ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋತ ಕಲಿಗಳಿಗೆ ಬಿಜೆಪಿಯಲ್ಲಿ ಅನ್ಯಾಯ: ಸಚಿವ ಗೋಪಾಲಯ್ಯ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜೂನ್ 4: ಬಿಜೆಪಿ ಆಂತರಿಕ ಕಲಹದ ಬಗ್ಗೆ ಆಹಾರ ಸಚಿವ ಗೋಪಾಲಯ್ಯ ಪ್ರತಿಕ್ರಿಯಿಸಿದ್ದು, 'ಸಿಎಂ ಯಡಿಯೂರಪ್ಪ, ಬಿಜೆಪಿ ಪಕ್ಷ ನಮಗೆ ಏನು ಭರವಸೆ ನೀಡಿದ್ದರೋ ಅದರಂತೆ ನಡೆದುಕೊಳ್ತಿದ್ದಾರೆ'' ಎಂದಿದ್ದಾರೆ.

Recommended Video

ಸದ್ಯಕ್ಕೆ ಶಾಲೆ ಆರಂಭವಾಗೋದಿಲ್ಲ,ಪೋಷಕರು ಚಿಂತೆ ಮಾಡ್ಬೇಡಿ | Education Minister on School Opening

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಅಭ್ಯರ್ಥಿಗಳಿಗೆ ಬಿಜೆಪಿ ಪಕ್ಷದಿಂದ ಅನ್ಯಾಯವಾಗ್ತಿದೆ ಮತ್ತು ಗೆದ್ದು ಅಧಿಕಾರ ಅನುಭವಿಸುತ್ತಿರುವವರು ಸೋತವರ ಕೈ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೋಪಾಲಯ್ಯ ''ಸಿಎಂ ಬಿಎಸ್ವೈ, ಬಿಜೆಪಿ ಪಕ್ಷ ನಮಗೆ ಏನು ಭರವಸೆ ನೀಡಿದ್ರೋ ಅದರಂತೆ ನಡೆದುಕೊಳ್ತಿದ್ದಾರೆ. ಮುಂದೆಯೂ ಹಾಗೆಯೇ ನಡೆದುಕೊಳ್ತಾರೆ ಅನ್ನೊ ನಂಬಿಕೆ ಇದೆ'' ಎಂದಿದ್ದಾರೆ.

'ಇದೇನು ಗೋಪಾಲಪ್ಪನ ಛತ್ರವೇ?'ಎಂದು ಪ್ರಶ್ನಿಸಿದ ಸಚಿವ ಗೋಪಾಲಯ್ಯ''ಇದೇನು ಗೋಪಾಲಪ್ಪನ ಛತ್ರವೇ?'ಎಂದು ಪ್ರಶ್ನಿಸಿದ ಸಚಿವ ಗೋಪಾಲಯ್ಯ'

ಇನ್ನು ಬಿಜೆಪಿ ಆಂತರಿಕ ಜಗಳದ ಬಗ್ಗೆ ಮಾತನಾಡಿದ ಗೋಪಾಲಯ್ಯ 'ಇದು ನಮ್ಮ ಕುಟುಂಬದ ಸಮಸ್ಯೆ, ನಾವೆಲ್ಲಾ ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ತೇವೆ'' ಎಂದು ಹೇಳಿದ್ದಾರೆ.

Minister gopalaiah react about BJP internal quarrel

''ಬಿಪಿಎಲ್ ಕಾರ್ಡ್ ವಿತರಣೆ ಆಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಕಾರು, ಟ್ರ್ಯಾಕ್ಟರ್ ಇರುವವರಿಗೂ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಲಾಕ್ ಡೌನ್ ಮುಂಚಿತವಾಗಿ ಇವುಗಳನ್ನ ಪತ್ತೆ ಹಚ್ಚೊ ಕೆಲಸ ಮಾಡ್ತಿದ್ವಿ. ಲಾಕ್ ಡೌನ್ ನಿಂದ ಅದನ್ನು ನಿಲ್ಲಿಸಿದ್ವಿ. ಇದೀಗ ಮತ್ತೆ ಆ ಕೆಲಸ ಆರಂಭಿಸುತ್ತಿದ್ದೇವೆ. ಈಗಾಗಲೇ 63 ಸಾವಿರ ಬಿಪಿಎಲ್ ಕಾರ್ಡ್ ಗಳನ್ನ ಹಿಂದಿರುಗಿಸಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.

''ಅಕ್ಕಿ ಜೊತೆಗೆ 15 ಜಿಲ್ಲೆಗಳಲ್ಲಿ ರಾಗಿ, 3 ಜಿಲ್ಲೆಯಲ್ಲಿ ಜೋಳ ಹಾಗೂ ಉಳಿದ ಜಿಲ್ಲೆಗಳಿಗೆ ಗೋಧಿ ನೀಡಲಾಗುವುದು. ಜುಲೈನಿಂದ ಈ ಯೋಜನೆ ಜಾರಿಗೆ ಬರಲಿದೆ'' ಎಂದಿದ್ದಾರೆ.

English summary
Karnataka Food Minister gopalaiah has react about BJP internal quarrel. he said all ok in BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X