ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ನಾಲ್ಕುವರೆ ಲಕ್ಷ ನರ್ಸ್‌ಗಳಿಗೆ ಆನ್‌ಲೈನ್‌ ತರಬೇತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 7: ಕೊರೋನಾ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡುವ ಉದ್ದೇಶದಿಂದ ಬಿಬಿಎಂಪಿ ವಾರ್‌ ರೂಮ್ ಸ್ಥಾಪಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ವಾರ್ ರೂಂನಲ್ಲಿ ಬಿಬಿಎಂಪಿ ಸ್ಥಾಪಿಸಿರುವ ಡ್ಯಾಶ್‌ಬೋರ್ಡ್ ಗೆ ಅಧಿಕೃತ ಚಾಲನೆ ನೀಡಿದರು.

ವಲಸೆ ಕಾರ್ಮಿಕರ ನೆರವಿಗೆ ಸರ್ಕಾರ ಧಾವಿಸಬೇಕು: ಕುಮಾರಸ್ವಾಮಿ ವಲಸೆ ಕಾರ್ಮಿಕರ ನೆರವಿಗೆ ಸರ್ಕಾರ ಧಾವಿಸಬೇಕು: ಕುಮಾರಸ್ವಾಮಿ

ಈ ವೇಳೆ ಮಾತನಾಡಿದ ಕೆ ಸುಧಾಕರ್ ಅವರು, ವಾರ್‌ ರೂಮ್‌ನಲ್ಲಿ ಸ್ಥಾಪಿಸಲಾಗಿರುವ ಡ್ಯಾಶ್‌ ಬೋರ್ಡ್‌ನಿಂದ ಕೋವಿಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕುಳಿತಲ್ಲೇ ತಿಳಿಯಬಹುದಾಗಿದೆ. ಎಲ್ಲ ಮುಂದುವರೆದ ರಾಷ್ಟ್ರಗಳು ಕೋವಿಡ್ ಮಾಹಿತಿ ಸಂಗ್ರಹಕ್ಕೆ ಇದೇ ವ್ಯವಸ್ಥೆಯನ್ನು ಅನುಸರಿಸಿವೆ ಎಂದರು.

Midecal Minister K Sudhakar Inugrates BBMP War Room Dash Bord

ರಾಜ್ಯದಲ್ಲಿ ಇರುವ ನಾಲ್ಕುವರೆ ಲಕ್ಷ ನರ್ಸ್‌ಗಳಿಗೆ ಆನ್‌ಲೈನ್‌ ತರಬೇತಿ ನೀಡಲು ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿರುವ ವಾರ್‌ರೂಮ್‌ ಮೂಲಕವೇ ಇದನ್ನು ನಿಭಾಯಿಸಲಾಗುತ್ತದೆ. ರಾಜ್ಯದಲ್ಲಿ 175 ಜನರಿಗೆ ಸೋಂಕು ತಗುಲಿದೆ. ಸೋಂಕು ಹರಡುವುದನ್ನು ತಡೆಯುವುದೇ ನಮ್ಮ ಪ್ರಥಮ ಆದ್ಯತೆ ಇದೆ ಎಂದು ಹೇಳಿದರು.

ಈ ವೇಳೆ ಪಾಲಿಕೆ ಆಯುಕ್ತು ಬಿ.ಹೆಚ್.ಅನಿಲ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Midecal Minister K Sudhakar Inugrates BBMP War Room Dash Bord at bbmp central office on tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X