ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟೆಕ್ ಸಮಿತ್ : ಯುರೋಪ್ ರಾಷ್ಟ್ರಗಳಿಗೆ ಜಾರ್ಜ್ ಆಹ್ವಾನ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಮುಂದಿನ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಮಟ್ಟದ ತಾಂತ್ರಿಕ ಸಮ್ಮೇಳನ ಬೆಂಗಳೂರು ಟೆಕ್ ಸಮ್ಮಿತ್ ನಲ್ಲಿ ಪಾಲ್ಗೊಳ್ಳುವಂತೆ ಯುರೋಪ್ ರಾಷ್ಟ್ರಗಳಿಗೆ ಸಚಿವ ಕೆ.ಜೆ. ಜಾರ್ಜ್ ಮನವಿ ಮಾಡಿದ್ದಾರೆ.

ಐದು ದಿನಗಳ ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಿರುವ ಜಾರ್ಜ್ ಯುರೋಪ್ ನ ಹಲವಾರು ರಾಷ್ಟ್ರಗಳ ಕೈಗಾರಿಕಾ ಸಚಿವರು ಹಾಗೂ ರಾಯಭಾರಿಗಳನ್ನು ಭೇಟಿ ಮಾಡಲಿದ್ದಾರೆ.

ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತಕ್ಕೆ ಎಸ್‌ಟಿಎ ಮಾನ್ಯತೆ ನೀಡಿದ ಅಮೆರಿಕಚೀನಾಕ್ಕೆ ಸೆಡ್ಡು ಹೊಡೆಯಲು ಭಾರತಕ್ಕೆ ಎಸ್‌ಟಿಎ ಮಾನ್ಯತೆ ನೀಡಿದ ಅಮೆರಿಕ

ಸಮ್ಮಿತ್ ನವೆಂಬರ್ 16,17ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅಲ್ಲಿನ ಸರ್ಕಾರಗಳಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಧಿಕೃತವಾಗಿ ಆಹ್ವಾನ ನೀಡುತ್ತಿದ್ದಾರೆ.

Minister KJ George invites Europe countries for Bangalore Tech Summit

ಸಚಿವ ಜಾರ್ಜ್ ಜತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳು ತೆರಳಿದ್ದಾರೆ.ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವಮಟ್ಟದ ತಾಂತ್ರಿಕ ಸಮ್ಮೇಳನ ನಡೆಯಲಿದ್ದು ಇದರಿಂದ ಭವಿಷ್ಯದಲ್ಲಿ ಬೆಂಗಳೂರಿನ ತಾಂತ್ರಿಕ ಉದ್ಯೋಗ ವಲಯದಲ್ಲಿ ಸಾಕಷ್ಟು ಹೂಡಿಕೆಯನ್ನು ಮಾಡಲು ಉತ್ತೇಜಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೆಜೆ ಜಾರ್ಜ್ ತಿಳಿಸಿದ್ದಾರೆ.

ಬೆಂಗಳೂರಿನ ಇನ್ಫೋಸಿಸ್‍ಗೆ ಸಿಲ್ವರ್ ವಿನ್ನರ್- ಜಾಗತಿಕ ಪ್ರಶಸ್ತಿಬೆಂಗಳೂರಿನ ಇನ್ಫೋಸಿಸ್‍ಗೆ ಸಿಲ್ವರ್ ವಿನ್ನರ್- ಜಾಗತಿಕ ಪ್ರಶಸ್ತಿ

ರಾಜ್ಯಕ್ಕೆ ಆಗಮಿಸುವ ಕೈಗಾರಿಕೋದ್ಯಮಿಗಳು, ರಾಜಧಾನಿ ಬೆಂಗಳೂರಿಗೆ ಸೀಮಿತಗೊಳ್ಳದೇ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವತ್ತ ಚಿಂತಿಸಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

English summary
Major and medium industries minister KJ George has invited ambassadors of Europe countries for Bangalore Tech Summit which will be held at Bengaluru in November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X