ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರವೇ ನೀಡಲಿದೆ ಸಾಲ, ಬಡ್ಡಿನೂ ಇಲ್ಲ, ಚಕ್ರಬಡ್ಡಿನೂ ಇಲ್ಲ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4: ಸರ್ಕಾರವು ಒಂದು ದಿನ ಬಡ್ಡಿ ರಹಿತ ಸಾಲವನ್ನು ನೀಡಲು ಯೋಜನೆ ರೂಪಿಸುತ್ತಿದೆ, ಶೀಘ್ರವೇ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಯೋಜನೆ ಕುರಿತು ಬೀದಿಬದಿ ವ್ಯಾಪಾರಿಗಳಿಗೆ ಸಚಿವ ಬಂಡೆಪ್ಪ ಕಾಶೆಂಪೂರ್ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬಡವರ ಬಂಧು ದಿನದ ಮಟ್ಟಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯ ಅನುಷ್ಠಾನಕ್ಕಾಗಿ ಸಚಿವ ಬಂಡೆಪ್ಪ ಕಾಂಶೆಂಪೂರ್ ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಮಂಗಳವಾರ ಸಭೆ ನಡೆಸಿದರು.

ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಎಚ್ಡಿಕೆ ಜನಪ್ರಿಯ ಯೋಜನೆ!ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಎಚ್ಡಿಕೆ ಜನಪ್ರಿಯ ಯೋಜನೆ!

ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಮೊಬೈಲ್ ಅಪ್ಲಿಕೇಷನ್ ಆಧಾರಿತ ಧನ ಸಹಾಯ ಮಾಡಲು ಮುಂದಾಗಿದೆ. ಬೀದಿಬದಿ ವ್ಯಾಪಾರಿಗಳು ತಮ್ಮ ದಿನದ ಹಸಿವನ್ನು ನೀಗಿಸಿಕೊಳ್ಳಲು ವ್ಯಾಪಾರ ನಡೆಸುತ್ತಿರುತ್ತಾರೆ. ಆದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಅವರಿಗೆ ಲಾಭ ಹಾಗಿರಲಿ ಅಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗಿದೆ.

Minister Khasempur says curbing extortion is the govt aim

ಆದರೆ ರಾಜ್ಯ ಸರ್ಕಾರವು ಬಡವರ ಬಂಧು ಎನ್ನುವ ನೂತನ ಯೋಜನೆಯನ್ನು ಜಾರಿಗೆ ತರುತ್ತಿದ್ದು ಅದರಿಂದ ಮೀಟರ್ ಬಡ್ಡಿಯನ್ನು ಸುಲಭವಾಗಿ ನಿಲ್ಲಿಸಬಹುದಾಗಿದೆ ಜತೆಗೆ ಸರ್ಕಾರವು ಒಂದು ದಿನದ ಬಡ್ಡಿ ರಹಿತ ಸಾಲವನ್ನೂ ಕೂಡ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಕುಟುಂಬದ ಒಬ್ಬರ ಕೃಷಿ ಸಾಲ ಮಾತ್ರ ಮನ್ನಾ, ನಿಯಮ ವಾಪಸ್ ಪಡೆಯಲಿದೆ ಸರ್ಕಾರಕುಟುಂಬದ ಒಬ್ಬರ ಕೃಷಿ ಸಾಲ ಮಾತ್ರ ಮನ್ನಾ, ನಿಯಮ ವಾಪಸ್ ಪಡೆಯಲಿದೆ ಸರ್ಕಾರ

ಈ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಮೊಬೈಲ್ ಆಧಾರಿತ ಧನ ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಬಂಡೆಪ್ಪ ಕಾಂಶೆಂಪೂರ್ ಅವರು ಮಾರುಕಟ್ಡೆಗೆ ಭೇಟಿ ನೀಡಿ ಬೀದಿಬದಿ ವ್ಯಾಪಾರಿಗಳ ಜತೆ ಮಾತುಕತೆ ನಡೆಸಿದರು.

English summary
Cooperative minister Bandeppa Khashwmpur has said that the state government is implementing Badavara Bandhu scheme to curb extortion by money launders on poor vendors through 'Meter Baddi (Hourly interest on hand loan)'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X