ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿಸಿ ಪಾಟೀಲ್‌

|
Google Oneindia Kannada News

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅದಮ್ಯ ಚೇತನದ 201 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಸಂಭ್ರಮ

ಬೆಂಗಳೂರು ನವೆಂಬರ್‌ 4: "ದಿವಂಗತ ಅನಂತಕುಮಾರ್‌ ಅವರ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ಹರಿಯುತ್ತಿರುವ ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆಯನ್ನು ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ನದಿಯ ಶುದ್ದೀಕರಣಕ್ಕೆ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಅವರು ಕೈಜೋಡಿಸುವ ಭರವಸೆಯನ್ನು ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯಕ್ಕೆ ಶೀಘ್ರ ಯೋಜನೆ ರೂಪಿಸಲಾಗುವುದು" ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಮತ್ತು ಗಣಿ ಹಾಗೂ ಭೂವಿಜ್ಞಾನ ಸಚಿವ ಸಿ ಸಿ ಪಾಟೀಲ್‌ ತಿಳಿಸಿದರು.

ತೇಜಸ್ವಿನಿ ಮನೆ ಆತಿಥ್ಯ ಸ್ವೀಕರಿಸಿದ ದೇಶದ ಪ್ರಥಮ ಪ್ರಜೆತೇಜಸ್ವಿನಿ ಮನೆ ಆತಿಥ್ಯ ಸ್ವೀಕರಿಸಿದ ದೇಶದ ಪ್ರಥಮ ಪ್ರಜೆ

ನಗರದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ನಲ್ಲಿಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 201 ರೂಪಾಯಿಗಳನ್ನು ನೀಡಿ ಗಿಡ ನೆಟ್ಟು ಸಂಭ್ರಮಿಸಿದರು. ನಂತರ ಮಾತನಾಡಿದ ಅವರು, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ ತೇಜಸ್ವಿನಿ ಅನಂತಕುಮಾರ್‌ ಹಾಗೂ ಕುಲಪತಿ ಕೆ ಆರ್‌ ವೇಣುಗೋಪಾಲ್‌ ಅವರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಎರಡು ದಿನಗಳ ನಂತರ ಯೋಜನೆಯ ಜೊತೆಗೆ ಭೇಟಿಯಾಗುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

10 ಸಾವಿರ ಸರಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ10 ಸಾವಿರ ಸರಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ

ಬದುಕಿದ್ದಾಗ ಅನುಸರಿಸಿದ್ದು, ಸಾವಿನ ನಂತರವೂ ಮುಂದುವರೆಯಬೇಕು ಎನ್ನುವ ಗುರಿಯನ್ನು ದಿವಂಗತ ಅನಂತ ಕುಮಾರ್‌ ಅವರು ಹೊಂದಿದ್ದರು. ಅವರು ಹಾಕಿಕೊಟ್ಟ ಗಿಡ ನೆಡುವ ಯೋಜನೆ ಬಹಳ ಶ್ಲಾಘನೀಯ. ದಿವಂಗತ ಅನಂತ ಕುಮಾರ್‌ ಅವರು ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ 201 ರೂಪಾಯಿಗಳನ್ನು ನೀಡಿ ನೊಂದಾಯಿಸಿಕೊಂಡ ಸಾರ್ವಜನಿಕರು ಸೇರಿದಂತೆ, ವಿದ್ಯಾರ್ಥಿಗಳು, ಸ್ವಯಂ ಸೇವಕರು 201 ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.

201 ವಾರದಿಂದ ಗಿಡ ನೆಡುವ ಕಾರ್ಯ

201 ವಾರದಿಂದ ಗಿಡ ನೆಡುವ ಕಾರ್ಯ

ಕಳೆದ 201 ವಾರಗಳಿಂದ ಗಿಡ ನೆಡುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಡಾ ತೇಜಸ್ವಿನಿ ಅನಂತಕುಮಾರ್‌ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ಇಲಾಖೆ ಸಚಿವ ಆಗಿರುವ ವರೆಗೂ ಸರಕಾರ ಹಾಗೂ ಇಲಾಖೆಯಿಂದ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದರು.

