• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಹುಲಿ ದಿನ: 'ಮಾನ್ಯ' ಹುಲಿ ದತ್ತು ಪಡೆದ ಸಚಿವ ಮುರುಗೇಶ ನಿರಾಣಿ

|
Google Oneindia Kannada News

ಮೈಸೂರು ಜುಲೈ 29: ಅಂತಾತಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರಗೇಶ ನಿರಾಣಿ ಅವರ ಮೊಮ್ಮಗ ಸಮರ್ಥ್ ಎಂ. ವಿಜಯ ನಿರಾಣಿ ಅವರ ಹೆಸರಿನಲ್ಲಿ ಕರ್ನಾಟಕ ಮೃಗಾಲಯದಲ್ಲಿ 'ಮಾನ್ಯ' ಎಂಬ ಹೆಣ್ಣು ಹುಲಿಯನ್ನು ದತ್ತು ಸ್ವೀಕರಿಸಿದ್ದಾರೆ.

'ಮಾನ್ಯ' ಹುಲಿಗೆ 2ಲಕ್ಷದ ರೂ. ದೇಣಿಗೆ ನೀಡಿ ಒಂದು ವರ್ಷದ ಅವಧಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರ ಕುಟುಂಬ ಒಂದು ವರ್ಷದ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ; ಜುಲೈ 29ರ ಪ್ರಮುಖ ವಿದ್ಯಮಾನಗಳುಅಂತಾರಾಷ್ಟ್ರೀಯ ಹುಲಿ ದಿನಾಚರಣೆ; ಜುಲೈ 29ರ ಪ್ರಮುಖ ವಿದ್ಯಮಾನಗಳು

ಇದೇ ಸಂದರ್ಭ ಮಾತನಾಡಿದ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಶಿವಕುಮಾರ ಅವರು, ಇಂದು 'ವಿಶ್ವ ಹುಲಿ ದಿನ' ಶುಭ ಸಂದರ್ಭದಲ್ಲಿ ಸಚಿವ ಮುರುಗೇಶ ನಿರಾಣಿ ಕುಟುಂಬದವರು ಹುಲಿಯನ್ನು ದತ್ತು ಪಡೆದಿದ್ದಾರೆ. ಮೂಲಕ ಮೃಗಾಲಯದ ಪ್ರಾಣಿಗಳಿಗೆ, ಮೃಗಾಲಯ ನಿರ್ವಹಣೆಗೆ ಸಹಕಾರ ನೀಡಿದ್ದಾರೆ ಸಚಿವರು ಮತ್ತವರ ಕುಟುಂಬಕ್ಕೆ ಅಭಿನಂದಿಸುತ್ತೇನೆ ಎಂದರು.

ನಾನು ಅಧಿಕಾರ ಪಡೆದ ನಂತರ ಸಾರ್ವಜನಿಕರಿಂದ ಮೃಗಾಲಯ ಪ್ರಾಣಿ ಪಕ್ಷಿಗಳ ಸಂಕುಲ ಉಳಿಯಲು ದೇಣಿಗೆ ರೂಪದಲ್ಲಿ ಹಣ ಬರುವುದು ಸಾಮಾನ್ಯವಾಗಿ ನೋಡಿದ್ದೇನೆ. ಇಂದು ಸಚಿವರಾದ ಮುರುಗೇಶ ನಿರಾಣಿ ಅವರು ಒಂದು ವರ್ಷದ ಅವಧಿಗೆ ದತ್ತು ಮೃಗಾಲಯದ ಹೆಣ್ಣು ಹುಲಿ 'ಮಾನ್ಯ' ಳನ್ನು ದತ್ತು ಪಡೆದಿರುವುದು ಸಂತಸ ತಂದಿದೆ. ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು.

Minister Murugesh Nirani Adopts Tiger Named Manya on International Tiger Day

ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ನಗರ ಪಾಲಿಕೆ ಸದಸ್ಯರಾದ ಕೆ,ಜೆ ರಮೇಶ್, ವಿಕ್ರಂ ಅಯ್ಯಂಗಾರ್ ಹಾಗೂ ಮೃಗಾಲಯದ ಅಧಿಕಾರಿಗಳು ಹಾಜರಿದ್ದರು.

Recommended Video

   ರಾಜ್ಯದಲ್ಲಿರೋದು ನಿರ್ವೀರ್ಯ ಸರ್ಕಾರ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಕ್ರವರ್ತಿ ಸೂಲಿಬೆಲೆ ತರಾಟೆ | OneIndia Kannada
   English summary
   Large and Medium Industries Minister Murugesh Nirani has shown way by adopting 'Manya' Tiger on International Tiger Day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X