• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರದ ವಿರುದ್ಧ ಸಿಡಿದ ಸಿದ್ದರಾಮಯ್ಯಗೆ ಸುಧಾಕರ್ ತಿರುಗೇಟು

|

ಬೆಂಗಳೂರು, ಆಗಸ್ಟ್ 03: ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮತ್ತು ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಮತ್ತೊಮ್ಮೆ ಗುಡುಗಿದ್ದರು. ಆರೋಗ್ಯ ಇಲಾಖೆ ಹಾಗೂ ಬಿಜೆಪಿ ಸರ್ಕಾರ ದುಡ್ಡಿಗಾಗಿ ಕೆಲಸ ಮಾಡುತ್ತಿದೆ, ಜನರ ಪ್ರಾಣ ಮುಖ್ಯವಿಲ್ಲ ಎಂದು ಟೀಕಿಸಿದ್ದರು.

   BSYಗೆ ಕೊವಿಡ್ ಹಿನ್ನೆಲೆಯಲ್ಲಿ HD Kumaraswamy , Siddaramaiah ಶುಭಹಾರೈಕೆ | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಸಿದ್ದರಾಮಯ್ಯ ಅವರು ಆರೋಪಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ತಿರುಗೇಟು ನೀಡಿದ್ದಾರೆ. 'ಕುಂಭಕರ್ಣನ ರೀತಿ ನಿದ್ದೆ ಮಾಡುವವರನ್ನು ಎಚ್ಚರಿಸಬಹುದು. ಆದರೆ ನಿದ್ದೆ ಮಾಡುವ ರೀತಿ ನಟನೆ ಮಾಡುವ ವ್ಯಕ್ತಿಗಳನ್ನು ಎಚ್ಚರಿಸಲು ಸಾಧ್ಯವಿಲ್ಲ' ಎಂದು ಪ್ರತ್ಯುತ್ತರ ನೀಡಿದ್ದಾರೆ.

   ಸಿಡುಕಿದ ಸಿದ್ದರಾಮಯ್ಯ: ರಾಜ್ಯ ಸರ್ಕಾರದಲ್ಲಿ ಹುಟ್ಟುತ್ತಾ ನಡುಕ?

   ಇದಕ್ಕೂ ಮುಂಚೆ ಸಿದ್ದರಾಮಯ್ಯ 'ಬೆಡ್ ಇಲ್ಲ, ಔಷಧಿ, ಊಟ ಕೊಡ್ತಿಲ್ಲ, ಅಂಬ್ಯುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ. ಬೀದಿಯಲ್ಲಿಯೇ ಹೆಣವಾದರು, ಸತ್ತಮೇಲೆಯೂ ದಪನ ಮಾಡುವವರಿಲ್ಲ ಎನ್ನುವುದೇ ಮಾಧ್ಯಮಗಳಲ್ಲಿ ನಿತ್ಯ ಸುದ್ದಿ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟ ಕಾಣಲಿಲ್ಲ, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಗಳಿಸಬಹುದಾದ ದುಡ್ಡು‌‌ಕಾಣ್ತು. ಇದನ್ನು ನೋಡಿ ನಾವು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಸುಧಾಕರ್ ಸರಣಿ ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. ಮುಂದೆ ಓದಿ...

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   ಸಿದ್ದರಾಮಯ್ಯಗೆ ಸುಧಾಕರ್ ತಿರುಗೇಟು

   ಸಿದ್ದರಾಮಯ್ಯಗೆ ಸುಧಾಕರ್ ತಿರುಗೇಟು

   'ರಾಜ್ಯದಲ್ಲಿ ಬೆಡ್‌ ಇಲ್ಲ, ಔಷಧ, ಊಟ ಕೊಡ್ತಿಲ್ಲ, ಅಂಬುಲೆನ್ಸ್ ಇಲ್ಲ, ವೆಂಟಿಲೇಟರ್‌ ಇಲ್ಲ ಎನ್ನುತ್ತಿದ್ದೀರಲ್ಲ. ಭಾರತದಲ್ಲಿ ತಯಾರಾಗುವ ವೆಂಟಿಲೇಟರ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲು ನಿನ್ನೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇದೇ ʼಆತ್ಮನಿರ್ಭರ ಭಾರತʼ ಅಜ್ಞಾನವು ಎಲ್ಲ ತೊಂದರೆಗಳನ್ನು ಬೆಳೆಯುವ ಹೊಲ ಮರೆಯಬೇಡಿ' ಎಂದು ಸುಧಾಕರ್ ತಿರುಗೇಟು ನೀಡಿದ್ದಾರೆ.

   ಗುಣಮುಖರಾದವರ ಬಗ್ಗೆಯೂ ತಿಳಿಸಿ

   ಗುಣಮುಖರಾದವರ ಬಗ್ಗೆಯೂ ತಿಳಿಸಿ

   'ರಾಜ್ಯದಲ್ಲಿ ಇದುವರೆಗೆ 57725 ಮಂದಿ ಗುಣಮಖರಾಗಿದ್ದಾರೆ. ಇಂದು ಒಂದೇ ದಿನ 4077 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ಇವರೆಲ್ಲರೂ ಚಿಕಿತ್ಸೆ ಸಿಗದೇ ಗುಣಮುಖರಾಗಿದ್ದಾರೆಯೇ? ಕೇವಲ ಸೋಂಕಿತರು, ಒಟ್ಟು ಪ್ರಕರಣಗಳ ಬಗ್ಗೆ ಟ್ಟೀಟ್‌ ಮಾಡುತ್ತೀರಲ್ಲ, ಗುಣಮುಖರಾದವರ ಬಗ್ಗೆಯೂ ಜನರಿಗೆ ತಿಳಿಸಿ' ಎಂದು ಕಿಡಿಕಾರಿದ್ದಾರೆ.

