• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಕಷ್ಟದ ನಡುವೆ ಸಂತೋಷದ ದಿನ ನೆನೆದ ಸದಾನಂದ ಗೌಡ

|

ಬೆಂಗಳೂರು, ಮೇ 23: ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕೊರೊನಾ ಸಂಕಷ್ಟದ ನಡುವೆ ಸಂತೋಷದ ದಿನದ ನೆನಪನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

   ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಲೋಕಸಭೆ ಚುನಾವಣೆ ನಡೆದಿತ್ತು. ಬಿಜೆಪಿ ಮತ್ತೆ ತನ್ನ ವಿಜಯ ಪತಾಕೆ ಹರಿಸಿತ್ತು. ಈ ಸಂಭ್ರಮದ ಕ್ಷಣವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸದಾನಂದ ಗೌಡ ನೆನೆದಿದ್ದಾರೆ.

   ''ಕಳೆದ ವರ್ಷ ಇದೇ ದಿನ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಎಲ್ಲಡೆ ಕೇಸರಿ ಗುಲಾಬಿ ಚೆಲ್ಲಿತ್ತು. ಕಾರ್ಯಕರ್ತ ಮಿತ್ರರೆ, ಮತದಾರ ಬಂಧುಗಳೆ ಅಂದು ನೀವೆಲ್ಲ ಸೇರಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಚಂಡ ಬಹುಮತದಿಂದ ನನ್ನನ್ನು ಮರು ಆಯ್ಕೆ ಮಾಡಿದ್ದೀರಿ. ಎಂದೆಂದಿಗೂ ನಿಮಗೆ ನಾನು ಋಣಿ'' ಎಂದು ಸದಾನಂದ ಗೌಡ ಸಂತಸ ಹಂಚಿಕೊಂಡಿದ್ದಾರೆ.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   ಲಾಕ್ ಡೌನ್ ವೇಳೆ ರಾಸಾಯನಿಕ, ರಸಗೊಬ್ಬರ ಇಲಾಖೆಯ ಸಾಧನೆ ಇದು!

   ''ನಾನೇನಾದರೂ ರಾಜ್ಯಕ್ಕೆ, ದೇಶಕ್ಕೆ ಅಲ್ಪಸ್ವಲ್ಪ ಸೇವೆ ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ನಿಮ್ಮ ಆಶೀರ್ವಾದವೇ ಕಾರಣ. ನಿಮ್ಮ ಪ್ರೀತಿ, ಬೆಂಬಲ ಹಾಗೆಯೇ ಇರಲಿ. ನಿಮ್ಮ ಸಲಹೆ ಸೂಚನೆಗೆ ಯಾವತ್ತೂ ಸ್ವಾಗತ. ನಿಮ್ಮ ನಿರೀಕ್ಷೆಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಎಲ್ಲವೂ ಒಳಿತಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

   ಕಳೆದ ವರ್ಷ ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ವಿಜಯ ಸಾಧಿಸಿದ್ದರು. ಸದ್ಯ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

   English summary
   1 year for Lok Sabha Election 2019: Union Minister for Chemicals and Fertilizers Sadananda Gowda shared his sweet memory of lok sabha election 2019
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X