ಪರಿಸರವನ್ನು ಉಳಿಸುವ ಅತಿಮುಖ್ಯ ವಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದಲ್ಲಿ ಕೆಲ ಕಡೆ ಬರ ಇದೆ ಕೆಲ ಕಡೆ ತೀವ್ರ ಪ್ರವಾಹ ಇದೆ. ಈ ರೀತಿಯ ಪ್ರಾಕೃತಿಕ ಹಾನಿ ಆಗುತ್ತಿರುವುದು ನಮ್ಮ ಸ್ವಯಂಕೃತ ಅಫರಾಧ, ಗಿಡಗಳನ್ನು ನೆಡುತ್ತಿಲ್ಲ. ಪರಿಸರ ಹಾಗೂ ಅರಣ್ಯ ನಾಶದಿಂದ ಆಗಿರುವ ಪರಿಣಾಮ ಇದಾಗಿದೆ. ಇಂತಹ ಸಂಧರ್ಭದಲ್ಲಿ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರೂ ರಾಜ್ಯದ ಎಲ್ಲಾ ಕಡೆ ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಕರೆ ನೀಡಿದರು. 201 ರೂಪಾಯಿಗಳನ್ನು ನೀಡುವ ಮೂಲಕ ಒಂದು ಗಿಡ ನೆಟ್ಟಿದ್ದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು.

ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ

ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ

ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ದಿವಂಗತ ಅನಂತಕುಮಾರ್‌ ಅವರು 2016 ಜನವರಿ 3 ರಂದು ಚಾಲನೆ ನೀಡಿದ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ನಗರವನ್ನು ಮತ್ತಷ್ಟು ಹಸರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಒಬ್ಬ ಮನುಷ್ಯನಿಗೆ ಒಂದು ವರ್ಷ ಉಸಿರಾಡಲು ಅಗತ್ಯವಿರುವ ಆಮ್ಲಜನಕ ಉತ್ಪಾದಿಸಲು 7 ಮರಗಳು ಬೇಕು. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರಕ್ಕೆ 7 ಕೋಟಿ ಹಾಗೂ 6 ಕೋಟಿ ಜನಸಂಖ್ಯೆಯ ಕರ್ನಾಟಕಕ್ಕೆ ಸುಮಾರು 42 ಕೋಟಿ ಮರಗಳ ಅಗತ್ಯವಿದೆ.

201 ನೇ ಹಸಿರು ಭಾನುವಾರದ ಪ್ರಯುಕ್ತ ಪೇಪರ್‌ ನ್ಯಾಪ್‌ ಕಿನ್‌ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು. ಅದಮ್ಯ ಚೇತನ ವತಿಯಿಂದ ಸುಮಾರು ಒಂದುವರೆ ಲಕ್ಷ ಮರಗಳನ್ನು ನೆಟ್ಟಿದ್ದು, ಇದು ಬಹಳ ಕಡಿಮೆ ಸಂಖ್ಯೆಯಾಗಿದ್ದು ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ನದಿಯ ಬಗ್ಗೆ ಅನಂತ್ ಕುಮಾರ್ ಕಾಳಜಿ

ನದಿಯ ಬಗ್ಗೆ ಅನಂತ್ ಕುಮಾರ್ ಕಾಳಜಿ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ವೃಷಭಾವತಿ ನದಿ ಹರಿಯುತ್ತಿದೆ. ವೃಷಭಾವತಿ ನದಿಯ ಬಗ್ಗೆ ದಿವಂಗತ ಅನಂತಕುಮಾರ್‌ ಅವರು, ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡಿದಾಗ, ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು ಇದರ ಶುದ್ದೀಕರಣಕ್ಕೆ ಅದಮ್ಯ ಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ. ಭಾನುವಾರ ಅಲ್ಲದೆ ಬೇರೆ ದಿನಗಳಲ್ಲೂ ಈ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.

