ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಹವೊಂದಕ್ಕೆ ಬೆಂಗಳೂರಿನ 16 ವರ್ಷದ ಬಾಲಕಿಯ ಹೆಸರು

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 8: ಯಾರಿಗುಂಟು ಯಾರಿಗಿಲ್ಲ.. ಬೆಂಗಳೂರಿನ ಇವೆಂಚರ್ ಅಕಾಡೆಮಿಯ 12 ನೇ ತರಗತಿ ವಿದ್ಯಾರ್ಥಿನಿ ಈಕೆ. ಈಗಲೇ ಆಕೆಯ ಹೆಸರನ್ನು ಸಣ್ಣ ಗ್ರಹವೊಂದಕ್ಕೆ ಇಡಲಾಗಿದೆ. ಇದಕ್ಕೆ ಕಾರಣವಾಗಿದ್ದು ಆಕೆ ನಗರದ ವರ್ತೂರು ಕೆರೆ ಸೇರಿ ಹಲವು ಕೆರೆಗಳ ಮೇಲೆ ನಡೆಸಿದ ಅಧ್ಯಯನ.

12ನೇ ತರಗತಿ ವಿದ್ಯಾರ್ಥಿನಿ ಸಾಹಿತಿ ಪಿಂಗಾಳಿ ಲಾಸ್ ಏಂಜಲೀಸ್ ನಲ್ಲಿ ನಡೆದ ವಿಜ್ಞಾನ ಮತ್ತು ಎಂಜಿನಿಯರ್ ಉತ್ಸವದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾಳೆ. ಇದಕ್ಕೆ ಬಳುವಳಿಯಾಗಿ ಮಿಲ್ಕಿ ವೇ (ಹಾಲು ಹಾದಿ) ಗ್ಯಾಲಾಕ್ಸಿಯ ಗ್ರಹವೊಂದಕ್ಕೆ ಆಕೆಯ ಹೆಸರನ್ನು ಇಡಲಾಗಿದೆ. ಖ್ಯಾತ ನಾಮ ವಿಜ್ಞಾನಿಗಳ ಗ್ರಹಗಳ ಜತೆ ಈಕೆಯ ಹೆಸರಿನ ಗ್ರಹವೂ ಗುರುತಿಸಿಕೊಳ್ಳಲಿದೆ.[ಅಮೆರಿಕಾದ 'ಸ್ಪೆಲ್ಲಿಂಗ್ ಬೀ' ಸ್ಪರ್ಧೆ ಗೆದ್ದ ಭಾರತೀಯ ಮೂಲದ ಅನನ್ಯ]

Minor planet will be named after Bengaluru Grade 12 student Sahithi Pingali

ಮೆಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಗೆ ಮಾತ್ರ ಹೀಗೆ ಗ್ರಹಗಳಿಗೆ ಹೆಸರು ಇಡುವ ಅಧಿಕಾರವಿದ್ದು ಅವರು ಸಾಹಿತಿ ಪಿಂಗಾಳಿ ಹೆಸರನ್ನು ಗ್ರಹವೊಂದಕ್ಕೆ ಇಟ್ಟಿದ್ದಾರೆ.

Minor planet will be named after Bengaluru Grade 12 student Sahithi Pingali

ಸಾಹಿತಿಗೆ ಇನ್ನೂ 16 ವರ್ಷ. ಈಗಾಗಲೆ ಈಕೆ ತಮ್ಮ ಸಣ್ಣ ವಯಸ್ಸಿನಲ್ಲೇ ಹಲವಾರು ಅಂತರಾಷ್ಟ್ರೀಯ ವಿಜ್ಞಾನ ಪ್ರಶಸ್ತಿಗಳನ್ನು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಈಕೆ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ವಿದ್ಯಾರ್ಥಿಗಳ ಜತೆ ಇಂಟರ್ನ್ ಶಿಪ್ ಮಾಡುತ್ತಿದ್ದಾಳೆ.

English summary
The Lincoln Laboratory of the Massachusetts Institute of Technology (MIT), which has the right to name minor planets, decided to name a planet after Sahithi Pingali, a Grade 12 student from Bengaluru's Inventure Academy. Sahithi made her research on 'An Innovative Crowd sourcing Approach to Monitoring Freshwater Bodies' which was based on city lakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X