ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮತ್ತೆ ಲಾಕ್​ಡೌನ್: ಸಚಿವ ಆರ್.ಅಶೋಕ್ ಏನಂದ್ರು?

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ಜಾರಿ ತರುವ ಅವಶ್ಯಕತೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಸೋಮವಾರದಿಂದ ಕಠಿಣ ನಿಯಮಗಳು ಜಾರಿಯಾಗುವುದು ಖಚಿತ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೊದಲ ಲಾಕ್​ಡೌನ್​ನಿಂದ ಈಗಾಗಲೇ ತುಂಬಾ ಸಮಸ್ಯೆ ಆಗಿದೆ. ಹಾಗಾಗಿ ಲಾಕ್​ಡೌನ್ ಹೊರತುಪಡಿಸಿ ಬಿಗಿ ಕ್ರಮ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಸೋಮವಾರ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ. ಕೋವಿಡ್ ತಜ್ಞರು ಟಫ್ ರೂಲ್ಸ್ ಜಾರಿ ಮಾಡಿ ಎಂದಿದ್ದಾರೆ. ಆದರೆ ಜನಸಾಮಾನ್ಯರ ಬದುಕು ನೋಡಬೇಕು. ಈ ಬಗ್ಗೆ ಸೋಮವಾರದ ಮತ್ತೊಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

 Minister R.Ashok Reaction About Lockdown Enforcement In Karnataka

Recommended Video

ಹೆಚ್ಚುತ್ತಿರುವ ಕೋವಿಡ್‌ ಮೃತರ ಸಂಖ್ಯೆ, ನಗರದ ಬಹುತೇಕ ಚಿತಾಗಾರಗಳು ಫುಲ್‌! |Oneindia Kannada

ಲಾಕ್​ಡೌನ್ ಬೇಡ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ನಾಳೆ ಏನೇ ತೀರ್ಮಾನ ಆದರೂ ಸಿಎಂ ಗಮನಕ್ಕೆ ತರುತ್ತೇನೆ. ಜನರು ಆದಷ್ಟು ಮದುವೆ, ಬೀಗರಕೂಟ, ಬಾಡೂಟಗಳಿಂದ ದೂರ ಇರಬೇಕು ಮನವಿ ಮಾಡಿದರು.

English summary
There is no need to enforce lockdown again in Karnataka. However, strict rules will be enforced in Bengaluru from Monday, Revenue Minister R.Ashok said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X