ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಟಿಕೆಟ್ ದರ ಏರಿಕೆಗೆ ಕಾರಣ ತಿಳಿಸಿದ ಸಚಿವ ಲಕ್ಷ್ಮಣ್ ಸವದಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಬಸ್ ಪ್ರಯಾಣ ದರ ಏರಿಕೆ ಮಾಡಲು ಇದ್ದ ಕಾರಣವನ್ನು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Recommended Video

ಲಕ್ಷ್ಮಣ ಸವದಿಯಿಂದ ಖಾತೆ ಕಿತ್ತುಕೊಂಡ ಯಡಿಯೂರಪ್ಪ | Lakshman Savadi | Yediyurappa

2014ರಿಂದಲೂ ಬಸ್ ದರ ಏರಿಕೆ ಮಾಡಿರಲಿಲ್ಲ. ಹೀಗಾಗಿ ಏರಿಕೆ ಮಾಡಲಾಗಿದೆ. ಬಡವರಿಗೆ ಹೊರೆಯಾಗದ ರೀತಿ ಬಸ್​ ಪ್ರಯಾಣ ದರ ಏರಿಕೆ ಮಾಡಿದ್ದೇವೆ. ಮೊದಲು ಕುಮಾರಸ್ವಾಮಿ ಬಸ್​ ದರ ಕುರಿತಾದ ಆದೇಶ ನೋಡಲಿ, ಬಳಿಕ ಮಾತನಾಡಲಿ ಎಂದು ಗುಡುಗಿದ್ದಾರೆ.

ಜನರ ಜೇಬಿಗೆ ಕತ್ತರಿ; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆಜನರ ಜೇಬಿಗೆ ಕತ್ತರಿ; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆ

ಮೂರೂವರೆ ವರ್ಷಗಳ ಕಾಲ ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ ಪರ, ವಿರುದ್ಧ ಹೈಕಮಾಂಡ್​ಗೆ ಪತ್ರ ಸುಳ್ಳು ಎಂದು ಹೇಳಿದರು. ಬಸ್ ಟಿಕೆಟ್ ದರವನ್ನು ಶೇ.12ರಷ್ಟು ಹೆಚ್ಚಿಸಲಾಗಿದೆ.

Minister Lakshman Savadi Given Clarification About Bus Ticket Price Hike

ಎಚ್​ಡಿಕೆ ಟೀಕೆ ಮಾಡುವ ಮುನ್ನ ಬಸ್ ದರ ಕುರಿತು ಆದೇಶ ನೋಡಲಿ. 2014ರಿಂದ ಈವರೆಗೂ ಬಸ್​ ಪ್ರಯಾಣ ದರ ಏರಿಸಿರಲಿಲ್ಲ. ಈಗ ನಿಗಮಗಳ ನಷ್ಟ ಸರಿದೂಗಿಸಲು ದರ ಏರಿಕೆ ಮಾಡಿದ್ದೇವೆ. ಸಾರಿಗೆ ನಿಗಮಗಳು ತುಂಬಾ ಸಂಕಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ಬಸ್​ ದರ ಏರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಮುಂದುವರೆದ ಅವರು, ನಿಗಮಗಳಲ್ಲಿ ಸೋರಿಕೆ ತಡೆಗಟ್ಟಲು ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿದ್ದೇನೆ ಎಂದರು. ನಿಗಮಗಳು ಸಂಕಷ್ಟದಲ್ಲಿದ್ದವು ಅದನ್ನು ಸರಿಪಡಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

English summary
Minister Lakshmana Savadi said the reason for the increase in bus fares was the increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X