ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಜರ್ಮನಿಯಿಂದ ಮಿಲಿಯನ್ ಡಾಲರ್ ನೆರವು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 27: ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಒಂದು ಮಿಲಿಯನ್ ಡಾಲರ್ಸ್ ಟೆಕ್ನಿಕಲ್ ಅಸಿಸ್ಟೆಂಟ್ಸ್ ನೀಡಲು ಜರ್ಮನ್ ದೇಶ ಒಪ್ಪಿದ್ದು, ಈ ಸಂಬಂಧ ಶೀಘ್ರವೇ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಚರ್ಚಿಸಿದರು.

ಜರ್ಮನ್ ಪ್ರತಿನಿಧಿಗಳಾದ ಮುನ್ಸಿಪಾಲ್ ಫಿನಾನ್ಸ್ ಎಕ್ಸ್‌ಪರ್ಟ್ ಜರ್ಗನ್ ಬೌವ್ಮಾನ್ನ್, ಸಿ40 ಸಿಟಿ ಮುಖ್ಯಸ್ಥ ಜೇಮ್ಸ್ ಅಲೆಗ್ಸಾಂಡರ್ ಸೋಮವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ಸಭೆ ನಡೆಸಿದರು. ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಡೀಸೆಲ್ ಬಸ್‌ ಗಳ ಬದಲು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದರೆ ಬಹುತೇಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ.

ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು! ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು!

ಎಲೆಕ್ಟ್ರಿಕ್ ಬಸ್‌ಗಳ ದರ ಹೆಚ್ಚಿರಬಹುದು. ಆದರೆ, 1 ಮಿಲಿಯನ್ ಟೆಕ್ನಿಕಲ್ ಅಸಿಸ್ಟೆನ್ಸ್ ನೀಡಲು ಸಿದ್ಧವಿರುವುದಾಗಿ ಜರ್ಮನ್ ಪ್ರತಿನಿಧಿಗಳು ತಿಳಿಸಿದರು. ಇದಕ್ಕೆ ಒಪ್ಪಿದ ಪರಮೇಶ್ವರ್ ಅವರು, ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ, ಎಂಒಯು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

Million dollar technical assistance from Germany for electric bus project

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಒಟ್ಟು 150 ಎಲೆಕ್ಟ್ರಿಕ್ ಬಸ್‌ಗಳನ್ನು ದತ್ತುಪಡೆಯಲು ನಿರ್ಧರಿಸಿತ್ತು.2014ರಲ್ಲೇ ಮೂರು ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರ ನಡೆದಿತ್ತು. ಫಾಸ್ಟರ್ ಅಡಾಪ್ಷನ‌ ಅಂಡ್ ಮಾನ್ಯುಫಾಕ್ಚರಿಂಗ್ ಆಫ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಅನುದಾನದಡಿ ಪ್ರತಿ ಎಲೆಕ್ಟ್ರಿಕ್ ಬಸ್‌ಗೆ 1 ಕೋಟಿ ರೂ. ವರೆಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿತ್ತು.

ಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳು ಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳು

Million dollar technical assistance from Germany for electric bus project

ಆದರೆ, ಹೊಸ ಬಸ್‌ ಖರೀದಿಗೆ 2-3 ಕೋಟಿ ರೂ. ವೆಚ್ಚವಾಗುವ ಕಾರಣದಿಂದ ಗುತ್ತಿಗೆ ಆಧಾರದಲ್ಲಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ಬಿಎಂಟಿಸಿ ನಿರ್ಧರಿಸಿತ್ತು. ಅದರಂತೆ ಆಹ್ವಾನಿಸಿದ್ದ ಟೆಂಡರ್ ‌ನಲ್ಲಿ ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್ ಕಂಪನಿ ಕನಿಷ್ಠ ಬಿಡ್ ಸಲ್ಲಿಸಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣವಾದ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಬಸ್ ಪಡೆದರೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ತಿಳಿಸಿತ್ತು. ಇದೀಗ ಜರ್ಮನಿ ನೆರವು ನೀಡಲು ಮುಂದಾಗಿದೆ.

English summary
Deputy chief minister Dr.G. Parameshwara said that Germany has come forward to provide one million dollar technical assistance for electric bus project and memorandum of understanding will be signed soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X