ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿ

|
Google Oneindia Kannada News

ಬೆಂಗಳೂರು, ಜುಲೈ 30: ನಿಗೂಢವಾಗಿ ಕಣ್ಮರೆಯಾಗಿರುವ ಕೆಫೆ ಕಾಫೀ ಡೇ ಮಾಲೀಕ, ಯಶಸ್ವೀ ಉದ್ಯಮಿ ಎನ್ನಿಸಿಕೊಂಡಿದ್ದ ವಿಜಿ ಸಿದ್ಧಾರ್ಥ ಸುಮಾರು 8000 ಕೋಟಿಗೂ ಅಧಿಕ ಮೊತ್ತದ ಸಾಲದ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ.

ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ಬೇರೆ ಬೇರೆ ಬ್ಯಾಕ್, ಫೈನಾನ್ಸ್ ಸೇರಿದಂತೆ ವಿವಿಧೆಡೆಗಳಲ್ಲಿ ಸಾಲ ಮಾಡಿಕೊಂಡಿದ್ದ ಸಿದ್ಧಾರ್ಥ ಸಾಲ ತೀರಿಸುವಂತೆ ಸಾಕಷ್ಟು ಒತ್ತಡ ಎದುರಿಸುತ್ತಿದ್ದರು ಎಂಬುದು ಅವರು ಇತ್ತೀಚೆಗೆ ಕಳಿಸಿದ ಇಮೇಲ್ ಗಳಿಂದ ತಿಳಿದುಬಂದಿದೆ.

CCD Owner VG Siddhartha Missing LIVE: 'ಮಾದರಿ ಉದ್ಯಮಿ'ಯ ಹಠಾತ್ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿCCD Owner VG Siddhartha Missing LIVE: 'ಮಾದರಿ ಉದ್ಯಮಿ'ಯ ಹಠಾತ್ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿ

ಜುಲೈ 29 ರಂದು ಸಂಜೆ 6 ಗಂಟೆಯ ಸುಮಾರಿಗೆ ಮಂಗಳೂರು ಉಳ್ಳಾಲ ರಸ್ತೆಯ ಬಳಿ ಪ್ರಯಾಣಿಸುತ್ತಿದ್ದ ಸಿದ್ಧಾರ್ಥ, ತಮ್ಮ ಡ್ರೈವರ್ ಬಳ ಕಾರನ್ನು ನಿಲ್ಲಿಸುವುದಕ್ಕೆ ಹೇಳಿ, ಯೂ ಟರ್ನ್ ತೆಗೆದುಕೊಂಡು ವಾಪಸ್ ಬನ್ನಿ, ಅಲ್ಲಿಯವರೆಗೂ ಇಲ್ಲಿಯೇ ನಿಂತಿರುತ್ತೇನೆ ಎಂದಿದ್ದರು. ಡ್ರೈವರ್ ವಾಪಸ್ ಬರುವ ಹೊತ್ತಿಗೆ ಅವರು ಆ ಸ್ಥಳದಲ್ಲಿರಲಿಲ್ಲ. ಗಾಬರಿಗೊಂಡ ಡ್ರೈವರ್ ಈ ವಿಷಯವನ್ನು ಅವರ ಕುಟುಂಬಸ್ಥರಿಗೆ ತಿಳಿಸಿದ್ದರು.

Missing CCD owner VG Siddharthas loan details.

ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?

ಅವರ ಶೋಧಕಾರ್ಯ ನಡೆಯುತ್ತಿದ್ದು, ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ತಮ್ಮ ಉದ್ಯಮ ವಿಸ್ತರಣೆ, ನಿರ್ವಹಣೆಗಾಗಿ ಬೇರೆ ಬೇರೆ ಮೂಲಗಳಿಂದ ಸಿದ್ಧಾರ್ಥ ಅವರು ಮಾಡಿದ್ದ ಸಾಲಗಳ ವಿವರ ಇಂತಿದೆ.

