ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬಿದ ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಜುಲೈ 8: ಕೊರೊನಾ ವೈರಸ್‌ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬುವ ಕೆಲಸವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡಲು ಹೊರಟಿದ್ದಾರೆ.

Recommended Video

UN ಸಭೆಯಲ್ಲಿ Pakistan ವಿರುದ್ಧ ಭಾರತ ವಾಗ್ದಾಳಿ | Oneindia Kannada

'ನಿಮ್ಮ ಜೊತೆಯಲ್ಲಿ ನಾವುಗಳಿದ್ದೇವೆ' ಎಂದು ಕೊರೊನಾ ವಾರಿಯರ್ಸ್‌ಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸುರೇಶ್ ಕುಮಾರ್ ಜನರಿಗೆ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ಅಬ್ಬರ: ಮೈಸೂರಿನಲ್ಲಿ 49 ಕೇಸ್ ದೃಢ, ಚಿಕ್ಕಮಗಳೂರಿನಲ್ಲಿ 1 ಸಾವುಕೊರೊನಾ ವೈರಸ್ ಅಬ್ಬರ: ಮೈಸೂರಿನಲ್ಲಿ 49 ಕೇಸ್ ದೃಢ, ಚಿಕ್ಕಮಗಳೂರಿನಲ್ಲಿ 1 ಸಾವು

ಕೊರೊನಾ ವಿರುದ್ಧ ಕಳೆದ ಮೂರು ತಿಂಗಳಿನಿಂದ ಕೊರೊನಾ ವಾರಿಯರ್ಸ್‌ ನಿರಂತರ ಹೋರಾಟ ಮಾಡುತ್ತಿದ್ದಾರೆ. ಪೊಲೀಸ್‌ ಸಿಬ್ಬಂದಿ, ಡಾಕ್ಟರ್ಸ್‌, ನರ್ಸ್‌, ಆಶಾ ಕಾರ್ಯಕರ್ತೆಯರು, ಬಿಬಿಎಂಪಿ ಸಿಬ್ಬಂದಿ ವರ್ಗ ಕೆಲಸಗಳಿಂದ ಬಳಲಿದ್ದು, ತಮ್ಮ ಚೈತನ್ಯ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

Suresh Kumar Has Appealed People To Support Corona Warriors

ಇಂತಹ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬಬೇಕು. ಇದಕ್ಕೆ ಜನರು ಸಹಕಾರ ನೀಡಬೇಕು. ಜನರು ಚುನಾವಣೆಯಲ್ಲಿ ಮತ ಹಾಕಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ ಅವರ ಋಣ ನಮ್ಮ ಮೇಲೆ ಇದೆ. ಆ ಋಣ ತೀರಿಸಲು ಒಂದು ಸಣ್ಣ ಅವಕಾಶ ಸಿಕ್ಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ನಾವೆಲ್ಲಾ "ನಿಮ್ಮೊಡನಿದ್ದೇವೆ" ಎಂಬ ಸ್ಥೈರ್ಯ ತುಂಬಬೇಕಿದ್ದು, ಈ ಕುರಿತು ನಮ್ಮ ರಾಜಾಜಿನಗರ ಕ್ಷೇತ್ರದ ಎಲ್ಲಾ ಬಿಬಿಎಂಪಿ ಸದಸ್ಯರಿಗೆ ಮನವಿ ಪತ್ರ ಬರೆದಿದ್ದೇನೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

English summary
Suresh Kumar appealed to the people to support Corona Warriors by saying "We are with you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X