ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಸ್ ಅಧಿಕಾರಿ ರೂಪಾ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ನಕಲಿ ಖಾತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30: ಇನ್ ಸ್ಟಾಗ್ರಾಮ್ ನಲ್ಲಿ ನನ್ನ ಹೆಸರಲ್ಲಿ ನಕಲಿ ಖಾತೆ ಶುರು ಮಾಡಿ, ಹಣ ವಸೂಲಿ ಮಾಡುತ್ತಿದ್ದಾರೆ ಅನ್ನೋದು ನನ್ನ ಗಮನಕ್ಕೆ ಬಂತು. ಇನ್ ಸ್ಟಾ ಗ್ರಾಮ್ ನಲ್ಲಿ ನನ್ನ ಅಕೌಂಟೇ ಇಲ್ಲ. ಆದ್ದರಿಂದ ಶನಿವಾರ ಸೈಬರ್ ಕ್ರೈಂ ಪೊಲೀಸ್ ನವರಿಗೆ ದೂರು ಕೊಟ್ಟಿದ್ದೀನಿ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಡೆಪ್ಯೂಟಿ ಜನರಲ್ ಆಫ್ ಇನ್ ಸ್ಪೆಕ್ಟರ್- ಹೋಮ್ ಗಾರ್ಡ್ಸ್ ಆಗಿರುವ ಡಿ.ರೂಪಾ ಅವರ ಹೆಸರಲ್ಲಿ ಕೆಲವು ದುಷ್ಕರ್ಮಿಗಳು ಇನ್ ಸ್ಟಾ ಗ್ರಾಮ್ ನಲ್ಲಿ d_roopa_ips ಎಂದು ಖಾತೆ ಆರಂಭಿಸಿ, ಆರ್ಥಿಕವಾಗಿ ದುರ್ಬಲವಾಗಿರುವ ಹೆಣ್ಣುಮಕ್ಕಳಿಗೆ ನೆರವಾಗಲು ದಾನ ಮಾಡಿ ಎಂಬ ಒಕ್ಕಣೆ ಕೂಡ ಹಾಕಿದ್ದಾರೆ.

Miscreants raise funds online in D Roopa’s name

ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಪ್ರತಿಷ್ಠಿತ ಜಿ-ಫೈಲ್ಸ್ ಪ್ರಶಸ್ತಿ ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಪ್ರತಿಷ್ಠಿತ ಜಿ-ಫೈಲ್ಸ್ ಪ್ರಶಸ್ತಿ

ಯಾವಾಗ ಈ ದೇಣಿಗೆ ಸಂಗ್ರಹದ ಹಿಂದಿನ ಉದ್ದೇಶವನ್ನು ವ್ಯಕ್ತಿಯೊಬ್ಬರು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದರೋ ಆಗ ರೂಪಾ ಅವರ ಗಮನಕ್ಕೆ ಈ ವಿಚಾರ ಬಂದಿದೆ. "ನಾನು ಇನ್ ಸ್ಟಾ ಗ್ರಾಮ್ ಖಾತೆಯೇ ತೆರೆದಿಲ್ಲ. ಬಹಳ ಹುಡುಕಾಡಿದ ಮೇಲೆ ಅದು ಪತ್ತೆಯಾಯಿತು. ಕೂಡಲೇ ಆ ಖಾತೆಯನ್ನು ಡಿಲೀಟ್ ಮಾಡಬೇಕು ಎಂದು ಮನವಿ ಮಾಡಿದ್ದೇನೆ" ಎಂದಿದ್ದಾರೆ ರೂಪಾ.

ಇನ್ ಸ್ಟಾ ಗ್ರಾಮ್ ಅಧಿಕಾರಿಗಳಿಗೆ ಸೈಬರ್ ಕ್ರೈಂ ಪೊಲೀಸರು ಪತ್ರ ಬರೆದಿದ್ದಾರೆ. ಖಾತೆದಾರರ ಮಾಹಿತಿ ಪತ್ತೆ ಹಚ್ಚುವುದಾಗಿ ಅವರು ಹೇಳಿದ್ದಾರೆ.

English summary
Senior IPS officer D Roopa on Saturday filed a complaint with city cybercrime police stating miscreants have been collecting money by creating a fake Instagram account in her name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X