ವೃತ್ತಿಪರ ತಂಡವಿದೆ, ಉದ್ಯಮ ನಿಲ್ಲಿಸೊಲ್ಲ: ಷೇರು ಮಾರುಕಟ್ಟೆಗಳಿಗೆ ಕಾಫಿ ಡೇ ಪತ್ರವೃತ್ತಿಪರ ತಂಡವಿದೆ, ಉದ್ಯಮ ನಿಲ್ಲಿಸೊಲ್ಲ: ಷೇರು ಮಾರುಕಟ್ಟೆಗಳಿಗೆ ಕಾಫಿ ಡೇ ಪತ್ರ

ಐಡಿಬಿಐ ಟ್ರಸ್ಟ್ ಶಿಪ್ ಸರ್ವಿಸಸ್ ಲಿಮಿಟೆಡ್- 4,475 ಕೋಟಿ ರೂ.
ಅಕ್ಸಿಸ್ ಟ್ರಸ್ಟೀ ಸರ್ವಿಸಸ್ ಲಿಮಿಟೆಡ್- 915 ಕೋಟಿ ರೂ.
ಅಕ್ಸಿಸ್ ಬ್ಯಾಂಕ್ ಲಿಮಿಟೆಡ್ -315 ಕೋಟಿ ರೂ.
ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್- 278 ಕೋಟಿ ರೂ.
ಯೆಸ್ ಬ್ಯಾಂಕ್ ಲಿಮಿಟೆಡ್ 273.63 ಕೋಟಿ ರೂ.
ಪಿರಾಮಳ್ ಟ್ರಸ್ಟ್ ಶಿಪ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 175 ಕೋಟಿ ರೂ.
ಆರ್ ಬಿ ಎಲ್ ಬ್ಯಾಂಕ್ ಲಿಮಿಟೆಡ್ 174 ಕೋಟಿ ರೂ.
ಇಸಿಎಲ್ ಫೈನಾನ್ಸ್ ಲಿಮಿಟೆಡ್ - 150 ಕೋಟಿ ರೂ.
ಸ್ಟಾಂಡರ್ಡ್ ಚಾರ್ಟರ್ಡ್ ಲೋನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್(ಇಂಡಿಯಾ) ಲಿಮಿಟೆಡ್- 150 ಕೋಟಿ ರೂ.
ಕ್ಲಿಕ್ಸ್ ಕ್ಯಾಪಿಟಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 150 ಕೋಟಿ ರೂ.
ಅಕ್ಸಿಸ್ ಫೈನಾನ್ಸ್ ಲಿಮಿಟೆಡ್ 125 ಕೋಟಿ ರೂ.
ಕೋಟಾಕ್ ಮಹಿಂದ್ರಾ ಇನ್ವೆಸ್ಟ್ ಲಿಮಿಟೆಡ್ - 125 ಕೋಟಿ ರೂ.
ಎ.ಕೆ.ಕ್ಯಾಪಿಟಲ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ -121 ಕೋಟಿ ರೂ.
ಎಸ್ ಟಿಸಿಐ ಫೈನಾನ್ಸ್ ಲಿಮಿಟೆಡ್ 100 ಕೋಟಿ ರೂ.
RABO ಇಂಡಿಯಾ ಫೈನಾನ್ಸ್ ಲಿಮಿಟೆಡ್ 80 ಕೋಟಿ ರೂ.
ಶಾಪೂರ್ಜಿ ಪಲ್ಲೊಂಜಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 80 ಕೋಟಿ ರೂ.
ವಿಸ್ತಾರಾ ಐಟಿಸಿಎಲ್ (ಇಂಡಿಯಾ) ಲಿಮಿಟೆಡ್ 75 ಕೋಟಿ ರೂ.
ರತನ್ ಇಂಡಿಯಾ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ.
ಕ್ಲಿಕ್ಸ್ ಫೈನಾನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ.
ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್ 50 ಕೋಟಿ ರೂ.
ಕೊಟಾಕ್ ಹೀಂದ್ರಾ ಪ್ರೈಮ್ ಲಿಮಿಟೆಡ್ 50 ಕೋಟಿ ರೂ.
ಐಎಫ್ ಸಿಐ ಲಿಮಿಟೆಡ್ 50 ಕೋಟಿ ರೂ.
ಬಜಾಜ್ ಫೈನಾನ್ಸ್ ಲಿಮಿಟೆಡ್ 45 ಕೋಟಿ ರೂ.
ಎಡೆಲ್ವೆಸ್ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ 25 ಕೋಟಿ ರೂ.

ಒಟ್ಟು ಸಾಲದ ಮೊತ್ತ 8,082.63 ಕೋಟಿ ರೂ.

English summary
Missing CCD owner VG Siddhartha's loan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X