   ಸರ್ಕಾರ ಏನು ಕೊಟ್ಟಿದೆ ಏಂದು ಕೇಳುವವರಿಗೆ ಉತ್ತರ

   ಸರ್ಕಾರ ಏನು ಕೊಟ್ಟಿದೆ ಏಂದು ಕೇಳುವವರಿಗೆ ಉತ್ತರ

   54 ಸಾವಿರ ಕೈಮಗ್ಗ ನೇಕಾರರ ಖಾತೆಗೆ ಪ್ರತಿವರ್ಷ 2 ಸಾವಿರ ಜಮಾ. ರಾಜ್ಯದ 2.30 ಲಕ್ಷ ಕ್ಷೌರಿಕರಿಗೆ 5 ಸಾವಿರ ರೂ ಪರಿಹಾರ. ರಾಜ್ಯದ 7.75 ಲಕ್ಷ ಆಟೋರಿಕ್ಷಾ ಮತ್ತು ಟ್ವ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ ಪರಿಹಾರ. ರಾಜ್ಯದ 60 ಸಾವಿರ ಮಡಿವಾಳ ಸಮುದಾಯದವರಿಗೆ 5 ಸಾವಿರ ರೂ ಪರಿಹಾರ. ಇವೆಲ್ಲ ಯಾವ ಸರ್ಕಾರ ಕೊಟ್ಟಿದ್ದು?

   ಕಟ್ಟಡ ಕಾರ್ಮಿಕರಿಗೆ, ಹೂವು ಬೆಳೆಗಾರರಿಗೆ ಪರಿಹಾರ

   ಕಟ್ಟಡ ಕಾರ್ಮಿಕರಿಗೆ, ಹೂವು ಬೆಳೆಗಾರರಿಗೆ ಪರಿಹಾರ

   1610 ಕೋಟಿ ವಿಶೇಷ ಪ್ಯಾಕೇಜ್‌ನಲ್ಲಿ ರಾಜ್ಯದ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿರುವ ಸರ್ಕಾರ ಇದುವರೆಗೆ 15.8ಲಕ್ಷ ಕಟ್ಟಡ ಕಾರ್ಮಿಕರಿಗೆ ಅವರ ಖಾತೆಗಳಿಗೆ ತಲಾ 5000 ರೂಗಳ ನಂತೆ 800 ಕೋಟಿ ರೂ ಸಹಾಯಧನ ವಿತರಿಸಲಾಗಿದೆ. ಹೂವು ಬೆಳೆದು ನಷ್ಟಕ್ಕೀಡಾದ ರೈತರಿಗೆ ಗರಿಷ್ಠ1ಹೆಕ್ಟೇರ್‌ಗೆ 25 ಸಾವಿರ ಪರಿಹಾರ.

   ಜಾಣ ಕುರುಡು ಮೆರೆಯುತ್ತಿದ್ದೀರಾ

   ಜಾಣ ಕುರುಡು ಮೆರೆಯುತ್ತಿದ್ದೀರಾ

   'ಕುಂಭಕರ್ಣನ ರೀತಿ ನಿದ್ದೆ ಮಾಡುವವರನ್ನು ಎಚ್ಚರಿಸಬಹುದು. ಆದರೆ ನಿದ್ದೆ ಮಾಡುವ ರೀತಿ ನಟನೆ ಮಾಡುವ ವ್ಯಕ್ತಿಗಳನ್ನು ಎಚ್ಚರಿಸಲು ಸಾಧ್ಯವಿಲ್ಲ. ಈ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿರುವುದನ್ನು ನೋಡಿಯೂ ನೀವು, ಜಾಣ ಕುರುಡುತವನ್ನು ಮೆರೆಯುತ್ತಿದ್ದೀರಾ ಅನ್ನಿಸುತ್ತದೆ' ಎಂದು ಟೀಕಿಸಿದ್ದಾರೆ.

   ಗುರಿ ಮುಟ್ಟೇ ಮುಟ್ಟುತ್ತವೆ

   ಗುರಿ ಮುಟ್ಟೇ ಮುಟ್ಟುತ್ತವೆ

   ʼಮಳೆಯ ನೀರು ಮೊದಲು ಪರ್ವತದ ಶಿಖರಗಳ ಮೇಲೆ ಬೀಳುತ್ತದೆ. ಅಲ್ಲಿಂದ ಬೆಟ್ಟ ಬಯಲು, ಊರು-ಕೇರಿಗಳಲ್ಲಿ ಹರಿದು ಬಂದು ನದಿಯಾಗಿ ಸಮುದ್ರ ಸೇರುತ್ತದೆʼ. ಅದರಂತೆಯೇ ಉತ್ತಮ ಯೋಜನೆಗಳು ಗುರಿ ಮುಟ್ಟೇ ಮುಟ್ಟುತ್ತವೆ ಎಂಬ ನಂಬಿಕೆ ಮತ್ತು ದೃಢತೆ ನಮ್ಮಲ್ಲಿದೆ' ಎಂದು ಹೇಳಿದ್ದಾರೆ.

   English summary
   Why siddaramaiah does not telling coronavirus recovery numbers? Minister Sudhakar has react on opposition leaders allegations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X