ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಕ್ಷಗಾನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಸಂಸ್ಕೃತಿ ಸಚಿವ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಕರ್ನಾಟಕದ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನವನ್ನು ಇನ್ನು ಮುಂದೆ ಮೊಬೈಲ್ ಕಂಪ್ಯೂಟರಿನಲ್ಲಿ ಸುಲಭವಾಗಿ ನೋಡಬಹುದಾಗಿದೆ.

ಹೌದು, ಯಕ್ಷಗಾನದ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಘೋಷಿಸಿದ್ದಾರೆ. 'ಯಕ್ಷಗಾನದ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವುದಾಗಿ ಇಲಾಖೆ ವತಿಯಿಂದ ಯೋಜನೆ ಹಮ್ಮಿಕೊಳ್ಳಲಾಗಿದೆ' ಎಂದು ತಮ್ಮ ಟ್ವೀಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಹೊಸ ಯೋಜನೆಗೆ ಬೆಂಗಳೂರಿನಲ್ಲಿ ನಿನ್ನೆ ಅವರು ಚಾಲನೆ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಯಕ್ಷವಾಹಿನಿ ಸಂಸ್ಥೆಗಳು ಯೋಜನೆಗೆ ಕೈ ಜೋಡಿಸಿವೆ. ಈ ಯೋಜನೆಯಿಂದ ಆಸಕ್ತರು ಯಕ್ಷಗಾನದ ಪ್ರಸಂಗಗಳನ್ನು ಉತ್ತಮ ಗುಣಮಟ್ಟದ ವಿಡಿಯೋಗಳಲ್ಲಿ ನೋಡಬಹುದಾಗಿದೆ.

ಒಕ್ಕಲಿಗರಿಗೆ ಆದರ್ಶ ಯಾರಾಗಬೇಕು? ಪ್ರತಿಭಟನೆ ವಿರುದ್ಧ ಮಾತಾಡಿದ ಸಚಿವ ಸಿ.ಟಿ ರವಿಒಕ್ಕಲಿಗರಿಗೆ ಆದರ್ಶ ಯಾರಾಗಬೇಕು? ಪ್ರತಿಭಟನೆ ವಿರುದ್ಧ ಮಾತಾಡಿದ ಸಚಿವ ಸಿ.ಟಿ ರವಿ

Minister C T Ravi Inaugurate Yakshagana Digitalise Program

'ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಇನ್ನು ಮುಂದೆ ಡಿಜಿಟಲ್ ಮಾಧ್ಯಮದ ಮೂಲಕ ಮೊಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಬರಲಿದ್ದು, ಇದು ಒಂದು ಸಾಧನೆ ಎಂದು ಭಾವಿಸಿದ್ದೇನೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬ ಮಾತನ್ನು ನಾನು ಒಪ್ಪುತ್ತೇನೆ' ಎಂದು ಸಚಿವ ಸಿ ಟಿ ರವಿ ಅವರು ಟ್ವೀಟ್ ಮಾಡಿದ್ದಾರೆ.

English summary
Minister C T Ravi Inaugurate Yakshagana Digitalise Program. It will run by Yakshagana Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X