ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಬೆಚ್ಚಗಿರಿ ಚಳಿ ಇನ್ನೂ ಹೆಚ್ಚಾಗಲಿದೆ!

|
Google Oneindia Kannada News

ಬೆಂಗಳೂರು, ಜನವರಿ 30 : ಜನವರಿ ಮಾಸಾಂತ್ಯಕ್ಕೆ ಕಾಲಿಡುತ್ತಿದ್ದಂತೆಯೇ ಬೆಂಗಳೂರಿನ ಹವಾಮಾನದಲ್ಲಿ ಕೊಂಚ ಬದಲಾವಣೆ ಗೋಚರಿಸಲಾರಂಭಿಸಿದೆ. ಕಳೆದೊಂದು ವಾರದಿಂದ 13.50 ಡಿಗ್ರಿ ಸೆಲ್ಸಿಯಸ್ ನಿಂದ 14.50 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ಉಷ್ಣಾಂಶ ಮುಂದಿನ 48 ಗಂಟೆಗಳಲ್ಲಿ 13 ಕ್ಕೂ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇನ್ನೂ 48 ಗಂಟೆಗಳ ಕಾಲ ಗರಿಷ್ಠ29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 13 ರಿಂದ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರದಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 29 ಡಿಗ್ರಿ ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಹಾಗೂ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 28 ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇನ್ನೂ ಒಂದು ವಾರ ರಾಜ್ಯದ ಜನರನ್ನು ಚಳಿ ಬಿಡದು!ಇನ್ನೂ ಒಂದು ವಾರ ರಾಜ್ಯದ ಜನರನ್ನು ಚಳಿ ಬಿಡದು!

Minimum temperature increases in Bengaluru

ಇನ್ನು ರಾಜ್ಯಾದ್ಯಂತ ಗಮನಿಸುವುದಾದರೆ ಬೀದರ್ ನಲ್ಲಿ ಜನವರಿ 20 ಕ್ಕೆ 9.4 ಕನಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೂ ಒಂದು ವಾರಗಳ ಕಾಲ ಮೈ ಕೊರೆಯುವ ಚಳಿ ಹೀಗೆಯೇ ಮುಂದುವರೆಯಲಿದೆ.

English summary
As January come to end, minimum temperature is increasing 14 degree celsius to 16.5 degree celsius, department of meteorological report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X