ಬೆಂಗಳೂರು ವಿವಿ ಕುಲಪತಿ ಮಾತನಾಡಿ

ಬೆಂಗಳೂರು ವಿವಿ ಕುಲಪತಿ ಮಾತನಾಡಿ

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕೆ ಆರ್‌ ವೇಣುಗೋಪಾಲ್‌ ಮಾತನಾಡಿ, ದಿವಂಗತ ಅನಂತಕುಮಾರ್‌ ಅವರೊಂದಿಗಿನ ಒಡನಾಟ ಬಹಳ ಹಳೆಯದು. ಅನಂತಕುಮಾರ್‌ ಅವರ ಆಶಯದಂತೆ ಸತತವಾಗಿ 201 ವಾರ ಒಂದು ವಾರವೂ ಬಿಡದೆ ಗಿಡ ನೆಡುವ ಕಾರ್ಯಕ್ರಮ ಮಾಡುತ್ತಿರುವುದು ಸುಲಭದ ಕೆಲಸವಲ್ಲ. ನಗರದ ಅಭಿವೃದ್ದಿಯ ಬಗ್ಗೆ ಸಾಕಷ್ಟು ಕಾಳಜಿಯನ್ನು ಅವರು ತೋರಿಸುತ್ತಿದ್ದರು. ಇಂತಹ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿರುವ ಡಾ ತೇಜಸ್ವಿನಿ ಅನಂತಕುಮಾರ್‌ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮಾನ್ಯ ಸಚಿವರು ವಿಶ್ವವಿದ್ಯಾಲಯದ ಅಭಿವೃದ್ದಿಗೆ ಬೇಕಾಗಿರುವ ಕೆಲಸಗಳಿಗೆ ಅಧಿಕಾರಿಗಳಿಗೆ ಇಲ್ಲಿಂದಲೇ ಸೂಚನೆ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ಹರಿಯುತ್ತಿರುವ ವೃಷಭಾವತಿ ನೀರನ್ನು ಐವತ್ತು ವರ್ಷಗಳ ಹಿಂದೆ ಕುಡಿಯಲು ಉಪಯೋಗಿಸಲಾಗುತ್ತಿತ್ತು. ಆದರೆ, ಈಗ ಈ ನೀರು ಕೊಳಚೆ ನೀರಾಗಿದೆ. ಇದನ್ನು ಸಚಿವರ ಗಮನಕ್ಕೆ ತಂದ ಕೂಡಲೇ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಕರೆ ಮಾಡಿ ಇದಕ್ಕೆ ಒಂದು ಯೋಜನೆಯನ್ನು ರೂಪಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಸ್ವಿಯೇಜ್‌ ಸೆಪ್ಟಿಕ್‌ ಟ್ರೀಟ್‌ ಮೆಂಟ್‌ ಕಟ್ಟುವ ಮೂಲಕ ನೀರನ್ನು ಶುದ್ಧೀಕರಿಸಿ, ಶುದ್ದೀಕರಿಸಿದ ನೀರನ್ನು ಬಳಸಿಕೊಂಡು ಉಳಿದಿದ್ದನ್ನು ಮುಂದಕ್ಕೆ ಬಿಡುವ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂದಿನ ಒಂದು ತಿಂಗಳ ಒಳಗೆ ವೃಷಭಾವತಿ ನೀರನ್ನು ಶುದ್ದೀಕರಣದ ಯೋಜನೆಯ ಪ್ರಾರಂಭದ ಕಾರ್ಯಕ್ರಮ ಹಮ್ಮಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು

English summary
Mines & Geology Minister C.C Patil give assurance that River Vrishabhavathi will be revived Adamya Chetana Chairperson Dr Tejaswini Ananthkumar will help in this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X