ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟ್ ಮಾಡಿ ಎಂದು ಕನ್ನಡದಲ್ಲಿ ಮಿರರ್ ನೌ ಸಂಪಾದಕಿಯಿಂದ ಕರೆ

|
Google Oneindia Kannada News

ಕರ್ನಾಟಕದಲ್ಲಿಂದು 14 ಕ್ಷೇತ್ರಗಳಲ್ಲಿ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ. ಚುನಾವಣಾ ಆಯೋಗವು ಎಲ್ಲಾ ರೀತಿಯಿಂದ ಶೇಕಡಾವಾರು ಮತದಾನ ಹೆಚ್ಚಿಸಲು ಯತ್ನಿಸುತ್ತಲೇ ಇದೆ. ಅನೇಕ ಸೆಲೆಬ್ರಿಟಿಗಳು, ವಿವಿಧ ರಂಗದ ಗಣ್ಯರು ಮತದಾನ ಮಾಡಿ ಎಂದು ಕರೆನೀಡುತ್ತಾ ಬಂದಿದ್ದಾರೆ. ಆದರೆ, ಈ ಬಾರಿಯೂ ಬೆಂಗಳೂರಿನ ಮತದಾರರು ನಿದ್ದೆಯಿಂದ ಎದ್ದ ಹಾಗೆ ಕಾಣುತ್ತಿಲ್ಲ.

ಈ ನಡುವೆ ಪತ್ರಕರ್ತೆ, ಮಿರರ್ ನೌ ಟಿವಿ ಕಾರ್ಯಕಾರಿ ಸಂಪಾದಕಿ, ಬೆಂಗಳೂರು ಮೂಲದ ಫಾಯೆ ಡಿಸೋಜಾ ಅವರ ಟ್ವೀಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ವೋಟ್ ಮಾಡಿ ಎಂದು ಇಂಗ್ಲೀಷ್ ನಲ್ಲೇ ಬರೆದು ಟ್ವೀಟ್ ಮಾಡಿ, ವಿಡಿಯೋ ಮೂಲಕ ಕರೆ ನೀಡಬಹುದಾಗಿದ್ದರೂ, ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳನ್ನು ಗುರಿಯನ್ನಾಗಿಸಿಕೊಂಡು ಮತದಾನ ಮಾಡಿ, 'ವೋಟ್ ಮಾಡಿ, ಆಮೇಲೆ ಬೇಕಾದ್ರೆ ಹಾಲಿಡೇ ಮಾಡಿ' ಎಂದು ಕನ್ನಡದಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಲೋಕ ಸಮರ LIVE: ಸುಮಲತಾ-ನಿಖಿಲ್ ಬೆಂಬಲಿಗರ ನಡುವೆ ಮಾರಾ-ಮಾರಿಕರ್ನಾಟಕ ಲೋಕ ಸಮರ LIVE: ಸುಮಲತಾ-ನಿಖಿಲ್ ಬೆಂಬಲಿಗರ ನಡುವೆ ಮಾರಾ-ಮಾರಿ

ಜೊತೆಗೆ ವಿಡಿಯೋ ಮೂಲಕ ಕರೆ ನೀಡಿ, 'ನಮಸ್ಕಾರ ನಿಮಗೆ ಗೊತ್ತಿರಬೇಕು ನಾಳೆ ವೋಟಿಂಗ್ ಇದೆ, ಅದು ಲಾಂಗ್ ವೀಕೆಂಡ್, ಗುಡ್ ಫ್ರೈಡೇ, ಸಾಟರ್ಡೇ, ಸಂಡೇ, ನೀವೇನಾದ್ರೂ ಔಟ್ ಸ್ಟೇಷನ್ ಟ್ರಿಪ್ ಪ್ಲಾನ್ ಮಾಡಿದ್ರೆ ನನ್ನದೊಂದು ಚಿಕ್ಕ ರಿಕ್ವೆಸ್ಟ್, 7 ಗಂಟೆಗೆ ವೋಟಿಂಗ್ ಶುರುವಾಗುತ್ತೆ, ಬೆಳಗ್ಗೆ ವೋಟ್ ಮಾಡ್ಬಿಟ್ಟು, ಅದಾದ್ಮೇಲೆ ಹಾಯಾಗಿ ವೀಕೆಂಡ್ ಹೊರಗೆ ಹೋಗಬಹುದು. ಐದು ವರ್ಷದಲ್ಲಿ ಒಂದು ಸಲ ಮಾತ್ರ ಚಾನ್ಸ್ ಸಿಗುತ್ತೆ. ಅದಕ್ಕೆ ಚಾನ್ಸ್ ಬಿಡಬೇಡಿ ನೀವು, ಇದು ನನ್ನ ರಿಕ್ವೇಸ್ಟ್ ಎಂದಿದ್ದಾರೆ.

Mirror Now Editor Faye D Souza appeals in Kannada to cast vote

ಇಲ್ಲಿ ಇಂಗ್ಲೀಷ್ ಮಿಶ್ರಿತ ಕನ್ನಡವೇ ಅಧಿಕವಾಗಿದೆಯಲ್ಲ ಎಂಬ ಆಕ್ಷೇಪವಿದ್ದರೂ, ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಶ್ಲಾಘನೀಯ. ಈ ಹಿಂದೆ, ಮೈಸೂರಿನಲ್ಲಿ ಜಿ.ಟಿ ದೇವೇಗೌಡರು ಗೆಲುವು ಸಾಧಿಸಿದಾಗ, ಅವರೊಟ್ಟಿಗೆ ಕನ್ನಡದಲ್ಲೇ ಮಾತನಾಡಿ, ಅಚ್ಚರಿ ಮೂಡಿಸಿದ್ದರು.

ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ದಕ್ಷಿಣ ಭಾರತದ ಸುದ್ದಿ ಅದ್ರಲ್ಲೂ ಕರ್ನಾಟಕವೆಂದರೆ ಅಷ್ಟಕಷ್ಟೇ ಎಂಬ ಮಾತಿದೆ. ಆದರೆ, ಫಾಯೆ ಡಿಸೋಜಾ ಅವರು ಸಾಧ್ಯವಾದಷ್ಟು ಇಲ್ಲಿನ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಮೌಂಟ್ ಕಾರ್ಮೆಲ್ ಕಾಲೇಜ್, ಕಮಿಟ್ಸ್ ನಲ್ಲಿ ವ್ಯಾಸಂಗ ಮಾಡಿರುವ ಫಾಯೆ ಅವರು ಆಲ್ ಇಂಡಿಯಾ ರೇಡಿಯೋ ನಂತರ ಟೈಮ್ಸ್ ಗ್ರೂಪ್ ನ ಇಟಿ ನೌ ನಲ್ಲಿ ನಿರೂಪಕಿಯಾಗಿದ್ದರು. ಸದ್ಯ, ಮಿರರ್ ನೌನಲ್ಲಿ ಅರ್ಬನ್ ಡಿಬೇಟ್ ಕಾರ್ಯಕ್ರಮದ ಮೂಲಕ ಚಿರಪರಿಚಿತ.

English summary
Mirror Now Executive Editor Faye D' Souza tweets, appeal in Kannada to cast vote. Karnataka votes for 14 Constituencies today(April 18). next phase of voting in Karnataka is on April 23, Results will be declared on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X