾಹ್ಯಾಕಾಶ ಪ್ರಶಸ್ತಿ]

ನ್ಯಾಷನಲ್‌ ಕಾಲೇಜಿಗೆ ಸೇರಿದ ಸಂದರ್ಭ ಎಚ್‌. ನರಸಿಂಹಯ್ಯ ಅವರು ಉತ್ತುಂಗದ ಸ್ಥಿತಿಯಲ್ಲಿದ್ದರು. ಅವರ ಜೀವನಶೈಲಿ ಯಿಂದ ಪ್ರಭಾವಿತನಾದೆ. ಹಾಸ್ಟೆಲ್‌ನಲ್ಲಿ ಇದ್ದ ಕಾರಣ ಅವರ ಜತೆಗಿನ ಒಡನಾಟ ಹೆಚ್ಚಿತು. ಅವರ ಜತೆಗೆ ಟೆನಿಸ್ ಆಡುತ್ತಿದ್ದೆ. ನನ್ನ ಬದುಕನ್ನು ಬದಲಿಸಿದ್ದು ಅವರ ಜೀವನ ಶೈಲಿ ಎಂದು ಹೇಳಿದರು.

English summary
Bengaluru: Basavangudi national college honoured A.S. Kiran Kumar, who took over as Chairman of the prestigious Indian Space Research Organization and Secretary, Department of Space. Kiran Kumar recollected his entry into the college as a 16-year-old in 1969.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X