ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗತ್ಯ ವಸ್ತುಗಳ ಸರಬರಾಜಿನ ಸರಕು ವಾಹನಗಳಿಗೆ ಅಡ್ಡಿ ಇಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 26: ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯದ ಗಡಿ ಭಾಗಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳ ಸರಬರಾಜು ಮಾಡುವ ಲಾರಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಡಿಯೋ ಕಾನ್ಪರೆನ್ಸ್‌ನಲ್ಲಿ ಸೂಚನೆ ಕೊಟ್ಟಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ ಹೇಳಿದರು.

ಅಗತ್ಯ ವಸ್ತುಗಳ ಖರೀದಿಗೆ ಜನ ಏರಿಯಾ ಬಿಟ್ಟು ಹೋಗದಂತೆ ಗೃಹ ಇಲಾಖೆ ನೋಡಿಕೊಳ್ಳಬೇಕು. ಪಾಸ್ ಇಲ್ಲದವರು ಓಡಾಡದಂತೆ ನೋಡಿಕೊಳ್ಳಬೇಕು. ಖಾಸಗಿ ಕ್ಲಿನಿಕ್ ಗಳು ಕೆಲಸ ನಿರ್ವಹಿಸಬೇಕು ಎಂಬ ಸೂಚನೆಗಳನ್ನು ಸಿಎಂ ಡಿಸಿಗಳಿಗೆ ಕೊಟ್ಟಿದ್ದಾರೆ. ಖಾಸಗಿ ಡಿಸ್ಟಿಲರಿಗಳು ಸ್ಯಾನಿಟೈಸರ್ ಉತ್ಪಾದಿಸಿ ಉಚಿತವಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಗಂಭೀರ ಆರೋಪ: ಸಿಎಂ ಎದುರು ಕಣ್ಣೀರಿಟ್ಟರಾ ಕಮಿಷನರ್?ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಗಂಭೀರ ಆರೋಪ: ಸಿಎಂ ಎದುರು ಕಣ್ಣೀರಿಟ್ಟರಾ ಕಮಿಷನರ್?

ಅಗತ್ಯ ವ್ಯವಸ್ಥೆ ಆಗದಿದ್ದರೆ ಯಾಕೆ ಆಗಿಲ್ಲ ಎಂಬ ಮಾಹಿತಿ ಕೇಳಲಾಗಿದೆ. ಅಗತ್ಯ ವಸ್ತುಗಳ ಸರಬರಾಜಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಹೇಳಲಾಗಿದೆ. ಅಗತ್ಯ ವಸ್ತು ಮನೆಗಳಿಗೆ ತಲುಪಿಸಲು ಎಲ್ಲಾ ಡಿಸಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದರು.

Medical Education Minister Sudhakar Information To Medai About CM Video Confrence

ಜೀವ ಕಾಪಾಡಿಕೊಳ್ಳಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಿಟ್ಟು ಬೇರೆ ದಾರಿ ಇಲ್ಲ. ರಾಜ್ಯದಲ್ಲಿ 55 ಜನರಿಗೆ ಸೋಂಕು ದೃಢಪಟ್ಟಿದೆ, 2 ಸಾವಾಗಿದೆ ಎಂದು ಮಾಹಿತಿ ನೀಡಿದರು.

English summary
Medical Education Minister Sudhakar Information To Medai About CM Video Confrence. There is no hurdle for esencial goods transport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X