• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್-19 ಸೋಂಕಿತನೊಂದಿಗೆ ಸಂಪರ್ಕ; 6 ದಿನ ಕ್ವಾರೆಂಟೈನ್ ಗೆ ಕೌರವ!

|

ಬೆಂಗಳೂರು, ಜುಲೈ.13: ನೊವೆಲ್ ಕೊರೊನಾವೈರಸ್ ಸೋಂಕಿನ ಭೀತಿ ಮುಖ್ಯಮಂತ್ರಿ ಆದಿಯಾಗಿ ಸಚಿವರು, ಸಂಸದರು, ಶಾಸಕರೂ ಸೇರಿದಂತೆ ಎಲ್ಲ ರಾಜಕೀಯ ಮುಖಂಡರನ್ನೂ ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೂ ಕೊರೊನಾವೈರಸ್ ಸೋಂಕಿನ ಭೀತಿ ಎದುರಾಗಿದೆ. ಬೆಂಗಳೂರಿನ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಇರುವ ಸಚಿವರ ಸಂಬಂಧಿಕರೊಬ್ಬರಿಗೆ ಕೊವಿಡ್-19 ಸೋಂಕು ತಗಲಿರುವುದು ಆತಂಕವನ್ನು ಹುಟ್ಟಿಸಿದೆ.

ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ರಿಗೆ ಕೊರೊನಾವೈರಸ್

ಈ ಸಂಬಂಧ ಸ್ವತಃ ಸಚಿವರೇ ಟ್ವೀಟ್ ಮಾಡಿದ್ದಾರೆ. "ಬೆಂಗಳೂರಿನ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ, ನನ್ನ ಸಂಬಂಧಿಕರೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಅವರ ಜತೆ ಸಂಪರ್ಕದಲ್ಲಿ ಇದ್ದ, ನಾನು ಹಿರೇಕೆರೂರಿನ ಮನೆಯಲ್ಲಿ ಕ್ವಾರಂಟೈನ್ ಆಗುತ್ತಿದ್ದು, ನನ್ನ ಕುಂಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗದವರು ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್ ಆಗುತ್ತಿದ್ದಾರೆ" ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಖುದ್ದು ಭೇಟಿಗಿಂತ ದೂರವಾಣಿ ಕರೆ ಮಾಡಿ:

ಕೊರೋನಾ ಹಬ್ಬುತ್ತಿರುವುದರಿಂದ, ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ, ಹೊರಗೆ ಬರಲೇ ಬೇಡಿ, ಮನೆಯಿಂದ ಹೊರಗೆ ಬರಲೇ ಬೇಕಾದ ಸಂದರ್ಭವಿದ್ದಲ್ಲಿ, ಆಗಾಗ ಕೈ ತೊಳೆಯುತ್ತಾ, ಸ್ಯಾನಿಟೈಜರ್ ಬಳಸುತ್ತಾ, ಅಂತರ ಕಾಯ್ದುಕೊಂಡು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಿ. ಖುದ್ದಾಗಿ ತಮ್ಮನ್ನು ಭೇಟಿ ಮಾಡುವ ಬದಲು ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.

English summary
Agriculture Minister B C Patil Primary Contact With Covid-19 Infected Person; Decided To 6 Days Self Quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X